ಗಂಗಾವತಿ: ಜಂಗ್ಲಿ-ರಂಗಾಪುರದ ಬಳಿ ಮತ್ತೆ ಚಿರತೆ ಪ್ರತ್ಯಕ್ಷ, ಬೆಚ್ಚಿಬಿದ್ದ ಗ್ರಾಮಸ್ಥರು

By Kannadaprabha News  |  First Published Oct 28, 2020, 10:15 AM IST

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಜಂಗ್ಲಿ-ರಂಗಾಪುರ ಬಳಿ ಮತ್ತೆ ಚಿರತೆ ಪ್ರತ್ಯಕ್ಷ| ಭಯ ಭೀತರಾದ ಗ್ರಾಮಸ್ಥರು| ಕೂಡಲೇ ಚಿರತೆಯ ಸೆರೆ ಹಿಡಿಯಬೇಕು ಮತ್ತು ರೈತರಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದ ಗ್ರಾಮಸ್ಥರು| 


ಗಂಗಾವತಿ(ಅ.28): ಸಮೀಪದ ಜಂಗ್ಲಿ-ರಂಗಾಪುರ ಬಳಿ ಸೋಮವಾರ ಸಂಜೆ ಮತ್ತೆ ಚಿರತೆ ಪ್ರತ್ಯಕ್ಷವಾಗಿದೆ. ಇದರಿಂದ ಅಲ್ಲಿಯ ಜನರು ಭಯ ಭೀತರಾಗಿದ್ದಾರೆ. 

ಕಳೆದ 15 ದಿನಗಳ ಹಿಂದೆ ಇದೇ ಪ್ರದೇಶದಲ್ಲಿ ಮಹಿಳೆ ಮೇಲೆ ದಾಳಿ ನಡೆಸಿ ಚಿರ​ತೆ ಗಾಯಗೊಳಿಸಿತ್ತು. ಅಲ್ಲದೆ ಆನೆಗೊಂದಿಯ ದುರ್ಗಾ ಬೆಟ್ಟದಲ್ಲಿಯೂ ಹೈದ​ರಾಬಾದ್‌ನ ಪ್ರವಾಸಿಗರ ಮೇಲೆ ದಾಳಿ ನಡೆಸಿ ಮಗುವನ್ನು ಗಾಯಗೊಳಿಸಿತ್ತು. ಈಗ ಚಿರತೆ ಮತ್ತೆ ಪ್ರತ್ಯೇಕ್ಷವಾಗಿದ್ದರಿಂದ ಜನರಲ್ಲಿ ಆತಂಕ ಉಂಟಾಗಿದೆ.

Tap to resize

Latest Videos

ಗಂಗಾವತಿ: ಪ್ರವಾಸಿಗರ ಮೇಲೆ ದಾಳಿ ನಡೆಸಿದ್ದ ಚಿರತೆ ಸೆರೆ, ಒಂದೇ ವಾರದಲ್ಲಿ ಮೂರನೇ ಬಾರಿ ಪ್ರತ್ಯಕ್ಷ

ದುರ್ಗಾ ಬೆಟ್ಟದ ಬಳಿ ಅರಣ್ಯ ಇಲಾಖೆ ಒಂದೂವರೇ ವರ್ಷದ ಚಿರತೆಯನ್ನ ಸೆರೆ ಹಿಡಿದಿದ್ದರು. ಈಗ ಇನ್ನೊಂದು ಚಿರತೆ ಸಂಚರಿಸುತ್ತಿದ್ದು, ರೈತರು ಹೊಲ ಗದ್ದೆಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಕೂಡಲೇ ಅರಣ್ಯ ಇಲಾಖೆಯವರು ಚಿರತೆಯನ್ನು ಸೆರೆ ಹಿಡಿಯಬೇಕು ಮತ್ತು ರೈತರಿಗೆ ರಕ್ಷಣೆ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
 

click me!