ಪಶ್ಚಿಮ ಘಟ್ಟಗಳ ತಪ್ಪಲು, ಅರಣ್ಯ ಇರೋದು ಮೋಜು ಮಸ್ತಿಗಲ್ಲ: ತಮ್ಮದೇ ಅರಣ್ಯ ಇಲಾಖೆ ವಿರುದ್ಧ ಸಚಿವ ಖಂಡ್ರೆ ಗರಂ..!

By Girish Goudar  |  First Published Sep 1, 2024, 6:57 PM IST

ಸಿಸಿಎಫ್ ದರ್ಜೆಯ ಅಧಿಕಾರಿಗಳು ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿ, ಅರಣ್ಯ, ವನ್ಯಜೀವಿ ಕಾಯ್ದೆಯಡಿ ಪ್ರಕರಣ‌ ದಾಖಲಿಸಲು ಸೂಚನೆ ನೀಡಿದ ಅರಣ್ಯ ಇಲಾಖೆ ಸಚಿವ ಈಶ್ವರ್‌ ಖಂಡ್ರೆ 
 


ಚಿಕ್ಕಮಗಳೂರು(ಸೆ.01):  ಪಶ್ಚಿಮ ಘಟ್ಟಗಳ ತಪ್ಪಲು, ಅರಣ್ಯ ಇರೋದು ಮೋಜು ಮಸ್ತಿಗಲ್ಲ. ಅರಣ್ಯ ಇಲಾಖೆ ವಿರುದ್ಧ ಅರಣ್ಯ ಇಲಾಖೆ ಸಚಿವ ಈಶ್ವರ್‌ ಖಂಡ್ರೆ ಕಿಡಿ ಕಾರಿದ್ದಲ್ಲದೇ ತನಿಖೆಗೆ ಆದೇಶಿಸಿದ್ದಾರೆ.  ಮೂಡಿಗೆರೆಯಲ್ಲಿ ನಡೆದ ಫೋರ್ ವೀಲ್ ರ್ಯಾಲಿ ವಿರುದ್ಧ ತನಿಖೆಗೆ ಆದೇಶಿಸಿದ್ದಾರೆ. 

ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಸಮೀಪದ ಭೈರಾಪುರ-ಹೊಸಕೆರೆಯಲ್ಲಿ ಜೀಪ್‌ ರ್ಯಾಲಿ ನಡೆದಿತ್ತು. ಆನೆ ಕಾರಿಡಾರ್ ವ್ಯಾಪ್ತಿಯ 9 ಗುಡ್ಡಗಳ ವ್ಯಾಪ್ತಿಯಲ್ಲಿ ರ್ಯಾಲಿ ನಡೆದಿತ್ತು. ಸುಮಾರು 80ಕ್ಕೂ ಹೆಚ್ಚು ಜೀಪ್ ಗಳು ರ್ಯಾಲಿಯಲ್ಲಿ ಪಾಲ್ಗೊಂಡಿದ್ದವು. 

Latest Videos

undefined

ಚಿಕ್ಕಮಗಳೂರು: ಪಶ್ಚಿಮಘಟ್ಟದ ಸಾಲಿನಲ್ಲಿ ಜೀಪ್‌ ರೇಸ್‌, ಪರಿಸರಪ್ರೇಮಿಗಳ ತೀವ್ರ ಆಕ್ಷೇಪ

ಸಿಸಿಎಫ್ ದರ್ಜೆಯ ಅಧಿಕಾರಿಗಳು ತನಿಖೆ ನಡೆಸಿ ವರದಿ ನೀಡುವಂತೆ ಸಚಿವ ಈಶ್ವರ್‌ ಖಂಡ್ರೆ ಸೂಚನೆ ನೀಡಿದ್ದಾರೆ. ಅರಣ್ಯ, ವನ್ಯಜೀವಿ ಕಾಯ್ದೆಯಡಿ ಪ್ರಕರಣ‌ ದಾಖಲಿಸಲು ಸೂಚನೆ ನೀಡಿದ್ದಾರೆ. 

click me!