ವಿಚ್ಛೇದನಕ್ಕೆ ಮುನ್ನವೇ ಇನ್ನೊಬ್ಬ ಯುವತಿ ಜೊತೆ ವಿವಾಹಕ್ಕೆ ಸಿದ್ಧನಾದ ಅಪನ್ಯಾಸಕನನ್ನು ಕಾಲೇಜಿನಿಂದ ಹೊರಗೆಳೆದು ಧಳಿಸಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಬಂಗಾರಪೇಟೆ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜಿನ ಕೆಮಿಸ್ಟ್ರಿ ಉಪನ್ಯಾಸಕ ಮಂಜುನಾಥರೆಡ್ಡಿಗೆ ಆತನ ಪತ್ನಿ ಸುಷ್ಮ ಮತ್ತು ಸಂಬಂಧಿಕರು ಕಾಲೇಜಿನಿಂದ ಹೊರಗಡೆ ಎಳೆದು ತಂದು ಹಿಗ್ಗಾಮುಗ್ಗವಾಗಿ ಥಳಿಸಿದ್ದಾರೆ.
ಕೋಲಾರ(ಆ.15): ವಿಚ್ಚೇದನಕ್ಕೂ ಮೊದಲೇ ಉಪನ್ಯಾಸಕನೊಬ್ಬ ಮತ್ತೊಂದು ಮದುವೆಗೆ ಮುಂದಾದ ವಿಷಯ ತಿಳಿದು ಪತ್ನಿ ಮತ್ತು ಆಕೆಯ ಸಂಬಂಧಿಕರು ವಿದ್ಯಾರ್ಥಿಗಳ ಎದುರೇ ಹಿಗ್ಗಾಮುಗ್ಗಾ ಥಳಿಸಿದ ಪ್ರಕರಣ ಬಂಗಾರಪೇಟೆ ಪಟ್ಟಣದಲ್ಲಿ ಮಂಗಳವಾರ ನಡೆದಿದ್ದು, ಬುಧವಾರ ದೂರು ದಾಖಲಿಸಲಾಗಿದೆ.
ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜಿನ ಕೆಮಿಸ್ಟ್ರಿ ಉಪನ್ಯಾಸಕ ಮಂಜುನಾಥರೆಡ್ಡಿಗೆ ಆತನ ಪತ್ನಿ ಸುಷ್ಮ ಮತ್ತು ಸಂಬಂಧಿಕರು ಕಾಲೇಜಿನಿಂದ ಹೊರಗಡೆ ಎಳೆದು ತಂದು ಹಿಗ್ಗಾಮುಗ್ಗವಾಗಿ ಥಳಿಸಿದ್ದಾರೆ.
2015ರಲ್ಲಿ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಹೆಬ್ಬರಿ ಗ್ರಾಮದ ಸುಷ್ಮಾರನ್ನು ಬೆಂಗಳೂರಿನ ಜಾಲಹಳ್ಳಿಯ ಮಂಜುನಾಥರೆಡ್ಡಿ ವಿವಾಹವಾಗಿದ್ದರು. ಪತ್ನಿ ಸುಷ್ಮಾ ಹಳ್ಳಿ ಹುಡುಗಿಯಾಗಿದ್ದು ಪಟ್ಟಣಕ್ಕೆ ಹೊಂದಿಕೊಳ್ಳುತ್ತಿಲ್ಲ, ಜೊತೆಗೆ ಕೆಲಸಕ್ಕೆ ಹೋಗಿ ಹಣ ಸಂಪಾದನೆ ಮಾಡುತ್ತಿಲ್ಲ ಎಂದು ಆರೋಪಿಸಿ ಮಂಜುನಾಥರೆಡ್ಡಿ ಹೈಕೋರ್ಟ್‌ನಲ್ಲಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ವಿಚ್ಚೇದನ ಅರ್ಜಿ ಇನ್ನೂ ಇತ್ಯರ್ಥವಾಗುವ ಮೊದಲೇ ಮಂಜುನಾಥರೆಡ್ಡಿ ವೈದ್ಯಯ ಜತೆ ವಿವಾಹಕ್ಕೆ ಸಿದ್ಧವಾಗಿ ಎಂಬ ವಿಷಯ ತಿಳಿದು ಮಂಗಳವಾರ ಪಟ್ಟಣದ ಕಾಲೇಜಿಗೆ ಆಗಮಿಸಿ ಕೊಠಡಿಯಲ್ಲಿದ್ದ ಮಂಜುನಾಥರೆಡ್ಡಿರನ್ನು ಹೊರಗಡೆ ಎಳೆದು ತಂದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕಾಲೇಜು ಆವರಣದಲ್ಲಿ ರಣರಂಗವಾಗುತ್ತಿದ್ದಂತೆ ಕಾಲೇಜಿನ ಪ್ರಾಂಶುಪಾಲರು ಮತ್ತು ಸಿಬ್ಬಂದಿ ಆಗಮಿಸಿ ಎಲ್ಲರನ್ನೂ ಸಮಾಧಾನಪಡಿಸಿದರು.
ಕೋಲಾರ: 'ಮಂತ್ರಿಮಂಡಲ ಇಲ್ಲದ ಅನಾಥ ಸರ್ಕಾರ'
ಮಂಜುನಾಥರೆಡ್ಡಿ ಸರ್ಕಾರಿ ಕೆಲಸದಲ್ಲಿದ್ದಾನೆ, ನಮ್ಮ ಮಗಳ ಬಾಳು ಸುಖವಾಗರುತ್ತದೆಂದು ವರದಕ್ಷಿಣೆ ಹಾಗೂ ಅದ್ಧೂರಿಯಾಗಿ ಮದುವೆ ಮಾಡಿಕೊಡಿಕೊಟ್ಟಿದ್ದೇವೆ. ಆದರೆ ಮದುವೆಯಾಗಿ 4 ವರ್ಷಕ್ಕೇ ಮಗಳಿಗೆ ವಿಚ್ಛೇದನೆ ನೀಡಿ ಮತ್ತೊಂದು ಮದುವೆಯಾಗಲು ಹೊರಟಿದ್ದಾನೆ ಎಂದು ವಿದ್ಯಾರ್ಥಿಗಳ ಎದುರೇ ಜಾಲಾಡಿದರು.
ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಹಲ್ಲೆಗೆ ಒಳಗಾಗಿದ್ದ ಉಪನ್ಯಾಸಕ ಮಂಜುನಾಥರೆಡ್ಡಿ ಬುಧವಾರ ಸುರೇಶ್ ಮತ್ತು ಇತರ ಮೂವರ ಮೇಲೆ ಸ್ಥಳಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.