ದಾವಣಗೆರೆ: ಚಿರತೆ ಹಾವಳಿಗೆ ಅವಳಿ ತಾಲೂಕಿನ ಜನ ಕಂಗಾಲು

By Kannadaprabha News  |  First Published May 31, 2023, 3:49 PM IST

ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳÜ ಕೆಲವು ಗ್ರಾಮಗಳ ಜಮೀನುಗಳು ಹಾಗೂ ತೋಟಗಳಲ್ಲಿ ಕಳೆದ 10 ದಿನಗಳಿಂದ 2 ಚಿರತೆಗಳು ಹಾಗೂ 1 ಚಿರತೆ ಮರಿ ಸೇರಿದಂತೆ ಒಟ್ಟು 3 ಚಿರತೆಗಳು ಕಾಣಿಸಿಕೊಂಡು ವಿವಿಧ ಗ್ರಾಮಗಳ ಗ್ರಾಮಸ್ಥರನ್ನು ಹಾಗೂ ರೈತರನ್ನು ನಿದ್ದೆಗೆಡಿಸಿವೆ.


ಹೊನ್ನಾಳಿ (ಮೇ.31) : ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳÜ ಕೆಲವು ಗ್ರಾಮಗಳ ಜಮೀನುಗಳು ಹಾಗೂ ತೋಟಗಳಲ್ಲಿ ಕಳೆದ 10 ದಿನಗಳಿಂದ 2 ಚಿರತೆಗಳು ಹಾಗೂ 1 ಚಿರತೆ ಮರಿ ಸೇರಿದಂತೆ ಒಟ್ಟು 3 ಚಿರತೆಗಳು ಕಾಣಿಸಿಕೊಂಡು ವಿವಿಧ ಗ್ರಾಮಗಳ ಗ್ರಾಮಸ್ಥರನ್ನು ಹಾಗೂ ರೈತರನ್ನು ನಿದ್ದೆಗೆಡಿಸಿವೆ.

ಒಂದು ವಾರದ ಹಿಂದೆ ಹೊನ್ನಾಳಿ ತಾಲೂಕಿನ ಮಾರಿಕೊಪ್ಪ ಗ್ರಾಮದ ಬಳಿ ಹಾಗೂ ನ್ಯಾಮತಿ ಗ್ರಾಮದ ಕೆಲ ತೋಟಗಳಲ್ಲಿ ಓಡಾಡಿಕೊಂಡಿದ್ದ ಚಿರತೆಯನ್ನು ಕಂಡ ರೈತರು ತಕ್ಷಣ ಅರಣ್ಯ ಇಲಾಖೆಯವರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯವರು ಇಡೀ ದಿನ ಚಿರತೆ ಪತ್ತೆಗಾಗಿ ಪ್ರಯತ್ನ ಮಾಡಿದ್ದರೂ ಚಿರತೆ ಮಾತ್ರ ಅರಣ್ಯ ಇಲಾಖೆಯವರಿಗೆ ಕಾಣಿಸಿಕೊಳ್ಳಲಿಲ್ಲ.

Latest Videos

undefined

 

Leopard death: ಶಿವಮೊಗ್ಗದಲ್ಲಿ ಉರುಳಿಗೆ ಸಿಲುಕಿ ಚಿರತೆ ಸಾವು!

ಅರಣ್ಯ ಇಲಾಖೆ ಸಿಬ್ಬಂದಿ ಹೊನ್ನಾಳಿ ಪಟ್ಟಣದ ತುಂಗಭದ್ರಾ ಬಡಾವಣೆಗೆ ಹೊಂದಿಕೊಂಡಿರುವ ರೈತ ಚಂದ್ರಕುಮಾರ ಎಂಬುವವರ ಅಡಕೆ ತೋಟದಲ್ಲಿ ಬೋನು ಇರಿಸಿ ಚಿರತೆ ಸೆರೆಗೆ ಪ್ರಯತ್ನ ಮಾಡಿದ್ದಾರೆ. ನಂತರ ಮಾರಿಕೊಪ್ಪ ಗ್ರಾಮ ಸೇರಿದಂತೆ ಇತರ ಗ್ರಾಮಗಳ ತೋಟಗಳಲ್ಲಿ ಚಿರತೆ ಮರಿ ಸೇರಿದಂತೆ 3 ಚಿರತೆಗಳನ್ನು ರೈತರು ಕಂಡು ಕಂಗಾಲಾಗಿದ್ದಾರೆ.

ಅರಣ್ಯ ಇಲಾಖೆಯವರು ಮಾರಿಕೊಪ್ಪ ಗ್ರಾಮದಲ್ಲಿ ಹಾಗೂ ತುಂಗಭದ್ರಾ ಬಡಾವಣೆಯಲ್ಲಿ ಸಾರ್ವಜನಿಕರಿಗೆ ಒಬ್ಬೊಬ್ಬರಾಗಿ ಸಂಚಾರ ಮಾಡಬೇಡಿ, ಹೊರಗೆ ಹೋಗುವುದಿದ್ದರೆ 2ರಿಂದ 4 ಜನರೊಂದಿಗೆ ಒಟ್ಟಿಗೆ ಸಂಚರಿಸಿ ಎಂದು ಧ್ವನಿವರ್ಧಕದ ಮೂಲಕ ಸಾರ್ವಜನಿಕವಾಗಿ ಸೂಚನೆ ಈಗಾಗಲೇ ನೀಡಿದ್ದಾರೆ.

ಚಿರತೆಗಳ ಸೆರೆಗಾಗಿ ಕೇವಲ ಒಂದು ಬೋನು ಇಟ್ಟರೆ ಸಾಲದು. ಮಾರಿಕೊಪ್ಪ ಚೆಕ್‌ಡ್ಯಾಂ ಸೇರಿದಂತೆ ಇನ್ನು 2ರಿಂದ 3 ಬೋನುಗಳನ್ನು ಅರಣ್ಯ ಇಲಾಖೆಯವರು ಬೇರೆ, ಬೇರೆ ಕಡೆ ಸ್ಥಾಪಿಸಿದರೆ ಚಿರತೆಗಳು ಸೆರೆಯಾಗುತ್ತವೆ ಎಂದು ರೈತರು ಹೇಳಿದ್ದಾರೆ.

ಅರಣ್ಯ ಇಲಾಖೆಯವರು ಸದ್ಯಕ್ಕೆ ರೈತರು ತಮ್ಮ ಜಮೀನುಗಳ ಕಡೆ ಹೋಗಬೇಡಿ ಎಂದು ಹೇಳಿದ್ದಾರೆ. ಮುಂಗಾರು ಪ್ರಾರಂಭವಾಗಿರುವ ಪ್ರಯುಕ್ತ ಹಾಗೂ ತೋಟಗಳಿಗೆ ನೀರು ಬಿಡಲು ರೈತರು ಜಮೀನುಗಳ, ತೋಟಗಳ ಕಡೆ ಹೋಗಲೇಬೇಕು, ಅರಣ್ಯ ಇಲಾಖೆಯವರು ಸೂಕ್ತ ರಕ್ಷಣೆ ನೀಡಬೇಕು ಹಾಗೂ ಹೆಚ್ಚು ಬೋನುಗಳನ್ನು ಅಳವಡಿಸಬೇಕು ಎಂದು ಹಿರಿಯ ರೈತ ಚಂದ್ರಕುಮಾರ್‌ ಒತ್ತಾಯಿಸಿದ್ದಾರೆ.

ಇಬ್ಬರು ಹೆಣ್ಮಕ್ಕಳನ್ನು ಸಾವಿನ ದವಡೆಯಿಂದ ಕಾಪಾಡಲು ಬರಿಗೈಯಲ್ಲಿ ಚಿರತೆಯೊಂದಿಗೆ ಹೋರಾಡಿದ ಕಾರ್ಮಿಕ

ನ್ಯಾಮತಿ ತಾಲೂಕಿನ ಗ್ರಾಮವೊಂದರ ರೈತರ ಜಮೀನಿನಲ್ಲಿ ಚಿರತೆಯೊಂದು ಹಸುವಿನ ಕರುವನ್ನು ಕೊಂದು ಹಾಕಿರುವ ಘಟನೆ ಶನಿವಾರ ನಡೆದಿದೆ. ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳಲ್ಲಿ ಚಿರತೆ ಕಾಟ ಹೆಚ್ಚಾಗಿದ್ದು, ಮುಂಗಾರು ಮಳೆ ಆರಂಭವಾಗಿರುವ ಹಿನ್ನೆಲೆಯಲ್ಲಿ ರೈತರು ಆತಂಕ ಮತ್ತಷ್ಟುಹೆಚ್ಚಾಗಿದೆ.

click me!