ಸೊಳ್ಳೆಗಳ ಕಡಿತದಿಂದ ಡೆಂಘೀ ಹರಡುತ್ತದೆ. ಈ ಅಂಗನವಾಡಿ ಕೇಂದ್ರದ ಸುತ್ತಲೂ ಸೊಳ್ಳೆ ಕಾಟ ವಿಪರೀತವಾಗಿದೆ. ಹಲವಾರು ಬಾರಿ ಗ್ರಾಮ ಪಂಚಾಯಿತಿಯಿಂದ ಫಾಗಿಂಗ್ ಮಾಡುವಂತೆ ಹಾಗೂ ಸೊಳ್ಳೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಅಂಗನವಾಡಿ ಶಿಕ್ಷಕರು, ಪಾಲಕರು, ಗ್ರಾಮಸ್ಥರು ಆಗ್ರಹಿಸಿದ್ದಾರೆ.
ರಾಣೆಬೆನ್ನೂರು(ಆ.21): ರಾಜ್ಯದಲ್ಲಿ ಹೆಚ್ಚುತ್ತಿರುವ ಡೆಂಘೀಯಿಂದ ಮಕ್ಕಳನ್ನು ರಕ್ಷಿಸಲು ಮುಂದಾಗಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲೂಕಿನ ವೈಟಿಹೊನ್ನತ್ತಿ ಅಂಗನವಾಡಿ ಕೇಂದ್ರಕ್ಕೆ 2 ಸೊಳ್ಳೆ ಪರದೆಗಳನ್ನು ವಿತರಿಸಿದೆ. ಇದರಿಂದಾಗಿ ಇಲ್ಲಿನ ಅಂಗನವಾಡಿಯ ಮಕ್ಕಳು ಸೊಳ್ಳೆ ಪರದೆಯೊಳಗೆ ಕುಳಿತುಕೊಂಡು ಪಾಠ ಕಲಿಯುತ್ತಿದ್ದಾರೆ.
ಸೊಳ್ಳೆಗಳ ಕಡಿತದಿಂದ ಡೆಂಘೀ ಹರಡುತ್ತದೆ. ಈ ಅಂಗನವಾಡಿ ಕೇಂದ್ರದ ಸುತ್ತಲೂ ಸೊಳ್ಳೆ ಕಾಟ ವಿಪರೀತವಾಗಿದೆ. ಹಲವಾರು ಬಾರಿ ಗ್ರಾಮ ಪಂಚಾಯಿತಿಯಿಂದ ಫಾಗಿಂಗ್ ಮಾಡುವಂತೆ ಹಾಗೂ ಸೊಳ್ಳೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಅಂಗನವಾಡಿ ಶಿಕ್ಷಕರು, ಪಾಲಕರು, ಗ್ರಾಮಸ್ಥರು ಆಗ್ರಹಿಸಿದ್ದಾರೆ.
undefined
ಹಾವೇರಿಯಲ್ಲಿ ನಿರ್ಮಾಣವಾಗ್ತಿದೆ ಪುನೀತ್ ರಾಜಕುಮಾರ ದೇವಸ್ಥಾನ!
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಈ ಅಂಗನವಾಡಿ ಮಕ್ಕಳು ಸೊಳ್ಳೆಗಳಿಂದ ಕಚ್ಚಿಸಿಕೊಳ್ಳದಿರಲಿ ಎಂದು ಸೊಳ್ಳೆ ಪರದೆಯನ್ನು ನೀಡಿದ್ದಾರೆ. ಒಟ್ಟು 22 ಮಕ್ಕಳು ಅಂಗನವಾಡಿಯಲ್ಲಿದು. 2 ಸೊಳ್ಳೆ ಪರದೆ ನೀಡಲಾಗಿದೆ. ಅದರೊಳಗಡೆ ಪಾಠ ನಡೆಯುತ್ತಿದೆ.