ನನಗೂ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿ: ಸುಪ್ರೀಂ ಮೊರೆ ಹೋದ ಎಂಜಿನಿಯರ್..!

By Girish Goudar  |  First Published Jun 20, 2022, 5:15 AM IST

*  ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ ಕಿಶೋರ್ ಸಾವಂತ್
*  ದೇಶಕ್ಕೆ ದೊಡ್ಡ‌ ತಲೆನೋವಾಗಿರುವ ಕಸವಿಲೇವಾರಿ ಸಮಸ್ಯೆಗೆ ತನ್ನಲ್ಲಿ ಪರಿಹಾರವಿದೆ
*  ಸಂವಿಧಾನದಲ್ಲಿ ರಾಷ್ಟ್ರಪತಿ ಚುನಾವಣೆಗೆ ಹೆಚ್ಚಿನ ಯಾವುದೇ ನಿಯಮಗಳಿಲ್ಲ 
 


ಕಾರವಾರ ಜೂ.20): ದೇಶದ ರಾಷ್ಟ್ರಪತಿಗಳ ಚುನಾವಣೆಗೆ ಇನ್ನೇನು ಬೆರಳೆಣಿಕೆಯ ದಿನಗಳಿವೆ. ಆದರೆ, ಕಾರವಾರ ನಿವಾಸಿಯೋರ್ವರು ತಾನು ಕೂಡಾ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಲು ಅರ್ಹನಾಗಿದ್ದು, ತಾನು ಕೂಡಾ ಸ್ಪರ್ಧಿಯಾಗಲು ಅವಕಾಶ ನೀಡಬೇಕೆಂದು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಕಾರವಾರ ಸದಾಶಿವಗಡದ ಪಣಸಗಿರಿ ಕಿಶೋರ್ ಸಾವಂತ್,

ಮೆಕ್ಯಾನಿಕಲ್ ಎಂಜಿನಿಯರ್ ಹಾಗೂ ಪರಿಸರವಾದಿ ಕೂಡಾ ಆಗಿದ್ದು, ಇದೀಗ ತಾನು ಕೂಡಾ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಲು ಅರ್ಹನಾಗಿರುವ ಕಾರಣ ಅವಕಾಶ ನೀಡಬೇಕೆಂದು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ದೇಶಕ್ಕೆ ದೊಡ್ಡ‌ ತಲೆನೋವಾಗಿರುವ ಕಸವಿಲೇವಾರಿ ಸಮಸ್ಯೆಗೆ ತನ್ನಲ್ಲಿ ಪರಿಹಾರವಿದೆ ಎಂದು ಹೇಳುವ ಇವರು, ತಾನೇನಾದ್ರೂ ರಾಷ್ಟ್ರಪತಿಯಾದಲ್ಲಿ ಈ ಯೋಜನೆಯನ್ನು ದೇಶದ ಪ್ರತೀ ಗ್ರಾಮದಲ್ಲಿ ಅನುಷ್ಠಾನಗೊಳಿಸುವಂತೆ ಮಾಡ್ತೇನೆ. ಅಲ್ಲದೇ, ದೇಶದಲ್ಲಿ ಕಾಣಿಸಿಕೊಳ್ತಿರೋ ಪ್ರತಿಯೊಂದು ರೀತಿಯ ಮಾಲಿನ್ಯ ತಡೆಗಟ್ಟಲು ವ್ಯವಸ್ಥೆ ಕೈಗೊಳ್ಳಲಾಗುವುದು. ನನಗೆ ರಾಷ್ಟ್ರಪತಿ ಚುನಾವಣೆಗೆ ನಿಲ್ಲಲು ಅವಕಾಶ ಕೋರಿ ಸುಪ್ರೀಂಕೋರ್ಟ್‌ನಲ್ಲೂ ದಾವೆ ಹೂಡಿದ್ದೇನೆ. ಕಾನೂನು ರೀತಿಯಲ್ಲೇ ಇದಕ್ಕಾಗಿ ಹೋರಾಡಲಿದ್ದೇನೆ. ಸುಪ್ರೀಂಕೋರ್ಟ್ ಅವಕಾಶ ನೀಡಿದಲ್ಲಿ ನನಗೆ ರಾಷ್ಟ್ರಪತಿ ಚುನಾವಣೆಗೆ ನಿಲ್ಲಬಹುದು. ಈ ಹಿಂದೆ ಎರಡು ಬಾರಿ ರಾಷ್ಟ್ರಪತಿ ಚುನಾವಣೆಗೆ ಅರ್ಜಿ ಸಲ್ಲಿಸಲು ಕೂಡಾ ನನಗೆ ಅವಕಾಶ ನೀಡಲಾಗಿಲ್ಲ.‌ 

Latest Videos

undefined

ಉತ್ತರ ಕನ್ನಡ: ರಾತ್ರಿಯಿಡೀ ಗಸ್ತು ತಿರುಗಿ ಹುಬ್ಬೇರುವಂತೆ ಮಾಡಿದ ಮಹಿಳಾ ಪೊಲೀಸ್‌ ಪಡೆ..!

ಈ ಕಾರಣದಿಂದ ಈ ಬಾರಿ ನಾನು ಫಾರ್ಮ್ ಕೂಡಾ ತುಂಬಲ್ಲ. ಸಂವಿಧಾನದಲ್ಲಿ ರಾಷ್ಟ್ರಪತಿ ಚುನಾವಣೆಗೆ ಹೆಚ್ಚಿನ ಯಾವುದೇ ನಿಯಮಗಳಿಲ್ಲ. ಇಂತಹ ನಿಯಮಗಳು ಅರ್ಥ ರಹಿತವಾದದ್ದು ಕೂಡಾ. ರಾಷ್ಟ್ರಪತಿ ಚುನಾವಣೆ ನಡೆಯೋ ಮೊದಲೇ ಸುಪ್ರೀಂಕೋರ್ಟ್ ನನ್ನ ಮನವಿಗೆ ಆಸ್ಪದ ನೀಡಬೇಕು. 2021 ಡಿಸೆಂಬರ್ ಹಾಗೂ 2022ರ ಮಾರ್ಚ್‌ನಲ್ಲಿ ದಾವೆ ಹೂಡಿದ್ದೇನೆ. ಆದರೆ, ಸುಪ್ರೀಂಕೋರ್ಟ್ ನನಗೆ ಹಿಯರಿಂಗ್ ಮಾಡಲು ಇನ್ನೂ ಅವಕಾಶ ನೀಡಿಲ್ಲ. ನನಗೆ ನಾನೇ ನ್ಯಾಯವಾದಿ. ಕಳೆದ ಎರಡು ಬಾರಿ ಅರ್ಜಿ ಸಲ್ಲಿಸಿದಾಗ ನನ್ನ ಮನವಿ ತಿರಸ್ಕರಿಸಲ್ಪಟ್ಟದ್ದರಿಂದ ನನಗೆ ಅನ್ಯಾಯವಾಗಿದೆ. ಈ ಕಾರಣದಿಂದ ಸಂವಿಧಾನದ ಪ್ರಕಾರ ನನಗೆ ನ್ಯಾಯ ನೀಡಿ ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯಾಗಲು ಅವಕಾಶ ನೀಡಬೇಕೆಂದು ಕಿಶೋರ್ ಸಾವಂತ್ ಆಗ್ರಹಿಸಿದ್ದಾರೆ.
 

click me!