‘ಚುನಾವಣಾಧಿಕಾರಿಗೆ ಮತಗಟ್ಟೆಪೂರ್ಣ ಮಾಹಿತಿಯಿರಲಿ’

By Kannadaprabha News  |  First Published Mar 14, 2023, 5:14 AM IST

ಚುನಾವಣಾ ಅಧಿಕಾರಿಗಳಿಗೆ ಮತಗಟ್ಟೆಗಳ ಸಂಪೂರ್ಣ ಮಾಹಿತಿಯಿರಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ತಿಳಿಸಿದರು.


  ತುಮಕೂರು :  ಚುನಾವಣಾ ಅಧಿಕಾರಿಗಳಿಗೆ ಮತಗಟ್ಟೆಗಳ ಸಂಪೂರ್ಣ ಮಾಹಿತಿಯಿರಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ತಿಳಿಸಿದರು.

ಅವರುಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸೋಮವಾರ ನಡೆದ ವಿಡಿಯೋ ಕಾನ್ಫರೆನ್ಸ್‌ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಂಬರುವ ವಿಧಾನಸಭಾ ಚುನಾವಣೆ-2023 ಹಿನ್ನೆಲೆಯಲ್ಲಿ ಆರ್‌.ಓ ಮತ್ತು ಎ.ಆರ್‌.ಓ.ಗಳು ತಮ್ಮ ಕಾರ್ಯವ್ಯಾಪ್ತಿಯ ಕ್ಷೇತ್ರದ ಎಲ್ಲಾ ಮತಗಟ್ಟೆಗಳ ಸಂಪೂರ್ಣ ಮಾಹಿತಿ ಪಡೆದಿರಬೇಕು. ಆಯಾ ವಿಧಾನಸಭಾ ಕ್ಷೇತ್ರದ ಎಲ್ಲಾ ಮತಗಟ್ಟೆಗಳನ್ನು ಬೇಗ ತಲುಪುವ ರೀತಿಯಲ್ಲಿ ಸೆಕ್ಟರ್‌ ಮ್ಯಾಪ್‌ ಮತ್ತು ರೂಟ್‌ ಮ್ಯಾಪ್‌ಗಳನ್ನು ಸಿದ್ಧಪಡಿಸಿ ಸಲ್ಲಿಸಬೇಕು. ತಮ್ಮ ಹಂತದಲ್ಲಿ ಸ್ಟ್ರಾಂಗ್‌ ಟೀಮ್‌ ರಚಿಸಬೇಕು. ಚುನಾವಣೆಯ ದಿನ ಬೇಕಾಗುವ ವಾಹನಗಳ ಪಟ್ಟಿಯನ್ನು ಸಲ್ಲಿಸಬೇಕು, ಸೆಕ್ಟರ್‌ವೈಸ್‌ ಪ್ರಕಾರ ಮಸ್ಟರಿಂಗ್‌ ಮತ್ತು ಡಿಮಸ್ಟರಿಂಗ್‌ ವ್ಯವಸ್ಥೆ ರೂಪಿಸಬೇಕು ಎಂದು ಸೂಚಿಸಿದರು.

Tap to resize

Latest Videos

ಆಮಿಷ, ಉಡುಗೊರೆಗಳಿಗೆ ಅವಕಾಶವಿಲ್ಲ:

ಭಾರತ ಚುನಾವಣಾ ಆಯೋಗದ ನಿರ್ದೇಶನದ ಪ್ರಕಾರ ಮತದಾರರಿಗೆ ಉಡುಗೊರೆಗಳನ್ನು ನೀಡಿ ಆಮಿಷ ಒಡ್ಡುವುದಕ್ಕೆ ಅವಕಾಶವಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಉಡುಗೊರೆಗಳನ್ನು ಅನಧಿಕೃತವಾಗಿ ಅಥವಾ ಸೂಕ್ತ ದಾಖಲೆಗಳಿಲ್ಲದೆ ಸಾಗಿಸುತ್ತಿರುವ ಪ್ರಕರಣಗಳು ಕಂಡುಬಂದಲ್ಲಿ ಆರ್‌.ಓ ಮತ್ತು ಎ.ಆರ್‌.ಓಗಳು ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ವಿಧಾನಸಭಾ ಕ್ಷೇತ್ರವಾರು, ತಾಲೂಕುವಾರು, ಪ್ರಿಂಟಿಂಗ್‌ ಪ್ರೆಸ್‌ ಮಾಲೀಕರ ಸಭೆ ಕರೆದು ಮಾಹಿತಿ ಸಿದ್ಧಪಡಿಸುವಂತೆ, 80+ ಮತದಾರರಿಗೆ ಅಂಚೆ ಮತಪತ್ರ ನೀಡುವ ಬಗ್ಗೆ ಕಂಟ್ರೋಲ್‌ ರೂಮ್‌ ಮತ್ತು ದೂರು ಕೇಂದ್ರಗಳನ್ನು ಸ್ಥಾಪಿಸುವಂತೆ, ಮತಗಟ್ಟೆಗಳಲ್ಲಿ ಕಡ್ಡಾಯವಾಗಿ ಪುರುಷ ಹಾಗೂ ಮಹಿಳಾ ಪ್ರತ್ಯೇಕ ಶೌಚಾಲಯ ಮತ್ತು ರಾರ‍ಯಂಪ್‌ ಹೊಂದಿರುವ ಕುರಿತು ಆರ್‌.ಓ ಗಳು ಕಡ್ಡಾಯವಾಗಿ ಮತಗಟ್ಟೆಗಳನ್ನು ಭೇಟಿ ಮಾಡಿ ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.

ಆರ್‌. ಓ ಕಚೇರಿಯಲ್ಲಿ ಸ್ಥಾಪಿಸಬೇಕು:

ಸಮಾಧಾನ, ಸುವಿಧಾ, ಸಿಂಗಲ್‌ ವಿಂಡೋ ಡೆಸ್‌್ಕಗಳನ್ನು ಆರ್‌.ಓ ಕಚೇರಿಯಲ್ಲಿ ಸ್ಥಾಪಿಸಬೇಕು. ಸಿ-ವಿಗಿಲ್‌ ಮಾನಿಟರಿಂಗ್‌ ಕೇಂದ್ರ ಸ್ಥಾಪಿಸಬೇಕು, ವಾಹನಗಳಿಗೆ ಜಿಪಿಎಸ್‌ ಮಾನಿಟರಿಂಗ್‌ ಯುನಿಟ್‌ ಸ್ಥಾಪಿಸಬೇಕು ಎಂದು ಡೀಸಿ ತಿಳಿಸಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಬಿ ಕರಾಳೆ ಉಪಸ್ಥಿತರಿದ್ದರು.

ಮತದಾರರಿಗೆ ಇವಿಎಂ ಮತ್ತು ವಿ.ವಿ ಪ್ಯಾಟ್‌ ತರಬೇತಿ ಶಿಬಿರವನ್ನು ಹಮ್ಮಿಕೊಂಡು ಜಿಲ್ಲೆಯ ಪ್ರತಿಯೊಬ್ಬ ಮತದಾರರಿಗೂ ಇವಿಎಂ ಬಳಕೆಯ ಬಗ್ಗೆ ತಿಳಿಸಬೇಕು. ಜಿಲ್ಲಾ ಕೇಂದ್ರಗಳಲ್ಲಿ ನಡೆಯುವ ಸ್ವೀಪ್‌ ಕಾರ್ಯಕ್ರಮಗಳು ಅದೇ ದಿನ ತಾಲೂಕು ಕೇಂದ್ರಗಳಲ್ಲಿ ಜರುಗಬೇಕು. ನಗರ ವ್ಯಾಪ್ತಿಯಲ್ಲಿ ವಾಹನಗಳ ಮೂಲಕ ಮತಯಂತ್ರ ಬಳಕೆ ಹಾಗೂ ಮತದಾನದ ಕುರಿತು ಪ್ರಚಾರ ಮಾಡಬೇಕು. ವೋಟರ್‌ ಸ್ಲಿಪ್‌ ಗಳನ್ನು ಸಿದ್ಧಪಡಿಸಬೇಕು.

ಡಾ.ಕೆ.ವಿದ್ಯಾಕುಮಾರಿ ಜಿಲ್ಲಾ ಪಂಚಾಯತ್‌ ಸಿಇಓ

click me!