* ಸಮಗ್ರ ಕರ್ನಾಟಕದ ಅಭಿವೃದ್ಧಿ ಚಿಂತನೆ ಹೊಂದಿದ ಪಾಟೀಲರು
* ನಾಡಿನ ಸಮಸ್ಯೆಗಳಿಗೆ ಸ್ಪಂದಿಸುವ ಉತ್ಸಾಹಿ ನಾಯಕ
* ರಾಜಕೀಯದಲ್ಲಿ ತಳಹಂತದಿಂದ ಮೇಲೆ ಬಂದವರು ಪಾಟೀಲ
ಬೀಳಗಿ(ಜೂ.26): ಜಾತ್ಯಾತೀತ ವ್ಯಕ್ತಿತ್ವ ಹೊಂದಿರುವ ಎಸ್.ಆರ್.ಪಾಟೀಲ ಅವರು ದ ಬಸವ ನಾಡಿನ ಹಿರಿಯ ಬುದ್ಧಿಜೀವಿ ರಾಜಕಾರಣಿ. ಮಹಾತ್ಮ ಗಾಂಧಿ, ಬಸವಣ್ಣ, ಅಂಬೇಡ್ಕರ ಅವರ ಅನುಯಾಯಿಗಳಾದ ಇಂತಹ ನಾಯಕರು ಯಾದರೆ ಖಂಡಿತವಾಗಿಯೂ ಉತ್ತರ ಕರ್ನಾಟಕಕ್ಕೆ ನ್ಯಾಯ ಸಿಕ್ಕಂತಾಗುತ್ತದೆ ಎಂದು ಜಿಲ್ಲಾ ಎಸ್ಟಿ ಕಾಂಗ್ರೆಸ್ ಅಧ್ಯಕ್ಷ ಶ್ರೀಶೈಲ ಅಂಟೀನ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಸರಳ ಸಜ್ಜನ, ಪ್ರಾಮಾಣಿಕ ಶುದ್ಧಹಸ್ತ ಸಚ್ಚಾರಿತ್ರದ ಪಾಟೀಲರು, ದಲ್ಲಿ ತಳಹಂತದಿಂದ ಮೇಲೆ ಬಂದವರು. ಕಳೆದ 24 ವರ್ಷಗಳ ಕಾಲ ವಿಧಾನ ಪರಿಷತ್ ಸದಸ್ಯರಾಗಿ ಉತ್ತರ ಕರ್ನಾಟಕದ ಹಲವಾರು ಜ್ವಲಂತ ಸಮಸ್ಯೆಗಳಿಗೆ ದನಿಯಾಗಿದ್ದಾರೆ ಎಂದು ಹೇಳಿದ್ದಾರೆ.
ಮೋದಿಗೆ ತಕ್ಕ ಪಾಠ ಕಲಿಸಲು ಜನ ತುದಿಗಾಲ ಮೇಲೆ ನಿಂತಿದ್ದಾರೆ: ಎಸ್.ಆರ್. ಪಾಟೀಲ
ಸಮಗ್ರ ಕರ್ನಾಟಕದ ಅಭಿವೃದ್ಧಿ ಚಿಂತನೆ ಹೊಂದಿದ ಅವರು, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕರಾಗಿ ಹಗಲಿರುಳು ಜನಸೇವೆಯಲ್ಲಿದ್ದಾರೆ. ಜನರ, ನಾಡಿನ ಸಮಸ್ಯೆಗಳಿಗೆ ಸ್ಪಂದಿಸುವ ಉತ್ಸಾಹಿ ನಾಯಕರಾಗಿರುವ ಎಸ್.ಆರ್. ಪಾಟೀಲ ಅವರು ಮುಖ್ಯಮಂತ್ರಿಯಾಗಬೇಕು ಎಂದು ಉತ್ತರ ಕರ್ನಾಟಕದ ಆಶಯವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.