ಗಂಡು ಚಿರತೆ ಕಾಡು ಪ್ರಾಣಿಗಳ ಬೇಟೆಗೆ ಹಾಕಿದ್ದ ಉರುಳಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಹೊಸನಗರ ತಾಲೂಕಿನಲ್ಲಿ ನಡೆದಿದೆ
ಶಿವಮೊಗ್ಗ (ಮೇ.27): ಹೊಸನಗರ ತಾಲೂಕಿನಲ್ಲಿ ನಗರ ಹೋಬಳಿ ವ್ಯಾಪ್ತಿಯ ಅಂಡಗದೋದೂರು ಗ್ರಾಮದ ಸರ್ವೆ ನಂಬರ್ 64 ರಲ್ಲಿ 4-5 ವರ್ಷ ಪ್ರಾಯದ ಗಂಡು ಚಿರತೆ ಕಾಡು ಪ್ರಾಣಿಗಳ ಬೇಟೆಗೆ ಹಾಕಿದ್ದ ಉರುಳಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಶುಕ್ರವಾರ ನಗರ ವಲಯ ಅರಣ್ಯ ಅಧಿಕಾರಿ ಸಂಜಯ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಜಿಲ್ಲಾ ವನ್ಯಜೀವಿ ಸಂರಕ್ಷಣ ವಿಭಾಗದ ವೈದ್ಯರನ್ನು ಸ್ಥಳಕ್ಕೆ ಕರೆಸಿ ಮೃತ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ಚಿರತೆ ಸಾವಿಗೀಡಾಗಿ ಒಂದು ದಿನವಷ್ಷೇ ಕಳೆದಿದ್ದು, ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅರಣ್ಯ ಇಲಾಖೆಯ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲಿ ಸೂಕ್ತ ವಿಧಿವಿಧಾನ ಕೈಗೊಳ್ಳಲಾಗಿದೆ ಎಂದು ನಗರ ವಲಯ ಆರ್.ಎಫ್.ಒ ಸಂಜಯ್ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕೆಲವರ ಮೇಲೆ ಅನುಮಾನ ವ್ಯಕ್ತವಾಗಿದ್ದು ಪ್ರಕರಣ ದಾಖಲಿಸಿಕೊಂಡು ಸೂಕ್ತ ಕ್ರಮಕ್ಕೆ ಇಲಾಖೆ ಮುಂದಾಗಿದೆ ಎಂದು ತಿಳಿದು ಬಂದಿದೆ.
ತಾಯಿ ಮಮತೆಗೆ ಸಾಟಿಯುಂಟೇ..ಕಳೆದುಹೋದ ಮರಿಗಾಗಿ ಮರಳಿ ಗ್ರಾಮಕ್ಕೆ ಬಂದ ಚಿರತೆ
ಚಿರತೆ ದಾಳಿ: ಅದೃಷ್ಟವಶಾತ್ ಪಾರಾದ ನಾಯಿ
ಹೊಳೆನರಸೀಪುರ: ತಾಲೂಕಿನ ಕಟ್ಟೆಹೊಸೂರು ಗ್ರಾಮದ ನಿವಾಸಿ ರಂಗಸ್ವಾಮಿ ತೋಟದಲ್ಲಿ ಮನೆ ನಿರ್ಮಿಸಿ ಕೊಂಡು ವಾಸವಿದ್ದು, ಅವರ ಮನೆ ಹತ್ತಿರ ಗುರುವಾರ ರಾತ್ರಿ ಚಿರತೆ ಪ್ರತ್ಯಕ್ಷವಾಗಿದೆ.
ನಿನ್ನೆ ರಾತ್ರಿ ರಂಗಸ್ವಾಮಿ ಅವರ ತೋಟದ ಮನೆಯ ಹತ್ತಿರ ಬಂದಿರುವ ಚಿರತೆ ನಾಯಿಯ ಬೇಟೆಗಾಗಿ ಪ್ರಯತ್ನಿಸಿದೆ. ರಾತ್ರಿ 2.15ರಲ್ಲಿ ಏಕಾಏಕಿ ನಾಯಿ ಬೋಗಳುವುದನ್ನು ಕೇಳಿದ ರಂಗಸ್ವಾಮಿ ಕುಟುಂಬ ಮನೆಯಿಂದ ಹೊರಬಂದು ನೋಡಿದ್ದಾರೆ ಮತ್ತು ಚಿರತೆ ನಾಯಿ ಬೇಟೆಗಾಗಿ ಕುಳಿತಿರುವುದನ್ನು ಕಂಡ ರಂಗಸ್ವಾಮಿ ಕುಟುಂಬ ಮನೆಯ ಮುಂದೆ ಇದ್ದ ಕಲ್ಲು, ದೊಣ್ಣೆ ಇತರೆ ವಸ್ತುಗಳನ್ನು ಚಿರತೆ ಇರುವ ಕಡೆ ಬಿಸಾಡಿ ಗಲಾಟೆ ಮಾಡಿದ್ದಾರೆ ಮತ್ತು ಗಲಾಟೆಗೆ ಬೆದರಿದ ಚಿರತೆ ಸ್ಥಳದಿಂದ ಪರಾರಿಯಾಗಿದೆ.
ಬೋನಿನಲ್ಲಿ ಇದ್ದ ನಾಯಿಯ ಬೇಟೆ ಆಡಲು ಬೋನಿನ ಮೇಲೆ ಚಿರತೆ ದಾಳಿ ನಡೆಸಿದಾಗ ಅದೃಷ್ಟವಶತ್ ಬೋನಿನ ಬಾಗಿಲು ತೆರೆದುಕೊಂಡಿಲ್ಲದ ಕಾರಣ ನಾಯಿ ಜೀವಂತವಾಗಿ ಉಳಿಯಲು ಸಾದ್ಯವಾಗಿದೆ. ಒಂದು ವಾರದ ಹಿಂದೆ ಇದೇ ರಂಗಸ್ವಾಮಿ ಅವರ ತೋಟದಲ್ಲಿ ಇದ್ದ ಮೇಲೆ ದಾಳಿ ನಡೆಸಿ ನಾಯಿಯನ್ನು ಹೊತ್ತೊಯಿದಿತ್ತು. ಅಂದಿನ ಘಟನೆ ಸಂಬಂಧ ಅರಣ್ಯಾಧಿಕಾರಿಗೆ ಮಾಹಿತಿ ನೀಡಿದ್ದರೂ ಸಹ ಅರಣ್ಯ ಇಲಾಖೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತ ಪಡಿಸಿರುವ ರಂಗಸ್ವಾಮಿ ಅವರು ನಿನ್ನೆ ರಾತ್ರಿ ನಡೆದ ಘಟನೆ ಮತ್ತು ಸಿಸಿ ಕ್ಯಾಮರದಲ್ಲಿ ದಾಖಲಾಗಿರುವ ಮಾಹಿತಿ ಸಮೇತ ಅರಣ್ಯಾಧಿಕಾರಿಗಳಿಗೆ ಮತ್ತೊಮ್ಮೆ ದೂರು ನೀಡಿದ್ದಾರೆ. ರಾತ್ರಿ ವೇಳೆ ಮನೆಯಿಂದ ಹೊರಬರಲು ಗ್ರಾಮಸ್ಥರು ಸಹ ಭಯಪಡುವ ವಾತಾವರಣ ನಿರ್ಮಾಣವಾಗಿದೆ ಎಂದು ತಮ್ಮ ದೂರಿನಲ್ಲಿ ದಾಖಲಿಸಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ದೂರು ದಾಖಲಿಸಿಕೊಂಡು ಸ್ಥಳಕ್ಕೆ ಬೇಟಿ ನೀಡಿ, ಪರಿಶೀಲನೆ ನಡೆಸಿ, ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳನ್ನು ವೀಕ್ಷಿಸಿ, ಮಾಹಿತಿ ಸಂಗ್ರಹಿಸಿದ್ದಾರೆ ಮತ್ತು ಚಿರತೆ ಸೆರೆ ಹಿಡಿಯಲು ಬೋನ್ ಇಡುವುದಾಗಿ ಭರವಸೆ ನೀಡಿದ್ದಾರೆ ಎಂದು ರಂಗಸ್ವಾಮಿ ತಿಳಿಸಿದ್ದಾರೆ.
ಇಬ್ಬರು ಹೆಣ್ಮಕ್ಕಳನ್ನು ಸಾವಿನ ದವಡೆಯಿಂದ ಕಾಪಾಡಲು ಬರಿಗೈಯಲ್ಲಿ ಚಿರತೆಯೊಂದಿಗೆ ಹೋರಾಡಿದ ಕಾರ್ಮಿಕ
ಕುತ್ಲೂರು ಮರೋಡಿ ಪರಿಸರದಲ್ಲಿ ಚಿರತೆ ಓಡಾಟ ಭೀತಿ
ಬೆಳ್ತಂಗಡಿ: ತಾಲೂಕಿನ ಕುತ್ಲೂರು-ಮರೋಡಿ ಪ್ರದೇಶದಲ್ಲಿ ಚಿರತೆ ತಿರುಗಾಟ ನಡೆಸುತ್ತಿದ್ದು ಸ್ಥಳೀಯರಲ್ಲಿ ಭೀತಿಯ ವಾತಾವರಣ ಉಂಟಾಗಿದೆ. ಗುರುವಾರ ರಾತ್ರಿ ಇಲ್ಲಿನ ಬಜಿಲಪಾದೆ ಪ್ರದೇಶದಲ್ಲಿ ರಸ್ತೆ ಬದಿಯಲ್ಲಿ ಬೈಕ್ ಸವಾರರಿಗೆ ಚಿರತೆ ಕಂಡು ಬಂದಿತ್ತು. ಮೀಸಲು ಅರಣ್ಯ ಪ್ರದೇಶದ ಸಮೀಪವಿರುವ ಕುತ್ಲೂರು-ಮರೋಡಿ ಪರಿಸರದ ಹಲವೆಡೆಗಳಲ್ಲಿ ಚಿರತೆ ಆಗಾಗ ಕಂಡು ಬರುತ್ತಿರುವ ಕುರಿತು ಇಲ್ಲಿನ ನಿವಾಸಿಗಳು ತಿಳಿಸಿದ್ದಾರೆ. ಅರಣ್ಯ ಇಲಾಖೆಯ ವತಿಯಿಂದ ಬೋನನ್ನು ಇರಿಸಲಾಗಿದೆ ಹಾಗೂ ಚಿರತೆ ತಿರುಗಾಟ ಕಂಡುಬರುವ ಪ್ರದೇಶಗಳಿಗೆ ಇದನ್ನು ಸ್ಥಳಾಂತರಿಸಲಾಗುತ್ತಿದೆ. ಚಿರತೆಯ ಜತೆ ಮರಿ ಚಿರತೆಯ ಇರುವ ಕುರಿತು ಶಂಕೆ ವ್ಯಕ್ತವಾಗಿದೆ.