ವಿದ್ಯಾರ್ಥಿನಿ ಜತೆ ಉಪನ್ಯಾಸಕನ ಲವ್ ಕಹಾನಿ: ಬುದ್ದಿ ಹೇಳಿದ್ದಕ್ಕೆ ಹೀಗ್ ಮಾಡೋದಾ?

Suvarna News   | Asianet News
Published : Dec 20, 2019, 10:56 AM IST
ವಿದ್ಯಾರ್ಥಿನಿ ಜತೆ ಉಪನ್ಯಾಸಕನ ಲವ್ ಕಹಾನಿ: ಬುದ್ದಿ ಹೇಳಿದ್ದಕ್ಕೆ ಹೀಗ್ ಮಾಡೋದಾ?

ಸಾರಾಂಶ

ವಿದ್ಯಾರ್ಥಿನಿಯನ್ನು ಪ್ರೀತಿಸಿದ್ದಕ್ಕೆ ಬುದ್ಧಿ ಹೇಳಿದ್ದ ಪ್ರಾಚಾರ್ಯರು | ಮನನೊಂದು ಆತ್ಮಹತ್ಯೆ ಯತ್ನ ಪಟ್ಟಣದ ಖಾಸಗಿ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿವಾಹಿತ ಉಪನ್ಯಾಸಕ|ಪಿಯುಸಿ ವಿದ್ಯಾರ್ಥಿನಿಯನ್ನು ಪ್ರೀತಿಸುತ್ತಿದ್ದ ವಿವಾಹಿತ ಉಪನ್ಯಾಸಕ|ವಿದ್ಯಾರ್ಥಿನಿಯೊಂದಿಗೆ ವಿಷ ಸೇವಿಸಿದ ವಿವಾಹಿತ ಉಪನ್ಯಾಸಕ|

ಬೈಲಹೊಂಗಲ[ಡಿ.20]: ಬೈಲಹೊಂಗಲ ವಿದ್ಯಾರ್ಥಿನಿಯನ್ನು ಪ್ರೀತಿಸುತ್ತಿದ್ದ ವಿವಾಹಿತ ಉಪನ್ಯಾಸಕನಿಗೆ ಪ್ರಾಚಾರ್ಯರು ಬುದ್ಧಿ ಮಾತು ಹೇಳಿದ್ದಕ್ಕೆ ವಿದ್ಯಾರ್ಥಿನಿಯೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಪತ್ರ ಬರೆದು ಉಪನ್ಯಾಸಕನ ಮನೆಯಲ್ಲಿಯೇ ಇಬ್ಬರೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ನಡೆದಿದೆ. 

ಪಟ್ಟಣದ ಖಾಸಗಿ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿವಾಹಿತ ಉಪನ್ಯಾಸಕ ಆಸೀಫ್ ನಧಾಪ ಪಿಯುಸಿ ವಿದ್ಯಾರ್ಥಿನಿಯನ್ನು ಪ್ರೀತಿಸುತ್ತಿದ್ದ. ಅಲ್ಲದೇ ಕ್ಲಾಸ್ ರೂಂನಲ್ಲೇ ವಿದ್ಯಾರ್ಥಿನಿಯೊಂದಿಗೆ ಹೆಚ್ಚಾಗಿ ಮಾತನಾಡುತ್ತಿದ್ದ. ಅಲ್ಲದೇ ಬಸ್ ನಿಲ್ದಾಣಕ್ಕೆ ಬೈಕ್ ಮೇಲೆ ಬಿಡಲು ಹೋಗುತ್ತಿದ್ದ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ವಿಷಯ ಅರಿತ ಪ್ರಾಚಾರ್ಯರರು ಬುಧವಾರ ಅವರು ಕರೆಸಿ ಬುದ್ಧಿ ಹೇಳಿದ್ದಾರೆ. ವಿವಾಹಿತ ಉಪನ್ಯಾಸಕನ ಪತ್ನಿ ಹೆರಿಗೆಗೆಂದು ತೆರಳಿದ್ದರಿಂದ ಮನೆಯಲ್ಲಿ ಯಾರು ಇಲ್ಲದ್ದರಿಂದ ವಿದ್ಯಾರ್ಥಿನಿ ಉಪನ್ಯಾಸಕನ ಮನೆಗೆ ತೆರಳಿದ್ದಾಳೆ. 4 ಗಂಟೆಯಾದರೂ ವಿದ್ಯಾರ್ಥಿನಿ ಹೊರಗೆ ಬಾರದ್ದನ್ನು ಕಂಡ ಅಕ್ಕಪಕ್ಕದವರು ಬಾಗಿಲು ತಟ್ಟಿದ್ದಾರೆ. ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದ್ದರಿಂದ ಉಪನ್ಯಾಸಕನ ಸಹೋದರನಿಗೆ ವಿಷಯ ತಿಳಿಸಿದ್ದಾರೆ. ಅವರು ಬಂದು ನೋಡುವಷ್ಟರಲ್ಲಿ ಇಬ್ಬರು ವಿಷ ಸೇವಿಸಿದ್ದಾರೆ. ನಂತರ ಅವರನ್ನು ಬೈಲಹೊಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ವಿದ್ಯಾರ್ಥಿನಿಯ ಪಾಲಕರು ಉಪನ್ಯಾಸಕನ ಮೇಲೆ ದೂರು ದಾಖಲಿಸಿದ್ದಾರೆ.

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!