
ಯಲ್ಲಾಪುರ (ನ.10) : ಆರೋಗ್ಯ ಮತ್ತು ಆರಕ್ಷಕ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುವವರ ಮಾನಸಿಕತೆ ಸಮಚಿತ್ತದಿಂದ ಕೂಡಿದ್ದರೆ ಮಾತ್ರ ಸಾರ್ವಜನಿಕರಿಗೆ ಸಮರ್ಪಕ ಸೇವೆ ದೊರೆಯಲು ಸಾಧ್ಯ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ರೈತರ ಸಮಗ್ರ ಅಭಿವೃದ್ಧಿಗೆ ಸಹಕಾರ: ಸಚಿವ ಶಿವರಾಮ್ ಹೆಬ್ಬಾರ್
ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆ ಆವಾರದಲ್ಲಿ .30 ಲಕ್ಷ ವೆಚ್ಚದಲ್ಲಿ ನಿರ್ಮಿಸಲಿರುವ 6 ಕೆ.ಎಲ್ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಟ್ಯಾಂಕ್; .20 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುವ ವೈದ್ಯಾಧಿಕಾರಿಗಳ ವಸತಿ ಗೃಹ ದುರಸ್ತಿ ಹಾಗೂ ನವೀಕರಣ; .85 ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಿರುವ ಸಿಬ್ಬಂದಿ ವಸತಿ ಗೃಹ ದುರಸ್ತಿ ಹಾಗೂ ನವೀಕರಣ ಮತ್ತು .55 ಲಕ್ಷÜ ವೆಚ್ಚದಲ್ಲಿ ನಿರ್ಮಿಸಲಾಗುವ ಬ್ಲಾಕ್ ಲೆವೆಲ್ ಪಬ್ಲಿಕ್ ಹೆಲ್ತ್ ಯುನಿಟ್‌ಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.
ಆರೋಗ್ಯ ಸೌಕರ್ಯಗಳಿಗೆ ಸರ್ಕಾರ ಆದ್ಯತೆ ನೀಡಿದ್ದು, ಇಂದು .1.90 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದರು.
ಶಿಕ್ಷಕರು ಏನಾದರೂ ತಪ್ಪು ಮಾಡಿದರೆ ಆ ವಿದ್ಯಾರ್ಥಿ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಬಹುದು. ಆದರೆ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಸಿಬ್ಬಂದಿ ಎಚ್ಚರ ತಪ್ಪಿದರೆ, ರೋಗಿಯ ಪ್ರಾಣಕ್ಕೇ ಕುತ್ತು ಸಂಭವಿಸಬಹುದು ಎಂದು ಕಿವಿಮಾತು ಹೇಳಿದರು.
ಯಲ್ಲಾಪುರದ ಈ ಆಸ್ಪತ್ರೆಯ ಸಂಪೂರ್ಣ ಅಭಿವೃದ್ಧಿಗಾಗಿ .16.5 ಕೋಟಿ ವೆಚ್ಚದಲ್ಲಿ ಸಂಪೂರ್ಣ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇದಕ್ಕೆ ನಮ್ಮ ಕುಟುಂಬದ ಸಂಸ್ಥೆಯ ಮತ್ತು ಬಾಲು ನಾಯ್ಕರ ಸಹಕಾರ ಪಡೆದು ಹೆಚ್ಚಿನ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಹೇಗಾದರೂ ಅಭಿವೃದ್ಧಿಗಾಗಿ ಅನುದಾನ ತರಬಹುದು. ಆದರೆ ಅದರಿಂದ ನಡೆಸುವ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು ಎಂಬುದನ್ನು ಅಧಿಕಾರಿಗಳು ಮನಗಾಣಬೇಕು. ಈ ಕುರಿತು ಅಧಿಕಾರಿಗಳು ಗಮನಹರಿಸುವಂತೆ ತಾಕೀತು ಮಾಡಿದರು.
ಪಪಂ ಅಧ್ಯಕ್ಷೆ ಸುನಂದಾ ದಾಸ್ ಮಾತನಾಡಿ, ಪಟ್ಟಣ ವ್ಯಾಪ್ತಿಯಲ್ಲಿ ನಿರೀಕ್ಷೆ ಮೀರಿ ಅಭಿವೃದ್ಧಿ ನಡೆಯುತ್ತಿದೆ. ‘ಹೆಬ್ಬಾರ ನಗರ’ದಲ್ಲಿ ಬಡವರಿಗಾಗಿ 600 ಮನೆಗಳು ನಿರ್ಮಾಣವಾಗುತ್ತಿವೆ. ಇವುಗಳ ಜೊತೆ ಪಪಂ ವ್ಯಾಪ್ತಿಯಲ್ಲಿ .4 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗುತ್ತಿವೆ ಎಂದರು.
ಪಟ್ಟಣದಲ್ಲಿ ಸಾವಿರಾರು ಮಹಿಳೆಯರು ಬಡತನದ ಕಷ್ಟದಲ್ಲಿದ್ದಾರೆ. ಅವರಿಗೆ ಮಹಿಳಾ ಉದ್ಯಮ ಸ್ಥಾಪಿಸಿ ಬದುಕಿಗೆ ಆಸರೆಯಾಗುವಂತೆ ಕ್ರಮ ಕೈಗೊಳ್ಳಲು ಸಚಿವರಲ್ಲಿ ವಿನಂತಿಸಿದರು. ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ್ ಸಾಂದರ್ಭಿಕ ಮಾತನಾಡಿದರು. ಡಾ.ಸೌಮ್ಯಾ ಕೆ.ವಿ, ಸ್ವಾಗತಿಸಿದರು. ಪತ್ರಕರ್ತ ಕೇಬಲ್ ನಾಗೇಶ ನಿರ್ವಹಿಸಿ, ವಂದಿಸಿದರು.
ಸುಳ್ಳು ಹೇಳಿ ರಾಜಕಾರಣ ಮಾಡಲಾಗಲ್ಲ; ಸಚಿವ ಹೆಬ್ಬಾರ
ವೇದಿಕೆಯಲ್ಲಿ ತಾಲೂಕಾ ವೈದ್ಯಾಧಿಕಾರಿ ಡಾ.ನರೇಂದ್ರ ಪವಾರ್, ಮಕ್ಕಳ ತಜ್ಞ ಡಾ.ಶ್ರೀಶೈಲ ಮಾದಣ್ಣನವರ್, ಪ್ರಸೂತಿ ತಜ್ಞ ಡಾ.ದೀಪಕ್ ಭಟ್ಟ, ಬಿಜೆಪಿ ಮಂಡಲಾಧ್ಯಕ್ಷ ಗೋಪಾಲಕೃಷ್ಟಗಾಂವ್ಕರ್, ಸಾಮಾಜಿಕ ಕಾರ್ಯಕರ್ತ ವಿಜಯ ಮಿರಾಶಿ, ಪಪಂ ಸದಸ್ಯ ಸತೀಶ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.