ಚಾಮರಾಜನಗರ: 7 ವರ್ಷ ಕಳೆದ್ರೂ ನಿವೇಶನ ಕಳೆದುಕೊಂಡವರಿಗೆ ಸಿಗದ ಪರಿಹಾರ: ಜಿಲ್ಲಾಡಳಿತ ವಿರುದ್ಧ ಸಂತ್ರಸ್ಥರ ಆಕ್ರೋಶ

By Girish GoudarFirst Published Dec 1, 2023, 10:15 PM IST
Highlights

ರಸ್ತೆ ಅಗಲೀಕರಣ ಸಮಯದಲ್ಲಿ ನಿವೇಶನಗಳನ್ನ ಕಳೆದುಕೊಂಡವರಿಗೆ ನಗರ ಸಭೆ ಒಂದು ಅಶ್ವಾನಸೆ ನೀಡಿತ್ತು. ಬೇರೆಡೆ ನಿವೇಶ ನೀಡಿ ಸೂಕ್ತ ಪರಿಹಾರದ ಭರವಸೆ ನೀಡಿತ್ತು ಹೀಗೆ ನಗರಸಭೆ ನೀಡಿದ ಭರವಸೆ ಬೆನ್ನಲ್ಲೇ ನಿವೇಶನ ಕಳೆದುಕೊಂಡವರು ಪರಿಹಾರದ ಭರವಸೆ ಹಿನ್ನಲೆ ಸುಮ್ಮನಾಗಿದ್ರು. ಆದ್ರೆ 7 ವರ್ಷ ಕಳೆದ್ರೂ ನಗರಸಭೆ ಇನ್ನು ಪರಿಹಾರ ನೀಡದ ಹಿನ್ನಲೆ ಈಗ ಸಂತ್ರಸ್ಥರು ನಗರಸಭೆ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ.
 

ವರದಿ- ಪುಟ್ಟರಾಜು.ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ

ಚಾಮರಾಜನಗರ(ಡಿ.01): ಅವ್ರೆಲ್ಲಾ ರಸ್ತೆ ಅಗಲೀಕರಣಕ್ಕಾಗಿ ತಮ್ಮ ನಿವೇಶನ ಹಾಗೂ ಜಾಗವನ್ನ ಬಿಟ್ಟು ಕೊಟ್ಟಿದ್ರು. 2016 ರಲ್ಲಿ ಚಾಮರಾಜನಗರ ನಗರ ಸಭೆ ರಸ್ತೆ ಅಗಲೀಕರಣ ಸಹ ಮಾಡಿತ್ತು. ನಿವೇಶನ ಕಳೆದು ಕೊಂಡವರಿಗೆ ಸೂಕ್ತ ಪರಿಹಾರ ನೀಡಿದ್ದ ಜಿಲ್ಲಾಡಳಿತ 7 ವರ್ಷ ಕಳೆದ್ರೂ ಇನ್ನು ಒಂದೇ ಒಂದು ಬಿಡಿಗಾಸನ್ನ ಸಹ ನೀಡಿಲ್ಲ. ಇದರಿಂದ ಬೇಸತ್ತ ಸಂತ್ರಸ್ಥರು ಜಿಲ್ಲಾಡಳಿತ ವಿರುದ್ಧ ಕೆಂಡ ಕಾರಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ನಿಮ್ಮ ಮುಂದೆ. 

ಕಣ್ಣಾಡಿಸಿದ ಕಡೆಯಲ್ಲಾ ಕಾಂಕ್ರೀಟ್ ರಸ್ತೆ, ಸುಸಜ್ಜಿತ ರಸ್ತೆಯ ಪಕ್ಕದಲ್ಲಿ ಇರುವ ಅರ್ಧಂಬರ್ದ ಕೆಡವಿದ ಕಟ್ಟಡಗಳು. ಈ ಎಲ್ಲಾ ದೃಶ್ಯ ಕಣ್ಣಿಗೆ ರಾಚಿದ್ದು ಚಾಮರಾಜನಗರದಲ್ಲಿ. 2016ರಲ್ಲಿ ರಸ್ತೆ ಅಗಲೀಕರಣ ನಡೆಸುವ ಸಲುವಾಗಿ ನಗರಸಭೆ ರಸ್ತೆಯ ಅಕ್ಕ ಪಕ್ಕ ಇದ್ದ ನಿವೇಶನಗಳನ್ನ ಒತ್ತುವರಿ ಮಾಡಿ ಹೊಡೆದು ಹಾಕಿತ್ತು. ಹೀಗೆ ರಸ್ತೆ ಅಗಲೀಕರಣ ಸಮಯದಲ್ಲಿ ನಿವೇಶನಗಳನ್ನ ಕಳೆದುಕೊಂಡವರಿಗೆ ನಗರ ಸಭೆ ಒಂದು ಅಶ್ವಾನಸೆ ನೀಡಿತ್ತು. ಬೇರೆಡೆ ನಿವೇಶ ನೀಡಿ ಸೂಕ್ತ ಪರಿಹಾರದ ಭರವಸೆ ನೀಡಿತ್ತು ಹೀಗೆ ನಗರಸಭೆ ನೀಡಿದ ಭರವಸೆ ಬೆನ್ನಲ್ಲೇ ನಿವೇಶನ ಕಳೆದುಕೊಂಡವರು ಪರಿಹಾರದ ಭರವಸೆ ಹಿನ್ನಲೆ ಸುಮ್ಮನಾಗಿದ್ರು. ಆದ್ರೆ 7 ವರ್ಷ ಕಳೆದ್ರೂ ನಗರಸಭೆ ಇನ್ನು ಪರಿಹಾರ ನೀಡದ ಹಿನ್ನಲೆ ಈಗ ಸಂತ್ರಸ್ಥರು ನಗರಸಭೆ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ.

ಭ್ರೂಣ ಹತ್ಯೆಗೆ ಒಳಗಾದವರಿಗೂ ಕಠಿಣ ಶಿಕ್ಷೆ ಆಗಲಿ: ಸಚಿವ ವೆಂಕಟೇಶ್

ಇನ್ನೂ ಈ ಪ್ರಕರಣದ ಕುರಿತು ನಗರಸಭೆ ಹೇಳುವುದೆ ಬೇರೆ. ಈಗಾಗ್ಲೆ ನಿವೇಶನ ಕಳೆದು ಕೊಂಡವರಿಗೆ ಬೇರೆಡೆ ಜಾಗವನ್ನ ಗುರುತು ಮಾಡಲಾಗಿದೆ. ಆದ್ರೆ ಆ ಸ್ಥಳಕ್ಕೆ ಹೋಗಲು ಸಂತ್ರಸ್ಥರು ಒಪ್ಪುತ್ತಿಲ್ಲ ಜೊತೆಗೆ ರಾಜ್ಯ ಸರ್ಕಾರದಿಂದ ಪರಿಹಾರ ಇನ್ನು ಬಿಡುಗಡೆ ಆಗಿಲ್ಲ ಜೊತೆಗೆ ನಿವೇಶನವನ್ನ ಕಳೆದು ಕೊಂಡವರು ಕೋರ್ಟ್ ಮೆಟ್ಟಿಲೇರಿದ್ದಾರೆ ಈ ಹಿನ್ನಲೆಯಲ್ಲಿ ಇನ್ನೂ ಪರಿಹಾರ ನೀಡಲು ಸಾಧ್ಯವಾಗಿಲ್ಲ ಎಂಬುದು ನಗರಸಭೆಯ ವಾದ. 

ಒಟ್ಟಾರೆ ಅಭಿವೃದ್ಧಿ ವಿಚಾರವನ್ನ ಮುಂದಿಟ್ಟು ನಗರಸಭೆ ಏನೋ ಡೆಮಾಲಿಷನ್ ಕಾರ್ಯ ಮಾಡಿದೆ. ಹೀಗೆ 7 ವರ್ಷಗಳ ಹಿಂದೆ ಡೆಮಾಲಿಷನ್ ಕಾರ್ಯ ಮಾಡಿದ್ರು ಇನ್ನು ಸೂಕ್ತ ಪರಿಹಾರ ನೀಡದೆ ತಡ ಮಾಡುತ್ತಿರುವ ನಗರಸಭೆ ವಿರುದ್ಧ ಸಂತ್ರಸ್ಥರು ಹಿಡಿ ಶಾಪ ಹಾಕುತ್ತಿದ್ದಾರೆ. ಆದಷ್ಟು ಬೇಗ ನಗರಸಭೆ ನಿವೇಶನ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಿದ್ರೆ ಒಳಿತು ಇಲ್ದೇ ಹೋದ್ರೆ ಮುಂಬರುವ ದಿನಗಳಲ್ಲಿ ನಗರಸಭೆ ವಿರುದ್ಧ ಸಂತ್ರಸ್ಥರು ಉಗ್ರ ಹೋರಾಟದ ಎಚ್ಚರಿಕೆಯನ್ನ ನೀಡಿದ್ದಾರೆ. 

click me!