ಬಿಜೆಪಿ ಪಕ್ಷವನ್ನು ತಳಮಟ್ಟದಿಂದ ಬಲಪಡಿಸಲಿ: ಸಚಿವ ಸಿ.ಸಿ.ಪಾಟೀಲ್

By Govindaraj SFirst Published Jan 13, 2023, 11:59 PM IST
Highlights

ರಾಜ್ಯ ಮತ್ತು ಕೇಂದ್ರದ ಭಾರತೀಯ ಜನತಾ ಪಕ್ಷದ ಸರಕಾರ ಜನಪರ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಕಾರ್ಯಕರ್ತರು ಮತದಾರರಿಗೆ ಅಭಿವೃದ್ಧಿಯ ಯೋಜನೆಗಳನ್ನು ಮನವರಿಕೆ ಮಾಡಿ ಪಕ್ಷವನ್ನು ತಳಮಟ್ಟದಿಂದ ಬಲಪಡಿಸಬೇಕು ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಹೇಳಿ​ದ​ರು.

ಗದ​ಗ (ಜ.13): ರಾಜ್ಯ ಮತ್ತು ಕೇಂದ್ರದ ಭಾರತೀಯ ಜನತಾ ಪಕ್ಷದ ಸರಕಾರ ಜನಪರ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಕಾರ್ಯಕರ್ತರು ಮತದಾರರಿಗೆ ಅಭಿವೃದ್ಧಿಯ ಯೋಜನೆಗಳನ್ನು ಮನವರಿಕೆ ಮಾಡಿ ಪಕ್ಷವನ್ನು ತಳಮಟ್ಟದಿಂದ ಬಲಪಡಿಸಬೇಕು ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಹೇಳಿ​ದ​ರು. ತಾ​ಲೂ​ಕಿನ ಲಕ್ಕುಂಡಿ ಗ್ರಾಮ​ದ ಶಂಕರ ದೇವಸ್ಥಾನದ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ 1ರಿಂದ 5ನೇ ವಾರ್ಡ್‌ಗಳ ಬೂತ್‌ ವಿಜಯ ಅಭಿಯಾನ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಬಿಜೆ​ಪಿ ಬೂತ್‌ ಅಧ್ಯಕ್ಷ ಹಾಗೂ ಪೇಜ್‌ ಪ್ರಮುಖ ಕಾರ್ಯಕರ್ತರನ್ನು ಕಾರ್ಯವನ್ನು ಗುರುತಿಸಿ ಅವರಿಗೆ ಪಕ್ಷ ಉತ್ತಮ ಹುದ್ದೆ ಒದಗಿಸುತ್ತದೆ. ಇಲ್ಲಿ ವ್ಯಕ್ತಿಗಿಂತ ಪಕ್ಷದ ತತ್ವ ಸಿದ್ಧಾಂತಗಳಿಗೆ ಪ್ರಾಮುಖ್ಯವಿದೆ ಎಂದರು. ಬಿಜೆಪಿ ಸರಕಾರ ಜಲಜೀವನ, ಉಜ್ವಲ, ಆರೋಗ್ಯ ವಿಮೆ, ರೈತರು, ನೇಕಾರರು, ಕಾರ್ಮಿಕರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಗಳನ್ನು ಜಾರಿಗೆ ತಂದು ಜನಪಯೋಗಿ ಕಾರ್ಯಗಳನ್ನು ಮಾಡಿದೆ. ಆದ್ದರಿಂದ ಬಿಜೆಪಿ ಜಾತಿ ಆಧಾರದ ಮೇಲೆ ಮತವನ್ನು ಕೇಳುವುದಿಲ್ಲ. ಅಭಿವೃದ್ಧಿ ಆಧಾರದಲ್ಲಿ ಮತವನ್ನು ಕೇಳುತ್ತದೆ. ಕಾರ್ಯಕರ್ತರು ಬಿಜೆಪಿ ಸರಕಾರದ ಅಭಿವೃದ್ಧಿ ಕೆಲಸಗಳನ್ನು ಮನೆ ಮನೆಗೆ ತಿಳಿಸಿ ಪಕ್ಷವನ್ನು ಬಲಪಡಿಸಬೇಕು ಎಂದು ತಿಳಿ​ಸಿ​ದ​ರು.

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಗಲಿ: ವಚನಾನಂದ ಸ್ವಾಮೀಜಿ

ಲಕ್ಕುಂಡಿ ಬಿಜೆಪಿ ಮಂಡಳದ ಅಧ್ಯಕ್ಷ ನಿಂಗಪ್ಪ ಮಣ್ಣೂರು ಮಾತನಾಡಿ, ಬಿಜೆಪಿ ಶಕ್ತಿ ಕೇಂದ್ರ ರಚನೆಯ ಮೂಲಕ ಬೂತ್‌, ಮತ್ತು ಪೇಜ್‌ ಪ್ರಮುಖ ಕಾರ್ಯದ ಮೂಲಕ ಯುವ ಕಾರ್ಯಕರ್ತರಿಗೆ ನಾಯಕನಾಗಲು ಅವಕಾಶ ಸಿಗುತ್ತಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಾವುಟವನ್ನು ಹಾರಿಸಬೇಕು ಎಂದರು. ಈ ವೇಳೆ ಜಿಲ್ಲಾ ಬಿಜೆಪಿ ಮುಖಂಡ ವಸಂತ ಮೇಟಿ ಬಿಜೆಪಿ ಪಕ್ಷದ ತತ್ವ ಸಿದ್ಧಾಂತಗಳ ಕುರಿತು ವಿವರಿಸಿದರು.

ಬಿಜೆಪಿ ಶಕ್ತಿ ಕೇಂದ್ರ ಪ್ರಮುಖ ಅಂದಪ್ಪ ತಿಮ್ಮಾಪೂರ, ಗದಗ ನಗರಸಭೆ ಅಧ್ಯಕ್ಷೆ ಉಷಾ ದಾಸರ, ಮುಖಂಡ ಅನಿಲ ಮೆಣಸಿನಕಾಯಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ದಪ್ಪ ಪಲ್ಲೇದ, ಪ್ರದೀಪ ನವಲಗುಂದ, ಉಮೇಶಗೌಡ ಪಾಟೀಲ, ಗ್ರಾಪಂ ಉಪಾಧ್ಯಕ್ಷ ರೇವಣಸಿದ್ದಪ್ಪ ಮುಳಗುಂದ, ಸದಸ್ಯರಾದ ಬಸವರಾಜ ಹಟ್ಟಿ,ರೋಷನಬಿ ನದಾಫ, ಫಕ್ಕೀರಮ್ಮ ಬೇಲೇರಿ, ಪ್ರೇಮಾ ಮಟ್ಟಿ, ಅಜ್ಜಪ್ಪಗೌಡ ಪಾಟೀಲ, ಸುಧಾ ಅಂಭಕ್ಕಿ, ಅನಸೂಯಾ ಬೂಮ್ಮಣ್ಣವರ, ಸುವರ್ಣ ಹಟ್ಟಿ, ಪಾರಮ್ಮ ಹಟ್ಟಿಇದ್ದರು. ಜಿಲ್ಲಾ ಬಿಜೆಪಿ ಒಬಿಸಿ ಕಾರ್ಯದರ್ಶಿ ಪ್ರಕಾಶ ಅರಹುಣಶಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಣ್ಣ ಗುತ್ತಿಗೆದಾರರಿಗೆ ಆದ್ಯತೆಯಲ್ಲಿ ಬಾಕಿ ಬಿಡುಗಡೆ: ರಾಜ್ಯದಲ್ಲಿ ವಿವಿಧ ಕಾಮಗಾರಿಗಳನ್ನು ಪೂರೈಸಿ ಹಣ ಬಿಡುಗಡೆಗೆ ಕಾಯುತ್ತಿರುವ ಗುತ್ತಿಗೆದಾರರ ಪೈಕಿ ಸಣ್ಣ ಗುತ್ತಿಗೆದಾರಿಗೆ ಆದ್ಯತೆ ಮೇಲೆ ಹಣ ಬಿಡುಗಡೆ ಮಾಡಲಾಗುವುದು ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್‌ ಭರವಸೆ ನೀಡಿದ್ದಾರೆ. ಪ್ರಶ್ನೋತ್ತರ ಅವಧಿಯಲ್ಲಿ ವಿಷಯ ಪ್ರಸ್ತಾಪಿಸಿದ ಜೆಡಿಎಸ್‌ ಸದಸ್ಯ ಎಚ್‌.ಡಿ.ರೇವಣ್ಣ ಹಾಸನ ಹಾಗೂ ಚನ್ನರಾಯಪಟ್ಟಣ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ 19.86 ಕೋಟಿ ರು. ಅನುದಾನ ಬಿಡುಗಡೆಗೆ ಅನುಮೋದನೆ ನೀಡಲಾಗಿದೆ. ಆದರೆ, ಕಾಮಗಾರಿ ಪೂರೈಸಿರುವ ಗುತ್ತಿಗೆದಾರರಿಗೆ ಎರಡು ವರ್ಷದಿಂದ ಬಿಲ್‌ ಪಾವತಿಸಿಲ್ಲ. 

Uttara Kannada: ಗೋಸ್ವರ್ಗದಲ್ಲಿ ಸಂಭ್ರಮದ ಗೋವು ದಿನ, ಆಲೆಮನೆ ಹಬ್ಬ ಆಚರಣೆ

5 ಲಕ್ಷ ರು., 10 ಲಕ್ಷ ರು.ನಷ್ಟು ಸಣ್ಣ ಮೊತ್ತದ ಕಾಮಗಾರಿ ನಡೆಸಿರುವ ಸಣ್ಣ ಗುತ್ತಿಗೆದಾರರಿಗೆ ಬಿಲ್‌ ಪಾವತಿ ಮಾಡದೆ ಸಮಸ್ಯೆ ಸೃಷ್ಟಿಸಲಾಗುತ್ತಿದೆ. ಗುತ್ತಿಗೆದಾರರು ಸಾಲ ಮಾಡಿ ಕೆಲಸ ಮಾಡಿ ಕಿರುಕುಳ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು. ಈ ವೇಳೆ ಜೆಡಿಎಸ್‌ನ ಇತರೆ ಸದಸ್ಯರೂ ದನಿಗೂಡಿಸಿ ಇದು ಎಲ್ಲಾ ಕ್ಷೇತ್ರದಲ್ಲೂ ಇದೆ ಎಂದರು. ಇದಕ್ಕೆ ಉತ್ತರಿಸಿದ ಸಿ.ಸಿ.ಪಾಟಿಲ್‌, ‘ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಈವರೆಗೆ ದೊಡ್ಡ ಮೊತ್ತದ ಕಾಮಗಾರಿಗಳನ್ನು ಮಾಡಿರುವವರನ್ನು ಆದ್ಯತೆಯಾಗಿ ಪರಿಗಣಿಸಿ ಬಿಲ್‌ ಬಿಡುಗಡೆ ಮಾಡುತ್ತಿದ್ದೆವು. ಇನ್ನು ಮುಂದೆ ಸಣ್ಣ ಗುತ್ತಿಗೆದಾರರನ್ನು ಆದ್ಯತೆಯಾಗಿ ಪರಿಗಣಿಸಿ ಹಣ ಬಿಡುಗಡೆ ಮಾಡಲಾಗುವುದು’ ಎಂದು ಹೇಳಿದರು.

click me!