ಸಿದ್ಧವೀರ ಸತ್ಸಂಗ ಮತ್ತು ಹಿರೇಮಲ್ಲೂರ ಈಶ್ವರನ್ ಪದವಿಪೂರ್ವ ಕಾಲೇಜು ಹಮ್ಮಿಕೊಂಡಿದ್ದ ಗಾಂಧೀಜಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರೀಜಿ ಜಯಂತಿ ಉದ್ಘಾಟಿಸಿದ ನ್ಯಾಯವಾದಿ, ಗಾಂಧಿವಾದಿ ಬಸವಪ್ರಭು ಹೊಸಕೇರಿ, ಖಾದಿ ಭಾರತ ದೇಶದ ಸಂಕೇತವಾಗಿ ಬಳಕೆಯಾಗಬೇಕು ಎಂದು ಅಭಿಪ್ರಾಯಪಟ್ಟರು.
ಧಾರವಾಡ (ಅ.3) : ನಗರದ ಹಲವು ಶಾಲಾ-ಕಾಲೇಜು ಹಾಗೂ ಸಂಘ-ಸಂಸ್ಥೆಯಲ್ಲಿ ಅ. 2ರ ಭಾನುವಾರ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹುದ್ಧೂರ ಶಾಸ್ತ್ರಿ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಿದ್ಧವೀರ ಸತ್ಸಂಗ ಮತ್ತು ಹಿರೇಮಲ್ಲೂರ ಈಶ್ವರನ್ ಪದವಿಪೂರ್ವ ಕಾಲೇಜು ಹಮ್ಮಿಕೊಂಡಿದ್ದ ಗಾಂಧೀಜಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರೀಜಿ ಜಯಂತಿ ಉದ್ಘಾಟಿಸಿದ ನ್ಯಾಯವಾದಿ, ಗಾಂಧಿವಾದಿ ಬಸವಪ್ರಭು ಹೊಸಕೇರಿ, ಖಾದಿ ಭಾರತ ದೇಶದ ಸಂಕೇತವಾಗಿ ಬಳಕೆಯಾಗಬೇಕು. ಕೃಷಿ ಪ್ರಧಾನವಾಗಿರುವ ಈ ದೇಶದಲ್ಲಿ ಖಾದಿ ಹಿಂದಿರುವ ಶ್ರಮ ಮತ್ತು ಅವಲಂಬಿತ ಕುಟುಂಬಗಳನ್ನು ಹಾಗೂ ಕಾರ್ಮಿಕ ವರ್ಗವನ್ನು ಗಮನದಲ್ಲಿಟ್ಟುಕೊಂಡು ಖಾದಿ ಬಳಕೆಗೆ ಮುಂದಾಗಬೇಕಿದೆ ಎಂದರು.
ಗಾಂಧಿ ಜಯಂತಿ ಪ್ರಯುಕ್ತ MGNREGA ನೌಕರರ ಸಂಘದಿಂದ ಸ್ವಚ್ಛತಾ ಕಾರ್ಯ
undefined
ಡಾ. ಮಯೂರ್ ಮೋರೆ ಫೌಂಡೇಶನ್ ಅಧ್ಯಕ್ಷ ಡಾ. ಮಯೂರ ಮೋರೆ ಮಾತನಾಡಿದರು. ಡಾ. ನಿತಿನ್‌ಚಂದ್ರ ಹತ್ತೀಕಾಳ, ಪ್ರಾಚಾರ್ಯ ಶಶಿಧರ ತೋಡಕರ, ಮಹೇಶ ಗಸ್ತೆ, ಡಾ. ಕೇಯೂರ್ ಕರಗುದರಿ, ವಿಲ್ಸನ್ ಮೈಲಿ, ಗಣೇಶ ಕದಂ, ಬಸವರಾಜ ತಾಳಿಕೋಟಿ, ಈರಣ್ಣ ಇಂಜಗನೇರಿ, ಶಾಂತರಾಜ ವಿಭೂತಿ ಇದ್ದರು.
ಕವಿವಿ:
ಕರ್ನಾಟಕ ವಿವಿ ಗಾಂಧಿಭವನದಲ್ಲಿ ಭಾನುವಾರ ಗಾಂಧೀಜಿ ಹಾಗೂ ಶಾಸ್ತ್ರೀಜಿ ಜನ್ಮ ದಿನ ಅಂಗವಾಗಿ ಅಂತಾರಾಷ್ಟ್ರೀಯ ಅಹಿಂಸಾ ದಿನ ಆಚರಿಲಾಯಿತು. ಇಬ್ಬರು ಮಹನೀಯರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿದ ಕವಿವಿ ಕುಲಪತಿ ಪ್ರೊ. ಕೆ.ಬಿ. ಗುಡಸಿ, ಗಾಂಧೀಜಿ ಸರ್ವವ್ಯಾಪಿಯಾಗಿದ್ದು, ಇಂದಿಗೂ ಪ್ರಸ್ತುತ. ಅವರೊಬ್ಬ ಸಾಮಾಜಿಕ ಮತ್ತು ಸಾಂಸ್ಕೃತಿಕ ದೇಶದ ರಾಯಭಾರಿ ಎಂದರು.
ಸಂಗೀತ ವಿಭಾಗದ ವಿದ್ಯಾರ್ಥಿಗಳು ಭಜನೆ ಪ್ರಸ್ತುತ ಪಡಿಸಿದರು. ಗಾಂಧೀಜಿ ಜೀವನ ಆಧಾರಿತ ಚಿತ್ರ ಪ್ರದರ್ಶನ ಆಯೋಜಿಸಲಾಗಿತ್ತು. ಗಾಂಧಿ ಅಧ್ಯಯನ ವಿಭಾಗದ ಉಪನ್ಯಾಸಕ ಡಾ. ಎಸ್.ಬಿ. ಬಶೆಟ್ಟಿರಚಿಸಿದ ‘ಗಾಂಧೀ ಕನಸಿನ ಭಾರತದ ಅಡಿಪಾಯ’, ಪುಸ್ತಕವನ್ನು ಕುಲಪತಿಗಳು ಬಿಡುಗುಡೆ ಮಾಡಿದರು. ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಶಿವಾನಂದ ಶೆಟ್ಟರ ಮಾತನಾಡಿದರು. ಮೌಲ್ಯಮಾಪನ ಕುಲಸಚಿವ ಪ್ರೊ. ಸಿ. ಕೃಷ್ಣಮೂರ್ತಿ, ಹಣಕಾಸು ಅಧಿಕಾರಿ ಡಾ. ಅಂಜನಾ ತಾಮ್ರಗುಂಡಿ ಮತ್ತಿತರರು ಇದ್ದರು.
ಜಿಲ್ಲಾಡಳಿತ:
ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ಭಾನುವಾರ ಗಾಂಧೀಜಿ ಮತ್ತು ಶಾಸ್ತ್ರೀಜಿ ಜಯಂತಿ ನಡೆಯಿತು. ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಮಹನೀಯರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿದರು. ನಂತರ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದ ಚಿಕ್ಕ ಉದ್ಯಾನವನದಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಸಂಗೀತ ಶಿಕ್ಷಕರಾದ ಡಾ.ಪರಶುರಾಮ ಕಂಟಿಸಂಗಾವಿ, ಪಂಡಿತ ಅಲ್ಲಮಪ್ರಭು ಕಡಕೋಳ ಅವರ ನೇತೃತ್ವದಲ್ಲಿ ಡಾ. ಮಲ್ಲಿಕಾರ್ಜುನ ಮನಸೂರ ಟ್ರಸ್ಟ್ ನ ವಿದ್ಯಾರ್ಥಿಗಳು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಅಧಿಕಾರಿಗಳಾದ ಕುಮಾರ ಬೆಕ್ಕೇರಿ, ಮಲ್ಲಿಕಾರ್ಜುನ ಸೊಲಗಿ ಇದ್ದರು.
ಜಿಪಂನಿಂದ ಸ್ವಚ್ಛತೆ
ಗಾಂಧೀಜಿ ಹಾಗೂ ಶಾಸ್ತ್ರೀಜಿ ಜಯಂತಿ ಹಿನ್ನೆಲೆಯಲ್ಲಿ ಜಿಪಂ ಅಧಿಕಾರಿ ಹಾಗೂ ಸಿಬ್ಬಂದಿ ಸ್ವಚ್ಛತಾ ಕಾರ್ಯ ಮಾಡುವ ಮೂಲಕ ಆಚರಿಸಿದರು. ಸಿಇಒ ಡಾ. ಸುರೇಶ ಇಟ್ನಾಳ ಮಹನೀಯರ ಭಾವಚಿತ್ರಕ್ಕೆ ಪೂಜೆ ಮಾಡಿ, ಪುಷ್ಪರ್ಚನೆ ಮಾಡಿದರು. ಜಿಪಂ ಆವರಣ ಸಂಪೂರ್ಣ ಸ್ವಚ್ಛಗೊಳಿಸಲಾಯಿತು. ಉಪ ಕಾರ್ಯದರ್ಶಿ ರೇಖಾ ಡೊಳ್ಳಿನ, ಮುಖ್ಯ ಲೆಕ್ಕಾಧಿಕಾರಿ ಲಲಿತಾ ಲಮಾಣಿ, ಯೋಜನಾ ನಿರ್ದೇಶಕ ಬಿ.ಎಸ್. ಮೂಗನೂರಮಠ, ಪದ್ಮಾ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
ಹಿಂದಿ ಪ್ರಚಾರ ಸಭಾ
ಇಲ್ಲಿಯ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಲ್ಲಿ ಭಾನುವಾರ ಗಾಂಧೀಜಿ, ಶಾಸ್ತ್ರೀಜಿ ಜಯಂತಿ ಅರ್ಥಪೂರ್ಣವಾಗಿ ನಡೆಯಿತು. ಸಭಾ ಅಧ್ಯಕ್ಷರು ಹಾಗೂ ಮೇಯರ್ ಈರೇಶ ಅಂಚಟಗೇರಿ, ಗಾಂಧಿಜಿ ಸತತ ಪ್ರಯತ್ನದಿಂದಲೆ ದೇಶಕ್ಕೆ ಸ್ವಾತಂತ್ರ್ಯ ದೊರಕಿತು ಎಂದರು. ನ್ಯಾಯವಾದಿ ಅರುಣ ಜೋಶಿ ಮಾತನಾಡಿದರು. ಎಂ.ಆರ್. ಪಾಟೀಲ, ಡಾ.ಎಸ್.ಬಿ. ಹಿಂಚಿಗೇರಿ, ರಾಧಾಕೃಷ್ಣನ್ ಇದ್ದರು.
ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲೂ ಇಬ್ಬರೂ ಮಹನೀಯರ ಜಯಂತಿ ಅಂಗವಾಗಿ ಅವರ ಭಾವಚಿತ್ರಗಳಿಗೆ ಪುಷ್ಪಾರ್ಪಣೆ ಮಾಡಲಾಯಿತು. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಉಪಾಧ್ಯಕ್ಷರಾದ ಪ್ರೊ ಮಾಲತಿ ಪಟ್ಟಣಶೆಟ್ಟಿ, ಪದಾಧಿಕಾರಿಗಳಾದ ವೀರಣ್ಣ ಒಡ್ಡೀನ, ಡಾ. ಶ್ರೀಶೈಲ ಹುದ್ದಾರ, ಡಾ. ಧನವಂತ ಹಾಜವಗೋಳ, ಶಂಕರ ಹಲಗತ್ತಿ, ಶಂಕರ ಕುಂಬಿ, ಶಿವಾನಂದ ಬಾವಿಕಟ್ಟಿ, ಡಾ. ಶೈಲಜಾ ಅಮರಶೆಟ್ಟಿ, ಗುರು ಹಿರೇಮಠ, ಡಾ. ಜಿನದತ್ತ ಹಡಗಲಿ, ವಿಶ್ವೇಶ್ವರಿ ಬ. ಹಿರೇಮಠ ಇದ್ದರು.
ಮಹಾತ್ಮ ಗಾಂಧಿ ಪುತ್ಥಳಿ ಸಮಿತಿಯಿಂದ ನಡೆದ ಸಮಾರಂಭದಲ್ಲಿ ರಾಬರ್ಚ್ ದದ್ದಾಪೂರಿ, ಆರ್.ಕೆ. ಪಾಟೀಲ್, ಸುಭಾಷ್ ಶಿಂಧೆ, ಆನಂದ ಜಾಧವ, ಆನಂದ ಮುಸ್ಸಣ್ಣವರ್, ಕವಿತಾ ಕಬ್ಬೇರ್ ಭಾಗವಹಿಸಿದ್ದರು. ರಾಯಾಪೂರದ ಮಹಾಂತ ಕಾಲೇಜಿನ ವಿದ್ಯಾರ್ಥಿ ಒಕ್ಕೂಟ, ಎನ್ನೆಸ್ಸೆಸ್ ಘಟಕದಿಂದ ಮಹನೀಯರ ಜಯಂತಿ ನಡೆಯಿತು. ಪ್ರಾಚಾರ್ಯ ಡಾ. ಶಾಂತಯ್ಯ ಕೆ.ಎಸ್., ಮಾತನಾಡಿದರು.
ಗಾಂಧಿ ಜಯಂತಿಯಂದು ಟ್ವಿಟರ್‌ನಲ್ಲಿ ಟ್ರೆಂಡ್ ಆಯ್ತು 'ಗೋಡ್ಸೆ ಜಿಂದಾಬಾದ್': ವರುಣ್ ಗಾಂಧಿ ಕಿಡಿ!
ಪ್ರೊ. ಎಂ.ಜಿ. ಬಾಗೇವಾಡಿ, ಸಿ.ಕೆ. ಹುಬ್ಬಳ್ಳಿ ಇದ್ದರು. ಕರ್ನಾಟಕ ಕಲಾ ಕಾಲೇಜು ಹಾಗೂ ವಿಜ್ಞಾನ ಕಾಲೇಜಿನಲ್ಲೂ ಗಾಂಧೀಜಿ ಹಾಗೂ ಶಾಸ್ತ್ರೀಜಿ ಜಯಂತಿ ಜರುಗಿತು. ಪ್ರಾಚಾರ್ಯ ಡಾ. ಶಿವಾನಂದ ಚೌಗಲಾ, ಸಂಯೋಜಕ ಡಾ. ಹೊನ್ನಪ್ಪ ಎಸ್.,ಇದ್ದರು. ಗ್ರಂಥಾಲಯದಲ್ಲಿ ಇಬ್ಬರೂ ಮಹನೀಯರು ಜೀವನ ಮತ್ತು ತತ್ವಗಳಿಗೆ ಸಂಬಂಧಿಸಿದ ಪುಸ್ತಕ ಪ್ರದರ್ಶನ ನಡೆಯಿತು. ಹಳೆಯ ವಿದ್ಯಾರ್ಥಿ ಪಿ.ಎಚ್. ನೀರಲಕೇರಿ ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸಿದರು.
ಮಹಾತ್ಮರ ಸಂದೇಶಗಳು ಪ್ರತಿಯೊಬ್ಬರಿಗೆ ಅನುಕೂಲ( ಕಡ್ಡಾಯ)
ಗುರು ಶರಣರು, ಸಂತರು, ದಾರ್ಶನಿಕರ, ಮಹಾತ್ಮರ ಮಹತ್ವದ ಸಂದೇಶಗಳು ಪ್ರತಿಯೊಬ್ಬರ ಜೀವನ ಸುಧಾರಣೆಗೆ ಸಹಾಯಕ ಎಂದು ಹಿರಿಯ ವ್ಯೆದ್ಯ ಡಾ. ಸುಧೀರ ಜಂಬಗಿ ಹೇಳಿದರು. ರಾ.ಹ.ದೇಶಪಾಂಡೆ ಸಭಾಭವನದಲ್ಲಿ ಬಸವ ಕೇಂದ್ರ ಆಯೋಜಿಸಿದ ಶ್ರಾವಣ ಮಾಸದ ಪ್ರತಿನಿತ್ಯ ವಚನೋತ್ಸವದಲ್ಲಿ ವಚನ ಪರಿಮಳ ಗ್ರಂಥ ಬಿಡುಗಡೆಗೊಳಿಸಿದ ಅವರು, ಶರಣರು ಸಮಾಜಕ್ಕೆ ಅನುಕೂಲಕರ ವೈಚಾರಿಕ ಸಿದ್ಧಾಂತಕ್ಕೆ ಬದ್ದರಾದರು. ಅನುಭವ ಮಂಟಪದಲ್ಲಿ ನಿತ್ಯ ವೈಚಾರಿಕ ಚಿಂತನೆಗಳು ನಡೆದವು. ಅಲ್ಲಿ ನಡೆದ ಚಿಂತನೆ, ಅನುಭವಗಳ ನುಡಿಗಳು ವಚನಗಳಾಗಿ ರೂಪುಗೊಂಡವು. ಭಕ್ತರಿಗಾಗಿ ಬಸವಣ್ಣನವರು ಧರ್ಮ, ವಚನ ರಚಿಸಿದರು ಹೊರತು ತಮ್ಮ ಸ್ವಾರ್ಥಕ್ಕಾಗಿ ಅಲ್ಲ. ಜಾತಿ, ಮತ,ಪಂಥಕ್ಕೆ ಮಹತ್ವ ನೀಡದ ಶರಣರು ಮಾನವೀಯತೆಗೆ ಮಹತ್ವ ಕೊಟ್ಟರು ಎಂದರು.
ಮಹಾಪೌರ ಈರೇಶ ಅಂಚಟಗೇರಿ ಮಾತನಾಡಿ, ಶರಣರ ವಚನಗಳೇ ಧರ್ಮ ಗ್ರಂಥ, ಇಷ್ಟಲಿಂಗವೇ ದೇವರು, ಕಾಯಕ ದಾಸೋಹ, ಶರಣರ ಸಂಘ,ಧರ್ಮ ಸೂತ್ರಗಳ ವಚನಗಳ ಅಧ್ಯಯನ ನಮಗೆಲ್ಲಾ ಮಾರ್ಗದರ್ಶಕಗಳು.ಬಸವಾದಿ ಶರಣರ ಪ್ರಯತ್ನದಿಂದ ಸಮಾಜದ ಹಾಗೂ ವ್ಯಕ್ತಿ ಸ್ವಾತಂತ್ರ್ಯ ವರ್ಣ ವರ್ಗ,ಲಿಂಗ ಬೇಧವು ಆತ್ಮವಿಮರ್ಶೆಯ ಜೊತೆಗೆ ವಿಫುಲಗೊಂಡು ಸಮಾಜ ವಿಮರ್ಶೆ ಮಾಡಿತು ಎಂದರು.
ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ಮುಗದ ಮಾತನಾಡಿ,ಬಸವಾದಿ ಶರಣರ ವಚನಗಳು ನಮ್ಮ ಬಾಳಿಗೆ ಬೆಳಕಾಗಿವೆ, ಅವುಗಳ ಅಧ್ಯಯನ ಜೊತೆ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಂತ ಅವಶ್ಯಕ.ಬಸವ ಕೇಂದ್ರದ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.ಬಸವ ಕೇಂದ್ರ ಗೌರವಾಧ್ಯಕ್ಷ ಡಾ.ವೀರಣ್ಣ ರಾಜೂರ ಅಧ್ಯಕ್ಷತೆ ವಹಿಸಿ, ಶ್ರಾವಣ ಮಾಸ ನಿಮಿತ್ತ ಒಂದು ತಿಂಗಳ ವರೆಗೆ ಪ್ರತಿನಿತ್ಯ ಮನೆ ಮನೆಯಲ್ಲಿ ವಚನೋತ್ಸವ ನಡೆಯಲಿದೆ. ಶಹರದ 15 ಬಡಾವಣೆಯ 500 ಕ್ಕೂ ಹೆಚ್ಚು ಮನೆಗಳಲ್ಲಿ ಏಕಕಾಲಕ್ಕೆ ವಚನ ವಿಶ್ಲೇಷÜಣೆ ಆಯೋಜನೆ ಮಾಡಿದ್ದು ಬಸವಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಡಾ. ಮಲ್ಲಿಕಾರ್ಜುನ ಬಾಗೇವಾಡಿ ನಿರೂಪಿಸಿದರು, ವಚನ ಪ್ರಾರ್ಥನೆ ಸುಪ್ರಿತಾ ಅಭಿಲಾಷ, ಸ್ವಾಗತ ಎಂ.ಜಿ.ಮಳಕೂರ, ವಂದನಾರ್ಪಣೆ ಕುಡಲಪ್ಪಾ ಕೊಪ್ಪದ ಮಾಡಿದರು.ಕಾರ್ಯದರ್ಶಿ ಶಿವಶರಣ ಕಲಬಶೆಟ್ಟರ, ಉಪಾಧ್ಯಕ್ಷ ಎಂ.ಎಂ.ಚೌಧರಿ,ಉಮೇಶ ಕಟಗಿ, ಬಸವಂತಪ್ಪ ತೋಟದ, ರಾಜು ಡಂಬಳ್ಳಿ, ಸುರೇಶ ವಾಣಿ, ಸಿದ್ದು ಕಲ್ಯಾಣಶೆಟ್ಟರ, ಅರುಣ ಮೋಡಿ, ಬಿ.ಬಿ.ಚಕ್ರಸಾಲಿ, ಸುಜಾತ ನಾಗನಗೌಡರ, ಲತಾ ಮಂಟಾ ಸುಧಾ ಕಬ್ಬೂರ, ಜ್ಯೋತಿ ಸಂಜಯಕುಮಾರ, ಶೈಲಜಾ ಮರಳಪ್ಪನವರ, ಎಂ.ಪಿ.ಹಳ್ಳಿಕೇರಿ ಇದ್ದರು.