ಬೆಳಗಾವಿಯ ಗಡಿಯಲ್ಲಿ ಕನ್ನಡಿಗರ ಮೇಲೆ ಪುಂಡಾಟಿಕೆ ನಡೆಸುವ ಮರಾಠಿಗರಿಗೆ ತಕ್ಕ ಪಾಠ ಕಲಿಸಲು ಕನ್ನಡ ಸಾಹಿತ್ಯ ಪರಿಷತ್ತು ಸೂಕ್ತ ನಿರ್ಣಯ ಕೈಗೊಳ್ಳಲಿ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಒತ್ತಾಯಿಸಿದರು.
ಜೋಯಿಡಾ (ಡಿ.18): ಬೆಳಗಾವಿಯ ಗಡಿಯಲ್ಲಿ ಕನ್ನಡಿಗರ ಮೇಲೆ ಪುಂಡಾಟಿಕೆ ನಡೆಸುವ ಮರಾಠಿಗರಿಗೆ ತಕ್ಕ ಪಾಠ ಕಲಿಸಲು ಕನ್ನಡ ಸಾಹಿತ್ಯ ಪರಿಷತ್ತು ಸೂಕ್ತ ನಿರ್ಣಯ ಕೈಗೊಳ್ಳಲಿ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಒತ್ತಾಯಿಸಿದರು. ತಾಲೂಕಿನ ಶ್ರೀಕ್ಷೇತ್ರ ಉಳವಿಯಲ್ಲಿ ನಡೆದ ಉಕ ಜಿಲ್ಲಾ 22ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರಂಭದಲ್ಲಿ ಪಂಚದ್ವಾರಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಾವೇರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಮುಂದಿನ ತಿಂಗಳು ನಡೆಯುತ್ತಿದೆ. ಮರಾಠಿಗರ ಪುಂಡಾಟಿಕೆ ವಿರುದ್ಧ ಧ್ವನಿ ಎತ್ತುವುದೇ ನಮ್ಮ ಉದ್ದೇಶ.
ರಾಜ್ಯ ಸರ್ಕಾರ ಈ ಸಮ್ಮೇಳನಕ್ಕೆ 20 ಕೋಟಿ ಬಿಡುಗಡೆ ಮಾಡುವ ಮೂಲಕ ಕನ್ನಡಿಗರ ಮನಸ್ಸನ್ನು ಗೆದ್ದಿದೆ. ಕನ್ನಡ ನಾಡನ್ನು ಒಡೆಯಲು ಪ್ರಯತ್ನಿಸುವವರಿಗೆ ತಕ್ಕ ಉತ್ತರ ನೀಡಬೇಕು. ಕನ್ನಡಿಗರು ಏನು ಎಂಬುದನ್ನು ತೋರಿಸಲು ಈ ಸಮ್ಮೇಳನದ ಸಿದ್ಧತೆ ಮಾಡುತ್ತಿದ್ದೇವೆ ಎಂದು ಹೇಳಿದರು. ಪಂಪನ ನಾಡು ಬನವಾಸಿ ಇರುವ ಈ ಜಿಲ್ಲಾ ಸಮ್ಮೇಳನದಿಂದ ಕನ್ನಡಿಗರಿಗೆ ಹೆಚ್ಚಿನ ಶಕ್ತಿ ಬರುತ್ತದೆ ಎಂದು ನಂಬಿದ್ದೇನೆ. ಈ ಜಿಲ್ಲಾ ಸಮ್ಮೇಳನಕ್ಕೆ ಶಾಂತಾರಾಮ ನಾಯಕರನ್ನು ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡುವ ಮೂಲಕ ಸಾಹಿತ್ಯ ಪರಿಷತ್ತಿನ ಕೀರ್ತಿ, ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದೀರಿ. ಶಾಂತಾರಾಮ ನಾಯಕರು ಅನೇಕರಿಗೆ ಮಾರ್ಗದರ್ಶಕರು ಎಂದರು.
Uttara Kannada: ಬಿಜೆಪಿಯಿಂದ ದೇಶಪ್ರೇಮದ ಸರ್ಟಿಫಿಕೇಟ್ ಬೇಡ: ಬಿ.ಕೆ.ಹರಿಪ್ರಸಾದ್
ಸಹಾಯಕ ಆಯುಕ್ತೆ ಜಯಲಕ್ಷ್ಮೀ ರಾಯಕೊಡ ಮಾತನಾಡಿ, ಜಿಲ್ಲೆಯ ಹೆಸರಲ್ಲೇ ಕನ್ನಡವಿದೆ. ಹೊಸ ತಲೆಮಾರಿಗೆ ಕನ್ನಡ ಕಲಿಸುವ ಕೆಲಸ ಕಸಾಪ ಮಾಡಬೇಕು. ನಾನು ಕನ್ನಡ ಕಲಿತವಳು. ನನಗೆ ಕೊಂಕಣಿ, ಮರಾಠಿ ಅರ್ಥವಾಗದ ಕಾರಣ ಕಚೇರಿ ಕೆಲಸದಲ್ಲಿ ತೊಂದರೆ ಆಗುತ್ತಿದೆ. ಮುಂದಿನ ಪೀಳಿಗೆಗೆ ಈ ತೊಂದರೆ ಆಗಬಾರದು ಎಂದರು. ಸಾಹಿತಿ ಭಾಗೀರಥಿ ಹೆಗಡೆ, ರೋಹಿದಾಸ ನಾಯಕ, ಸೈಯದ್ ಜಮೀರುಲ್ಲಾ ಶರೀಫ್, ಕಸಾಪ ನಡೆದು ಬಂದ ಹಾದಿ ಕುರಿತು ಮಾತನಾಡಿದರು. ನಂತರ ಶಾಂತಾರಾಮ ನಾಯಕರ ನೆನಪಿನ ಹಾಲಡಗಿ ರಾಮ ನಾಯ್ಕರ ‘ಉದಾತ್ತ ನಾರಾಯಣ’ ಪುಸ್ತಕವನ್ನು ಎನ್.ಆರ್. ನಾಯಕ ಬಿಡುಗಡೆ ಮಾಡಿದರು. ಪಂಚದ್ವಾರಗಳ ಬಗ್ಗೆ ಎನ್.ಆರ್. ಗಜು ಪರಿಚಯಿಸಿದರು.
ಹಿಂದಿನ ಅಧ್ಯಕ್ಷ ಸೈಯದ್ ಜಮೀರುಲ್ಲಾ ಶರೀಫ್ ಪ್ರಸಕ್ತ ಸಮ್ಮೇಳನದ ಅಧ್ಯಕ್ಷ ಶಾಂತಾರಾಮ ನಾಯಕ ಅವರಿಗೆ ಧ್ವಜ ಹಸ್ತಾಂತರಿಸಿದರು. ಮಾಜಿ ಶಾಸಕ ಸುನೀಲ ಹೆಗಡೆ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಕರ್ನಾಟಕದಲ್ಲಿ ಕನ್ನಡ ಮುಖ್ಯ ಭಾಷೆ ಆಗಬೇಕು ಸಾಹಿತ್ಯ ಪರಿಷತ್ತು ಕನ್ನಡ ಪರಿಚಯದ ಪಾಠ ಮಕ್ಕಳಿಗೆ ಮಾಡುವ ಮೂಲಕ ಕನ್ನಡ ಬೆಳೆಸಬೇಕು. ಮುಂದಿನ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಉತ್ತರಕನ್ನಡದಲ್ಲಿ ಆಗಲು ನನ್ನ ಸಹಕಾರವಿದೆ ಎಂದರು. ಜಾರ್ಜ್ ಫರ್ನಾಂಡಿಸ್, ಕಾರ್ಯಕ್ರಮದ ಆರಂಭದಲ್ಲಿ ರಾಷ್ಟಧ್ವಜ, ನಾಡಧ್ವಜ, ಕಸಾಪ ಧ್ವಜಗಳನ್ನು ಹಾರಿಸಲಾಯಿತು. ವಿಜೃಂಭಣೆಯಿಂದ ನಡೆದ ಮೆರವಣಿಗೆಗೆ ಪೂರ್ಣಕುಂಬದೊಂದಿಗೆ ವಿವಿಧ ಕಲಾ ತಂಡದವರು ಶಾಲಾ ಮಕ್ಕಳು, ಸಾಹಿತ್ಯಾಸಕ್ತರು ಭಾಗವಹಿಸಿ ಸರ್ವಾಧ್ಯಕ್ಷ ಶಾಂತಾರಾಮ ನಾಯಕರೊಂದಿಗೆ 1 ಕಿ.ಮೀ. ದೂರದಿಂದ ಜಿಲ್ಲಾಧ್ಯಕ್ಷ ವಾಸರೆ ಅವರೊಂದಿಗೆ ನಡೆದುಕೊಂಡು ವೇದಿಕೆಗೆ ಆಗಮಿಸಿದ್ದುದು ವಿಶೇಷವಾಗಿತ್ತು.
Uttara Kannada: ಅರಣ್ಯ ನಿವಾಸಿಗಳ ಬೃಹತ್ ಹೋರಾಟ: ಸರ್ಕಾರಕ್ಕೆ ಎಚ್ಚರಿಕೆ
ಕಾನೂನುಗಳು ಕನ್ನಡೀಕರಣವಾಗಲಿ: ಸರ್ಕಾರದ ಕಾನೂನುಗಳೆಲ್ಲ ಆಂಗ್ಲ ಭಾಷೆಯಲ್ಲಿವೆ. ಅವುಗಳನ್ನು ಕನ್ನಡೀಕರಿಸುವ ಹೊಣೆಯನ್ನು ಕಸಾಪ ಹೊರಬೇಕಿದೆ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎಸ್. ನಾಗಮೋಹನದಾಸ ಹೇಳಿದರು. ಉಕ ಜಿಲ್ಲಾ 22ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಜೋಯಿಡಾ ತಾಲೂಕು ಅತ್ಯಂತ ಹಿಂದುಳಿದಿದೆ. ಇಲ್ಲಿ ಬುಡಕಟ್ಟು ಮೂಲ ನಿವಾಸಿ ಜನಸಾಮಾನ್ಯರಿಗೆ ಕಾನೂನಿನ ಅರಿವು ಅವಶ್ಯಕವಾಗಿದೆ. ಕನ್ನಡ ಅನ್ನ ಕೊಡುವ ಭಾಷೆ ಆಗಬೇಕಾಗಿದೆ. ಹಸಿವಿನ ಭಾಷೆ ಕನ್ನಡವಾಗಬೇಕು. ಕನ್ನಡ ಕಲಿತರೆ ಎಲ್ಲವೂ ಸಿಗುತ್ತದೆ ಎನ್ನುವಂತಾಗಬೇಕು. ಜೋಯಿಡಾ ತಾಲೂಕು ಅತ್ಯಂತ ಹಿಂದುಳಿದಿದೆ. ಇಲ್ಲಿ ಬುಡಕಟ್ಟು ಮೂಲ ನಿವಾಸಿ ಜನಸಾಮಾನ್ಯರಿಗೆ ಕಾನೂನಿನ ಅರಿವು ಅವಶ್ಯಕವಾಗಿದೆ ಎಂದು ಅವರು ತಿಳಿಸಿದರು.