ಬೆಂಗ್ಳೂರಿನ ಜಿಗಣಿಯಲ್ಲಿ ಚಿರತೆ ಓಡಾಟ: ಮನೆಯಿಂದ ಹೊರಬಾರದೆ ಜನರ ಪೀಕಲಾಟ..!

By Girish Goudar  |  First Published Sep 1, 2024, 7:29 PM IST

ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಕ್ಯಾಲಸನಹಳ್ಳಿ ಗ್ರಾಮದಲ್ಲಿ. ಜಿಗಣಿ ಸಮೀಪದ ಕ್ಯಾಲಸನಹಳ್ಳಿಯಲ್ಲಿ ಚಿರತೆಯೊಂದು ಕಾಣಿಸಿಕೊಂಡಿದೆ. ಖಾಸಗಿ ಲೇಔಟ್‌ನಲ್ಲಿ ಚಿರತೆ ಓಡಾಡಿದೆ. ನಸುಕಿನ ಜಾವ 3 ಗಂಟೆಯ ಸುಮಾರಿಗೆ ಚಿರತೆ ಓಡಾಡಿದೆ. ನಾಯಿಗಳು ಬೊಗಳೋ ಶಬ್ಧ ಕೇಳಿ ಸಿಸಿಟಿವಿ ಪರಿಶೀಲನೆ ವೇಳೆ ಚಿರತೆ ಓಡಾಟ ದೃಶ್ಯ ಕಂಡುಬಂದಿದೆ. 


ಬೆಂಗಳೂರು(ಸೆ.01):  ಚಿರತೆಯೊಂದು ಕಾಡಿನಿಂದ ನಾಡಿಗೆ ಬಂದಿದೆ. ಹೌದು, ಗ್ರಾಮದ ಖಾಸಗಿ ಬಡಾವಣೆಯಲ್ಲಿ ಚಿರತೆ ಬಿಂದಾಸ್ ಆಗಿ ಓಡಾಟ ನಡೆಸಿದೆ. ಸಿಸಿಟಿವಿಯಲ್ಲಿ ಚಿರತೆ ಓಡಾಟದ ದೃಶ್ಯ ಸೆರೆಯಾಗಿದೆ. ಚಿರತೆಯ ಬಿಂದಾಸ್‌ ಓಡಾಟ ಕಂಡು ಜನರು ಬೆಚ್ಚಿಬಿದ್ದಿದ್ದಾರೆ. 

ಈ ಘಟನೆ ನಡೆದಿರೋದು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಕ್ಯಾಲಸನಹಳ್ಳಿ ಗ್ರಾಮದಲ್ಲಿ. ಜಿಗಣಿ ಸಮೀಪದ ಕ್ಯಾಲಸನಹಳ್ಳಿಯಲ್ಲಿ ಚಿರತೆಯೊಂದು ಕಾಣಿಸಿಕೊಂಡಿದೆ. 

Latest Videos

undefined

ಚಾಮರಾಜನಗರದಲ್ಲಿ ಚಿರತೆ ದಾಳಿಗೆ ಹಸು ಬಲಿ: ಅರಣ್ಯಾಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ

ಖಾಸಗಿ ಲೇಔಟ್‌ನಲ್ಲಿ ಚಿರತೆ ಓಡಾಡಿದೆ. ನಸುಕಿನ ಜಾವ 3 ಗಂಟೆಯ ಸುಮಾರಿಗೆ ಚಿರತೆ ಓಡಾಡಿದೆ. ನಾಯಿಗಳು ಬೊಗಳೋ ಶಬ್ಧ ಕೇಳಿ ಸಿಸಿಟಿವಿ ಪರಿಶೀಲನೆ ವೇಳೆ ಚಿರತೆ ಓಡಾಟ ದೃಶ್ಯ ಕಂಡುಬಂದಿದೆ. 

ಚಿರತೆ ಭಯದಲ್ಲಿರುವ ಗ್ರಾಮಸ್ಥರು ಮನೆಯಿಂದ ಹೊರಬಾರದೆ ಆತಂಕದಲ್ಲಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳ ದೌಡಾಯಿಸಿದ್ದಾರೆ. 

click me!