ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಹಾಗೂ ಇತರೆ ಸ್ಥಳೀಯ ಮುಖಂಡರ ಸಮ್ಮುಖದಲ್ಲಿ ಹಲವರು ಜೆಡಿಎಸ್ ಸೇರಿದರು
ಪಾವಗಡ: ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಹಾಗೂ ಇತರೆ ಸ್ಥಳೀಯ ಮುಖಂಡರ ಸಮ್ಮುಖದಲ್ಲಿ ಸೋಮವಾರ ತಾಲೂಕಿನ ಜಾಲೋಡು ಗ್ರಾಮದ ಮುಖಂಡರಾದ ದೇವರಾಜ…, ಶಿವಶಂಕರ, ಗಜೇಂದ್ರ, ಮಹೀಂದ್ರ, ಜೆ.ಸಿ.ವೀರೇಶ್, ಇತರೆ ಹಲವು ಮಂದಿ ಕಾಂಗ್ರೆಸ್ ತೊರೆದು ಜೆಡಿಎಸ್‌ಗೆ ಸೇರ್ಪಡೆಯಾದರು. ಇದೇ ವೇಳೆ ಸ್ಥಳೀಯ ಜೆಡಿಎಸ್ ಮುಖಂಡರಾದ ಶಿವಣ್ಣ, ತಿಪ್ಪೇಸ್ವಾಮಿ, ಯುವ ಮುಖಂಡ ಪರಮೇಶ್ ಜೆ.ಕೆ.ಈರಣ್ಣ, ಹೊನೂರಪ್ಪ, ಎ.ತಿಪೇಸ್ವಾಮಿ ಇತರೆ ಅನೇಕ ಮಂದಿ ಇದ್ದರು.
ಶೀಘ್ರದಲ್ಲೇ ಕಾಂಗ್ರೆಸ್ ಪಟ್ಟಿ ಬಿಡುಗಡೆ
ದಾವಣಗೆರೆ : ಮಾ.17ರಂದು ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಹೊನ್ನಾಳಿಯಲ್ಲಿ ಸೋಮವಾರ ಪ್ರಜಾಧ್ವನಿ ಸಮಾವೇಶ(Prajadhwani convention)ಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ ಸೋಮಣ್ಣ, ನಾರಾಯಣಗೌಡ(V Somanna and Narayanagowda) ಅವರು ಕಾಂಗ್ರೆಸ್ಸಿಗೆ ಬರುವ ವಿಚಾರವೇ ನನಗೆ ಗೊತ್ತಿಲ್ಲ. ಗೊತ್ತಿಲ್ಲದ ವಿಚಾರಕ್ಕೆ ನಾನು ಹೇಗೆ ಉತ್ತರಿಸಲು ಸಾಧ್ಯ? ಎಂದರು. ಶನಿವಾರ ನಿಧನರಾದ ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಂಸದ ಧ್ರುವನಾರಾಯಯಣ ಪುತ್ರನಿಗೆ ಟಿಕೆಟ್ ನೀಡುವಂತೆ ಸ್ಥಳೀಯ ಮುಖಂಡರು, ಬೆಂಬಲಿಗರು, ಕಾರ್ಯಕರ್ತರು ಕೇಳಿದ್ದಾರೆ. ಈ ಬಗ್ಗೆ ನೋಡೋಣ ಎಂದು ತಿಳಿಸಿದರು.
ನಾನು ಬದುಕಿರೋವರೆಗೂ ಬಿಜೆಪಿ ವಿರೋಧಿಸುವೆ: ಸಿದ್ದರಾಮಯ್ಯ
ರಾಜ್ಯದಲ್ಲಿ ಕಾಂಗ್ರೆಸ್ ಪರ ಇಲೆ ಇದೆ. ಪ್ರಧಾನಿ ಮೋದಿ ಪದೇ ಪದೆ ಬಂದರೂ ಇಲ್ಲಿ ಏನೂ ಆಗುವುದಿಲ್ಲ. ಕಳೆದ ಸಲವೂ ಮೋದಿ ಇಲ್ಲಿಗೆ ಬಂದಿದ್ದರು. ಮೈಸೂರು ಬೆಂಗಳೂರು ಹೈವೇ(Bengaluru-Mysuru Expressway) ಮಾಡಿದ್ದು ಯಾರು? ಆಸ್ಕರ್ ಫರ್ನಾಂಡೀಸ್ ಸಚಿವರಿದ್ದಾಗ ನಾನೇ ಅದನ್ನು ಮಂಜೂರು ಮಾಡಿಸಿದ್ದೆ. ಈಗ ಬಿಜೆಪಿಯವರು ಹೆದ್ದಾರಿ ಶ್ರೇಯ ತೆಗೆದುಕೊಳ್ಳುತ್ತಿದ್ದಾರೆ. ಹೆದ್ದಾರಿ ಕಾಮಗಾರಿಯೇ ಪೂರ್ಣಗೊಂಡಿಲ್ಲ. ಕಾಮಗಾರಿ ಪ್ರಗತಿಯಲ್ಲಿದ್ದರೂ ತರಾತುರಿಯಲ್ಲಿ ನರೇಂದ್ರ ಮೋದಿ ಕರೆಸಿ, ಉದ್ಘಾಟನೆ ಮಾಡಿಸಿದ್ದಾರೆ ಎಂದು ಟೀಕಿಸಿದರು.
ಮಾಡಾಳು ಬಂಧಿಸಬೇಕಿತ್ತಲ್ಲವæೕ?: ಸಿದ್ದು
ಕೆಎಸ್‌ಡಿಎಲ್ ಅಧ್ಯಕ್ಷರಾಗಿದ್ದ ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ(Madalu Virupakshappa) ಪುತ್ರ .40 ಲಕ್ಷ ಲಂಚದ ಹಣದ ಸಮೇತ ಸಿಕ್ಕಿ ಬಿದ್ದಿದ್ದು, ತಕ್ಷಣವೇ ಮಾಡಾಳು ಅವರನ್ನು ಪೊಲೀಸರು ಬಂಧಿಸಬೇಕಿತ್ತು. ಅಲ್ಲದೆ, ಬಿಜೆಪಿಗೆ ನೈತಿಕತೆ ಇದ್ದಿದ್ದರೆ ಮಾಡಾಳು ವಿರುಪಾಕ್ಷಪ್ಪ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕಿತ್ತು. ಆದರೆ, ಅದ್ಯಾವುದನ್ನೂ ಮಾಡದ ಬಿಜೆಪಿಯವರೇ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಭ್ರಷ್ಟಾಚಾರಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ. ಬಿಜೆಪಿಯವರು ಭ್ರಷ್ಟಾಚಾರದ ಪರವಾಗಿದ್ದಾರೆ ಎಂದು ತೀವ್ರ ಅಸಮಾಧಾನ ಹೊರ ಹಾಕಿದರು.
ಸಂಸದೆ ಸುಮಲತಾಗೆ ಸಿದ್ದು ಸವಾಲು
ಮಂಡ್ಯದ ಸಂಸದೆ ಸುಮಲತಾ(MP Sumalata) ಹೇಳುವ ಪ್ರಕಾರ ಏನು ಅಭಿವೃದ್ಧಿಯಾಗಿದೆಯೆಂಬ ಬಗ್ಗೆ ಬೇಕಾದರೆ ಚರ್ಚೆಗೆ ಬರಲಿ. ರಾಜ್ಯ ಹೆದ್ದಾರಿ ಇದ್ದುದು ರಾಷ್ಟ್ರೀಯ ಹೆದ್ದಾರಿಯಾಗಿದ್ದು ಯಾವಾಗ ಎಂಬ ಬಗ್ಗೆ ಚರ್ಚೆಗೆ ಬರಲಿ. ಈ ಸಂಬಂಧ ದಾಖಲೆಗಳನ್ನೂ ಬಿಡುಗಡೆ ಮಾಡುತ್ತೇನೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದು ನಾನೇ. ಮೈಸೂರು-ಬೆಂಗಳೂರು ಹೆದ್ದಾರಿ ಕಾಮಗಾರಿ ಅಪೂರ್ಣವಾಗಿದೆ. ಕಾಮಗಾರಿ ಇನ್ನೂ ನಡೆಯುತ್ತಿದ್ದರೂ ವಿಧಾನಸಭೆ ಚುನಾವಣೆ ಕಾರಣಕ್ಕೆ ಬಿಜೆಪಿ ಸರ್ಕಾರ ಉದ್ಘಾಟನೆ ಮಾಡಿಸಿದೆ ಎಂದು ಆರೋಪಿಸಿದರು.
ಪ್ರತಾಪ ಸಿಂಹ(MP Pratap simha) ಒಬ್ಬ ಪೆದ್ದ: ಇದೇ ವೇಳೆ ಮೈಸೂರು ಸಂಸದ ಪ್ರತಾಪ ಸಿಂಹ ವ್ಯಾಪ್ತಿಗೆ ಹೆದ್ದಾರಿ ಬರುವುದು ಕೇವಲ 7 ಕಿ.ಮೀ. ನಷ್ಟುಮಾತ್ರ. ಆದರೆ, ಮಾತೆತ್ತಿದರೆ ಪ್ರತಾಪ ಸಿಂಹ, ಪ್ರತಾಪ ಸಿಂಹ ಎನ್ನುತ್ತಾರೆ. ಪ್ರತಾಪ ಸಿಂಹ ಒಬ್ಬ ಪೆದ್ದ ಎಂದು ಸಿದ್ದರಾಮಯ್ಯ ಕುಟುಕಿದರು.
ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ, ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ: ಸಿದ್ದರಾಮಯ್ಯ
ರಾಹುಲ್ ಬೈದ್ರೆ ದೇಶದ ಮಾನ ಹೇಗೆ ಹೋಗುತ್ತೆ?
ರಾಹುಲ್ ಗಾಂಧಿ ಬೈದಿದ್ದು ಬಿಜೆಪಿಯವರನ್ನು. ಬಿಜೆಪಿಯವರನ್ನು ಬೈದರೆ ದೇಶದ ಮಾನ ಹೇಗೆ ಹೋಗುತ್ತದೆ? ಮೇಲಾಗಿ ಬಿಜೆಪಿ ಆಳ್ವಿಕೆಯಲ್ಲಿ ದೇಶದ ಪ್ರಜಾಪ್ರಭುತ್ವಕ್ಕೆ ಧಕ್ಕೆ ಬಂದೊದಗಿದೆ. ಇಂತಹ ಬಿಜೆಪಿಯವರಿಗೆ ನಾಚಿಕೆ, ಮಾನ, ಮರ್ಯಾದೆ ಇದೆಯೇನ್ರೀ?!
ಸಿದ್ದರಾಮಯ್ಯ, ವಿಪಕ್ಷ ನಾಯಕ.