Uttara Kannada: ಸೌಲಭ್ಯ ಒದಗಿಸುವಲ್ಲಿ ಸರ್ಕಾರ ತಾತ್ಸಾರ: ಆರೋಪ

Published : Nov 10, 2022, 10:24 AM IST
Uttara Kannada: ಸೌಲಭ್ಯ ಒದಗಿಸುವಲ್ಲಿ ಸರ್ಕಾರ ತಾತ್ಸಾರ: ಆರೋಪ

ಸಾರಾಂಶ

ಸೌಲಭ್ಯ ಒದಗಿಸುವಲ್ಲಿ ಸರ್ಕಾರ ತಾತ್ಸಾರ: ಆರೋಪ ಮಂಜಗುಣಿಯಲ್ಲಿ ಬೃಹತ್‌ ಹಳ್ಳಿ ಕಡೆ ನಡಿಗೆ ಕಾರ್ಯಕ್ರಮ 10 ಕಿ.ಮೀ. ಪಾದಯಾತ್ರೆ

ಶಿರಸಿ (ನ.10) : ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳಾದರೂ ಇಲ್ಲಿನ ಸ್ಥಳೀಯರಿಗೆ ಮೂಲಭೂತ ಸೌಕರ್ಯಗಳಾದ ರಸ್ತೆ, ಕಾಲುಸಂಕ, ಕುಡಿಯುವ ನೀರು, ವಸತಿ ಯೋಜನೆ, ಅರಣ್ಯ ಭೂಮಿ ಹಕ್ಕು ತೀವ್ರ ಸಮಸ್ಯೆ ಬಗೆಹರಿಸಲು ಸರ್ಕಾರಗಳು ತಾತ್ಸಾರ ಮಾಡುತ್ತಿವೆ ಎಂದು ಅರಣ್ಯ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ರವೀಂದ್ರ ನಾಯ್ಕ ಆರೋಪಿಸಿದರು.

ಕರಾವಳಿಗರಿಗೆ ಸಂತಸದ ಸುದ್ದಿ ನೀಡಿದ ಸಚಿವ ಕೋಟ..!

ಮಂಜಗುಣಿ ಗ್ರಾಪಂ ವ್ಯಾಪ್ತಿಯಲ್ಲಿ ಭೂಮಿ ಹಕ್ಕು ಮತ್ತು ಮೂಲಭೂತ ಸೌಕರ್ಯಕ್ಕಾಗಿ ಹಳ್ಳಿ ಕಡೆ ನಡಿಗೆ ಪ್ರಯುಕ್ತ 10 ಕಿ.ಮೀ. ಪಾದಯಾತ್ರೆ ಜರುಗಿದ ನಂತರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಚುನಾವಣೆಯಲ್ಲಿ ಹಿಂದೂ ಭಾವನೆ ಕೆರಳಿಸಿ ಮತ ಪಡೆಯುವರು ಚುನಾವಣೆ ಫಲಿತಾಂಶದ ನಂತರ ಹಿಂದೂ ಮತದಾರರ ಪ್ರದೇಶದ ಮೂಲಭೂತ ಸೌಕರ್ಯದ ಅಭಿವೃದ್ಧಿಗೆ ಆಸಕ್ತಿ ತೋರಿಸದೇ ಇರುವುದು ಖೇದಕರ. ಇದಕ್ಕೆ ಶಿರಸಿ ತಾಲೂಕಾ ಪಶ್ಚಿಮ ಭಾಗದ ಗ್ರಾಮಸ್ಥರೇ ಸಾಕ್ಷಿ. ನಾವೆಲ್ಲ ಹಿಂದೂ. ನಾವೆಲ್ಲ ಒಂದು ಎಂಬ ಭಾವನಾತ್ಮಕ ಭಾವನೆ ತುಂಬಿ, ರಾಜಕೀಯ ಭವಿಷ್ಯ ನಿರ್ಮಿಸಿಕೊಳ್ಳುವ ಇಂದಿನ ರಾಜಕೀಯ ತಂತ್ರಗಾರಿಕೆಯಲ್ಲಿ ಅಭಿವೃದ್ಧಿಯಲ್ಲಿ ತಾರತಮ್ಯ ಕಂಡುಬರುತ್ತಿದೆ ಎಂದರು.

ಇಂದಿನ ರಾಜಕೀಯ ಚಿತ್ರಣದಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದ ಹಿಂದೂಗಳ ಮೂಗಿಗೆ ತುಪ್ಪ

ಸವರುವ ಕಾರ್ಯ ಜರುಗುತ್ತಿರುವುದು ಖೇದಕರ ಎಂದು ಅಧ್ಯಕ್ಷ ರವೀಂದ್ರ ಪ್ರತಿಕ್ರಿಯಿಸಿದರು.

ಗ್ರಾಪಂ ಆವರಣದಲ್ಲಿ ಜರುಗಿದ ಸಭೆಯಲ್ಲಿ ಹೋರಾಟಗಾರರಾದ ಪ್ರವೀಣ್‌ ಗೌಡ ತಪ್ಪಾರ, ದೇವರಾಜ ಮರಾಠಿ, ಮುಟ್ಟು ಮರಾಠಿ ನೆಕ್ಕರಕಿ, ನಾರಾಯಣ ಮಡಿವಾಳ, ವೆಂಕಟ ಮರಾಠಿ ಸವಲೆ, ಕಿರಣ ಮರಾಠಿ ದೇವನಳ್ಳಿ, ಕೃಷ್ಣ ಮುಂಡಗಾರ, ರಾಮಚಂದ್ರ ಮರಾಠಿ, ನಾಗು ಗೌಡ ಮುಂತಾದವರಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು.

ಪಂಚಾಯತ ವ್ಯಾಪ್ತಿಯಲ್ಲಿ ಅಭಿವೃದ್ಧಿಗೆ ಪೂರಕವಾದ ಯೋಜನೆ ಜಾರಿಗೆ ಬಾರದೇ ಇರುವುದು, ಪ್ರವಾಸೋಧ್ಯಮ ದಿಶೆಯಲ್ಲಿ ವೆಂಕಟರಮಣ ದೇವಾಲಯ ಅಭಿವೃದ್ಧಿಗೆ ಸಹಕರಿಸದೇ ಸಂಪರ್ಕ ಕೊರತೆ, ಶಾಲಾಭಿವೃದ್ಧಿಗೆ ಆದ್ಯತೆ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.

ಉತ್ತರ ಕನ್ನಡ: ಎಸ್‌ಪಿ ವರ್ಗಾವಣೆ ವಿರೋಧಿಸಿ ಅರೆ ಬೆತ್ತಲೆ ಪ್ರತಿಭಟನೆ

ಹಳ್ಳಿ ಕಡೆ ನಡಿಗೆ ಕಾರ್ಯಕ್ರಮದ ನೇತೃತ್ವವನ್ನು ಧುರೀಣರಾದ ಕೃಷ್ಣ ಮರಾಠಿ ಸವಲೆ, ಮೀಟು ಚಂದು ನೆಕ್ಕರಿಕೆ, ರಾಮಚಂದ್ರ ತಿಮ್ಮ, ಭಾಸ್ಕರ ದುಗ್ಗು ಸವಲೆ, ಅನಂತ ಕಲಗಾರ, ವೆಂಕಟರಮಣ ಭಂಡಾರಿ ಬಕ್ಕಳಗದ್ದೆ, ಪರಶುರಾಮ ಭಂಡಾರಿ, ಬಾಲಚಂದ್ರ ನೆಕ್ಕರಿಕೆ ಮುಂತಾದವರು ವಹಿಸಿದ್ದರು. ಕಾರ್ಯಕ್ರಮದ ಪ್ರವೀಣ್‌ ಗೌಡ ತೆಪ್ಪಾರ ನಿರ್ವಹಿಸಿದರು. ಪಿಡಿಒ ಸೌಮ್ಯ ಹೆಗಡೆ, ಗ್ರಾಪಂ ಅಧ್ಯಕ್ಷೆ ವೀಣಾ ಚಲವಾದಿ ಮನವಿ ಸ್ವೀಕರಿಸಿದರು.

PREV
Read more Articles on
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ