ಕಾವೇರಿ ನೀರು ಬಿಡುಗಡೆಗೆ ಸೂಚಿಸಿರುವ ಸಿಡಬ್ಲ್ಯೂಆರ್‌ಸಿ ತೀರ್ಪಿನ ಬಿಕ್ಕಟ್ಟು ನಿವಾರಣೆಗೆ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕೆಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮನವಿ ಮಾಡಿದ್ದಾರೆ.
ಮಂಡ್ಯ (ಜು.13): ಕಾವೇರಿ ನೀರು ಬಿಡುಗಡೆಗೆ ಸೂಚಿಸಿರುವ ಸಿಡಬ್ಲ್ಯೂಆರ್‌ಸಿ ತೀರ್ಪಿನ ಬಿಕ್ಕಟ್ಟು ನಿವಾರಣೆಗೆ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು. ಈ ಸಂಬಂಧ ಮಂಡ್ಯ ಜಿಲ್ಲೆಯ ಸಂಸದರು ಹಾಗೂ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ನೇತೃತ್ವ ವಹಿಸಬೇಕೆಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮನವಿ ಮಾಡಿದ್ದಾರೆ. ಈ ಸಂಬಂಧ ಪತ್ರಿಕೆಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಸಚಿವರು, ಕಾವೇರಿ ಜಲಾನಯನ ಪ್ರದೇಶದಲ್ಲಿ ಅಗತ್ಯ ಪ್ರಮಾಣದ ಮಳೆಯಾಗದ ಹಿನ್ನೆಲೆಯಲ್ಲಿ ಜಲಾಶಯಗಳಲ್ಲಿ ನೀರಿನ ಲಭ್ಯತೆ ಕ್ಷೀಣವಾಗಿದೆ.
ಳೆದ ಲೋಕಸಭಾ ಚುನಾವಣೆ ವೇಳೆ ಕಾವೇರಿ ಸಮಸ್ಯೆ ಬಗೆಹರಿಸಲು ತಮಗೆ ಶಕ್ತಿ ತುಂಬುವಂತೆ ಕುಮಾರಸ್ವಾಮಿ ಅವರ ಮತದಾರರಲ್ಲಿ ಮನವಿ ಮಾಡಿದ್ದರು. ಅವರ ಮನವಿಗೆ ಪುರಸ್ಕರಿಸಿರುವ ಜಿಲ್ಲೆ ಹಾಗೂ ರಾಜ್ಯದ ಜನರ ಸಂಕಷ್ಟಕ್ಕೆ ಕೇಂದ್ರ ಸಚಿವರು ದನಿಯಾಗಬೇಕು. ಈ ಸಂಬಂಧ ಚರ್ಚಿಸಲು ಮುಖ್ಯಮಂತ್ರಿಗಳು ಜು.14ರ ಭಾನುವಾರದಂದು ಸರ್ವ ಪಕ್ಷಗಳ ಸಭೆ ಕರೆದಿದ್ದು, ಮುಂದಿನ ಸಾಧಕ-ಬಾಧಕಗಳ ಬಗ್ಗೆ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಲಾಗುವುದು ಎಂದು ಸಚಿವರು ತಿಳಿಸಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ರಾಜ್ಯದ ನೆರವಿಗೆ ಧಾವಿಸಬೇಕೆಂದು ಉಸ್ತುವಾರಿಸಚಿವರು ಕೋರಿದ್ದಾರೆ.
undefined
ಬೆಳೆ ವಿಮೆ ಗೊಂದಲ ಇತ್ಯರ್ಥಕ್ಕೆ ತಾಕೀತು: ರೈತರ ಹಿತಕಾಯಲು ಸರ್ಕಾರ ರೂಪಿಸಿರುವ ಬೆಳೆ ವಿಮೆ ಯೋಜನೆಯನ್ನು ಮತ್ತಷ್ಟು ಪಾರದರ್ಶಕ ಹಾಗೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಬೆಳೆ ವಿಮೆ ಕುರಿತು ರೈತರು, ಜನಪ್ರತಿನಿಧಿಗಳಿಗೆ ಇರುವ ಎಲ್ಲಾ ಅನುಮಾನ, ಗೊಂದಲ ಬಗೆಹರಿಸಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಸೂಚನೆ ನೀಡಿದ್ದಾರೆ. ವಿಧಾನಸೌಧದಲ್ಲಿ ಬುಧವಾರ ಕರ್ನಾಟಕ ರಾಜ್ಯ ಬೀಜ ನಿಗಮದ ನಿರ್ದೇಶಕರ ಮಂಡಳಿ ಸಭೆ ನಡೆಸಿ ಮಾತನಾಡಿದ ಅವರು, ಇಲಾಖೆಯ ಯಾವುದೇ ಅಧಿಕಾರಿಗಳು ಏಜೆನ್ಸಿಗಳ ಪರವಿಲ್ಲ. ನಾವೆಲ್ಲರೂ ರೈತರಿಗಾಗಿ ಕೆಲಸ ಮಾಡುತ್ತಿದ್ದೇವೆ.
ಕೆಆರ್‌ಎಸ್ ಬಳಿ ಟ್ರಯಲ್ ಬ್ಲಾಸ್ಟ್‌ಗೆ ಅನುಮತಿ ನೀಡದಿರಿ: ಪ್ರಮೋದಾದೇವಿ ಒಡೆಯರ್
ಆದರೂ ಕೆಲವು ರೈತರು, ಜನ ಪ್ರತಿನಿಧಿಗಳಲ್ಲಿ ಬೆಳೆ ವಿಮೆ ಕುರಿತು ಅನುಮಾನಗಳು ಇವೆ. ಇವುಗಳ ಪರಿಹಾರಕ್ಕಾಗಿ ಸೂಕ್ತ ಸಭೆ ಆಯೋಜಿಸಬೇಕು ಎಂದು ಹೇಳಿದರು. ಬೆಳೆ ವಿಮೆ ಇರುವುದು ರೈತರ ಅನುಕೂಲಕ್ಕಾಗಿಯೇ ಹೊರತು ಬೇರೆಯವರ ಅನುಕೂಲಕ್ಕಾಗಿ ಅಲ್ಲ. ವಿಮೆ ಕಂಪೆನಿಗಳಿಂದ ಯಾವುದೇ ಅಧಿಕಾರಿ ಸಣ್ಣ ಅನುಕೂಲವನ್ನೂ ಪಡೆಯಬಾರದು. ವಸ್ತುನಿಷ್ಠವಾಗಿ ಕೆಲಸ ಮಾಡಿ ರೈತರಿಗೆ ನೆರವಾಗಬೇಕು ಎಂದು ತಾಕೀತು ಮಾಡಿದರು. ಕೃಷಿ ಇಲಾಖೆ ಕಾರ್ಯದರ್ಶಿ ಅನ್ಬುಕುಮಾರ್ ಮಾತನಾಡಿ, ಬೆಳೆ ಸಮೀಕ್ಷೆ ಕೇವಲ ಕೃಷಿ ಇಲಾಖೆಗಳಿಂದ ಆಗುತ್ತಿಲ್ಲ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಲಾಗುವ ವಿವಿಧ ಇಲಾಖೆ ಅಧಿಕಾರಿಗಳ ಸಮಿತಿಯಿಂದ ನಡೆಯುತ್ತಿದ್ದು, ಯಾವುದೇ ಲೋಪಗಳಾಗುತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು.