ವಿಶ್ವಕರ್ಮ ಜನಾಂಗ ಉನ್ನತ ಶಿಕ್ಷಣಕ್ಕೆ ಒತ್ತು ನೀಡಲಿ: ಸಚಿವ ಸುಧಾಕರ್‌

By Govindaraj SFirst Published Sep 19, 2022, 12:28 AM IST
Highlights

ಎಲ್ಲ ಸಾಮ್ರಾಜ್ಯಗಳ, ಎಲ್ಲ ಜಗತ್ತುಗಳ ನಿರ್ಮಾಣದ ಹಿಂದೆ ವಿಶ್ವಕರ್ಮ ಸಮುದಾಯದವರ ಕೈಚಳಕ, ಪರಿಶ್ರಮವಿದೆ. ಆಧುನಿಕ ಜಗತ್ತಿನ ಸರ್ವಶ್ರೇಷ್ಠ ವಿನ್ಯಾಸಗಾರರು ಹಾಗೂ ಅಭಿಯಂತರರು ಎಂದರೆ ಅದು ವಿಶ್ವಕರ್ಮರು ಮಾತ್ರ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು. 

ಚಿಕ್ಕಬಳ್ಳಾಪುರ (ಸೆ.19): ಎಲ್ಲ ಸಾಮ್ರಾಜ್ಯಗಳ, ಎಲ್ಲ ಜಗತ್ತುಗಳ ನಿರ್ಮಾಣದ ಹಿಂದೆ ವಿಶ್ವಕರ್ಮ ಸಮುದಾಯದವರ ಕೈಚಳಕ, ಪರಿಶ್ರಮವಿದೆ. ಆಧುನಿಕ ಜಗತ್ತಿನ ಸರ್ವಶ್ರೇಷ್ಠ ವಿನ್ಯಾಸಗಾರರು ಹಾಗೂ ಅಭಿಯಂತರರು ಎಂದರೆ ಅದು ವಿಶ್ವಕರ್ಮರು ಮಾತ್ರ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್‌ ತಿಳಿಸಿದರು. ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿಶ್ವಕರ್ಮ ಉತ್ಸವ ಸಮಿತಿ, ವಿಶ್ವಕರ್ಮ ಮಹಾಸಭಾ, ಕಾಳಿಕಾಂಬ ಕ್ಷೇಮಾಭಿವೃದ್ದಿ ಮಹಿಳಾ ಸಂಘ ಚಿಕ್ಕಬಳ್ಳಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಉನ್ನತ ಶಿಕ್ಷಣಕ್ಕೆ ಒತ್ತು ನೀಡಲಿ: ಅಜಂತ, ಎಲ್ಲೋರ, ಬೇಲೂರು, ಹಳೇಬೀಡು ಮತ್ತು ವಿಜಯನಗರಗಳಲ್ಲಿನ ಇವರ ಶಿಲ್ಪಕಲೆಗೆ ಮನಸೋಲದವರೇ ಇಲ್ಲ. ವಿಜಯನಗರದಲ್ಲಿ ಸಪ್ತಸ್ವರಗಳು ಕೇಳುವಂತಹ ಕಂಬವನ್ನು ನಿರ್ಮಾಣ ಮಾಡಿರುವಂತದ್ದು ಈ ಸಮುದಾಯದ ವೃತ್ತಿ ನೈಪುಣ್ಯತೆಗೆ ಸಾಕ್ಷಿಭೂತವಾಗಿದೆ. ಈ ವೃತ್ತಿಯಲ್ಲಿರುವವರಿಗೆ ಇಂಥ ವೃತ್ತಿ ನೈಪುಣ್ಯತೆ ಸಾವಿರ ಜನ್ಮಗಳ ಪುಣ್ಯದ ಫಲವಾಗಿ ದೊರಕಿರುವಂತದ್ದು ಎಂದರೆ ತಪ್ಪಾಗಲಾರದು. ಇಂತಹ ಕಲೆ, ವೃತ್ತಿ ನೈಪುಣ್ಯತೆಯನ್ನು ಮೈಗೂಡಿಸಿಕೊಂಡಿರುವ ತಾವೆಲ್ಲರೂ ಉನ್ನತ ಶಿಕ್ಷಣಕ್ಕೆ ಒತ್ತು ನೀಡಿದ್ದಲ್ಲಿ ಈ ಸಮುದಾಯದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.

ಸಿಪಿಎಂ ಸಮಾವೇಶ: ಕೇರಳ ಸಿಎಂ ಪಿಣರಾಯಿ ವಿಜಯನ್‌ ಇಂದು ರಾಜ್ಯಕ್ಕೆ ಭೇಟಿ

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ಸಮುದಾಯದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಿ ಸಚಿವರು ಸನ್ಮಾನಿಸಿದರು. ಡೀಸಿ ಎನ್‌.ಎಂ. ನಾಗರಾಜ್‌, ಜಿಪಂ ಸಿಇಒ ಪಿ.ಶಿವಶಂಕರ್‌, ನಗರಸಭೆ ಅಧ್ಯಕ್ಷ ಆನಂದ್‌ ರೆಡ್ಡಿ ಬಾಬು, ಉಪ ವಿಭಾಗಾಧಿಕಾರಿ ಸಂತೋಷ್‌ ಕುಮಾರ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ರಾಜೇಶ್ವರಿ, ನಗರಸಭೆ ಸದಸ್ಯರಾದ ಮಂಜುನಾಥಾಚಾರಿ, ಸುಬ್ರಹ್ಮಣ್ಯಾಚಾರಿ, ಯತೀಶ್‌, ಗಜೇಂದ್ರ, ಸಮುದಾಯದ ಮುಖಂಡರಾದ ಸಿದ್ದಲಿಂಗಾಚಾರಿ, ನಂಜುಂಡಾಚಾರಿ, ರಾಮಕೃಷ್ಣಾಚಾರಿ, ನವೀನ್‌ ಕುಮಾರ್‌, ಬ್ರಹ್ಮಚಾರಿ, ಕೃಷ್ಣಚಾರಿ, ಸುಬ್ಬಲಕ್ಷ್ಮಮ್ಮ, ಜಯಮ್ಮ ಇದ್ದರು.

ವಿಶ್ವಕರ್ಮ ಭವನಕ್ಕೆ ಜಾಗ: ಒಂದು ತಿಂಗಳ ಒಳಗಾಗಿ ವಿಶ್ವಕರ್ಮ ಸಮುದಾಯದ ಕಲ್ಯಾಣ ಕಾರ್ಯಗಳಿಗೆ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ಅನುಕೂಲವಾಗಲು ಜಿಲ್ಲಾ ಕೇಂದ್ರದಲ್ಲಿ ಅಗತ್ಯ ಜಮೀನು ಮಂಜೂರು ಮಾಡಲು ಜಿಲ್ಲಾಧಿಕಾರಿಗಳಿಗೆ ಸಚಿವರು ವೇದಿಕೆಯಲ್ಲೇ ರೋಗ್ಯ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.

ಸರ್ಕಾರಿ ಶಾಲೆಗಳಲ್ಲಿ ಎರಡಂಕಿ ದಾಟದ ಮಕ್ಕಳ ಸಂಖ್ಯೆ: ವರ್ಷದಿಂದ ವರ್ಷಕ್ಕೆ ಇಳಿಕೆ..!

ಹೈಟೆಕ್‌ ಆಸ್ಪತ್ರೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಬದ್ಧ: ಉತ್ತರ ಕನ್ನಡ ಜಿಲ್ಲೆಯಲ್ಲಿ ಹೈಟೆಕ್‌ ಆಸ್ಪತ್ರೆ ನಿರ್ಮಾಣ ಮಾಡಲು ಸರ್ಕಾರ ಬದ್ಧವಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಹಮತಿಯೂ ಇದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ. ಆರ್ಥಿಕ ಇಲಾಖೆ ಯಾವುದೇ ಪ್ರಸ್ತಾವವನ್ನು ಅಳೆದು ತೂಗಿ ತೀರ್ಮಾನ ಕೈಗೊಳ್ಳುತ್ತದೆ. ಇದರ ಹೊರತಾಗಿಯೂ ಜನರ ಕೂಗಿಗೆ, ಬೇಡಿಕೆಗನುಗುಣವಾಗಿ ಮುಖ್ಯಮಂತ್ರಿಗಳು ಸಕಾರಾತ್ಮಕವಾದ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಆರ್ಥಿಕ ಇಲಾಖೆಗೆ ಮನವರಿಕೆ ಮಾಡಿಕೊಡಲಾಗುವುದು. ಆರ್ಥಿಕ ಇಲಾಖೆಯಿಂದ ಪ್ರಸ್ತಾವ ಮರಳಿದ ಬಳಿಕ ಅದನ್ನು ಮುಖ್ಯಮಂತ್ರಿಗೆ ಕಳುಹಿಸಲಾಗುವುದು ಎಂದರು.

click me!