ಹುಳಿಯಾರುವಿನಲ್ಲಿ ಚರಂಡಿಗೆ ಬಿದ್ದು ವ್ಯಕ್ತಿ ಸಾವು

By Web Desk  |  First Published Oct 3, 2019, 12:55 PM IST

ಹುಳಿಯಾರುವಿನಲ್ಲಿ ನಿರ್ಮಾಣ ಹಂತದಲ್ಲಿದ್ದ ಚರಂದಿಗೆ ಬಿದ್ದು ವ್ಯಕ್ತಿ ಸಾವು| ಮೃತ ವ್ಯಕ್ತಿ ವಾಹನಗಳಿಗೆ ಬ್ಲೇಡ್‌ ಕಟ್ಟುವ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು| ಈ ಕೆಲಸಕ್ಕಾಗಿ ಹುಳಿಯಾರಿಗೆ ಬಂದು ಸ್ಥಳೀಯ ಗ್ಯಾರೇಜ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು| ರಾತ್ರಿ ಮಳೆ ಸುರಿದ ಪರಿಣಾಮ ಚರಂಡಿಯಲ್ಲಿ ಆಳೆತ್ತರಕ್ಕೆ ಮಳೆ ನೀರು ನಿಂತಿದ್ದು ಚರಂಡಿ ಒಳಗಿನ ಮಣ್ಣಿನ ಉಸುಬಿಗೆ ಸಿಲುಕಿ ಸಾವನ್ನಪ್ಪಿರಬಹುದೆಂದು ಶಂಕೆ ವ್ಯಕ್ತವಾಗಿದೆ| 


ಹುಳಿಯಾರು(ಅ.3): ನಿರ್ಮಾಣ ಹಂತದಲ್ಲಿದ್ದ ಚರಂಡಿಗೆ ವ್ಯಕ್ತಿಯೋರ್ವ ಬಿದ್ದು ಸಾವನ್ನಪ್ಪಿದ ಘಟನೆ ಹುಳಿಯಾರಿನಲ್ಲಿ ಬುಧವಾರ ಬೆಳಗ್ಗೆ ಜರುಗಿದೆ.

ಮೃತನನ್ನು ತುಮಕೂರಿನ ಭೀಮಸಂದ್ರದ ನಿವಾಸಿ ಶಾನವಾಸ್‌(50) ಎಂದು ಗುರುತಿಸಲಾಗಿದೆ. ಈತ ವಾಹನಗಳಿಗೆ ಬ್ಲೇಡ್‌ ಕಟ್ಟುವ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ. ಈ ಕೆಲಸಕ್ಕಾಗಿ ಹುಳಿಯಾರಿಗೆ ಬಂದು ಸ್ಥಳೀಯ ಗ್ಯಾರೇಜ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು.

Tap to resize

Latest Videos

ಎಂದಿನಂತೆ ಬೆಳಗ್ಗೆ ಮನೆಯಿಂದ ಹೊರಬಂದ ಇವರು ಆಶ್ಚರ್ಯಕರ ರೀತಿಯಲ್ಲಿ ರಾಮಗೋಪಾಲ್‌ ಸರ್ಕಲ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ ಚರಂಡಿಗೆ ಬಿದ್ದಿದ್ದಾರೆ. ಮಂಗಳವಾರ ಇಡೀ ರಾತ್ರಿ ಮಳೆ ಸುರಿದ ಪರಿಣಾಮ ಚರಂಡಿಯಲ್ಲಿ ಆಳೆತ್ತರಕ್ಕೆ ಮಳೆ ನೀರು ನಿಂತಿದ್ದು ಚರಂಡಿ ಒಳಗಿನ ಮಣ್ಣಿನ ಉಸುಬಿಗೆ ಸಿಲುಕಿ ಸಾವನ್ನಪ್ಪಿರಬಹುದೆಂದು ಶಂಕೆ ವ್ಯಕ್ತವಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಸಾವಿಗೆ ಕಾಮಗಾರಿಯ ಗುತ್ತಿಗೆದಾರರ ಬೇಜವಾಬ್ದಾರಿಯೇ ಕಾರಣವಾಗಿದ್ದು, ಗುಂಡಿ ತೆಗೆದ ತಕ್ಷಣವೇ ಕಾಂಕ್ರಿಟ್‌ ಕೆಲಸ ಮಾಡಿದ್ದರೆ ಸಾವು ಸಂಭವಿಸುತ್ತಿರಲಿಲ್ಲ. ಹಾಗಾಗಿ ಮೃತರ ಕುಟುಂಬಕ್ಕೆ ಪರಿಹಾರ ಕೊಡಬೇಕು. ಇಲ್ಲವಾದಲ್ಲಿ ಹೆದ್ದಾರಿ ಬಂದ್‌ ಮಾಡಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಪಟ್ಟು ಹಿಡಿದಿದ್ದರು. ಪೊಲೀಸರು ಮಧ್ಯ ಪ್ರವೇಶಿಸಿ ಕುಟುಂಬದವರ ಮನವೊಲಿಸಿ ಶವವನ್ನು ಮೃತರ ಊರಿಗೆ ಕಳುಹಿಸಿಕೊಡಲಾಗಿದೆ.
 

click me!