ಉತ್ತರಕನ್ನಡ: ಕಾಡು ಬೆಕ್ಕು ಹಿಡಿಯಲು ಹೋಗಿ ವಿದ್ಯುತ್ ತಂತಿ ತಗುಲಿ ಚಿರತೆ ಸಾವು

Published : Dec 01, 2023, 11:15 PM IST
ಉತ್ತರಕನ್ನಡ: ಕಾಡು ಬೆಕ್ಕು ಹಿಡಿಯಲು ಹೋಗಿ ವಿದ್ಯುತ್ ತಂತಿ ತಗುಲಿ ಚಿರತೆ ಸಾವು

ಸಾರಾಂಶ

ಜೀವ ಉಳಿಸಿಕೊಳ್ಳಲು ಕಾಡು ಬೆಕ್ಕು ಲೈನ್ ಕಂಬ ಹತ್ತಿತ್ತು, ಹಸಿದ ಚಿರತೆ ಕೂಡಾ ಕಾಡು ಬೆಕ್ಕು ಹಿಡಿಯಲು ವಿದ್ಯುತ್ ಕಂಬ ಏರಿತ್ತು. ಈ ವೇಳೆ ವಿದ್ಯುತ್ ತಂತಿ ತಗುಲಿ ಚಿರತೆ ಹಾಗೂ ಕಾಡುಬೆಕ್ಕು ಮೃತಪಟ್ಟಿದೆ.   

ಉತ್ತರಕನ್ನಡ(ಡಿ.01): ಕಾಡು ಬೆಕ್ಕು ಹಿಡಿಯಲು ಹೋದ ಚಿರತೆಯೊಂದು ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿ ಸಮೀಪದ ಬೆಳಗಲ್ ಮನೆ ಬಳಿ ಇಂದು(ಶುಕ್ರವಾರ) ಸಂಜೆ ನಡೆದಿದೆ. 

ಜೀವ ಉಳಿಸಿಕೊಳ್ಳಲು ಕಾಡು ಬೆಕ್ಕು ಲೈನ್ ಕಂಬ ಹತ್ತಿತ್ತು, ಹಸಿದ ಚಿರತೆ ಕೂಡಾ ಕಾಡು ಬೆಕ್ಕು ಹಿಡಿಯಲು ವಿದ್ಯುತ್ ಕಂಬ ಏರಿತ್ತು. ಈ ವೇಳೆ ವಿದ್ಯುತ್ ತಂತಿ ತಗುಲಿ ಚಿರತೆ ಹಾಗೂ ಕಾಡುಬೆಕ್ಕು ಮೃತಪಟ್ಟಿದೆ. 

ನಡು ರಸ್ತೆಯಲ್ಲಿ ರಿಷಬ್‌ಗೆ ಶಾಕ್ ಕೊಟ್ಟ ಪೊಲೀಸರು: ಆದರೆ ಶೆಟ್ಟರ ಸರಳತೆಗೆ ಫಿದಾ ಆದ ಸಿಬ್ಬಂದಿ!

ಘಟನಾ ಸ್ಥಳಕ್ಕೆ ಡಿಎಫ್ಓ. ಅಜ್ಜಯ್ಯ ಹಾಗೂ ಆರ್‌ಎಫ್‌ಓ ಶಿವಾನಂದ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಮಾರು ಮೂರು ವರ್ಷ ಪ್ರಾಯದ ಚಿರತೆ ಎಂದು ತಿಳಿದು ಬಂದಿದೆ.  

PREV
Read more Articles on
click me!

Recommended Stories

ಆತಂಕದ ವಿಷಯ: ಬೆಂಗಳೂರಿನಲ್ಲಿ 11 ವರ್ಷದ ಮಕ್ಕಳಿಗೂ ಡ್ರಗ್ಸ್‌ ಚಟ!
ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!