Lecture Video Viral: ಸಾಗರದಲ್ಲಿ ವಿದ್ಯೆ ಕಲಿಸೋ ಶಿಕ್ಷಕನಿಂದಲೇ ಕಾಮದಾಟ; ಅಟ್ಟಾಡಿಸಿಕೊಂಡು ಹೊಡೆದ ಯುವಕರು!

Published : Feb 06, 2026, 01:15 PM IST
Lecture Video Viral

ಸಾರಾಂಶ

Lecture Video Viral: ಬೇಲಿಯೇ ಎದ್ದು ಹೊಲ ಮೇಯ್ದರೇ ಎಂಬ ಗಾದೆಯನ್ನು ಕೇಳುತ್ತೀರಿ. ಅಂತೆಯೇ ವಿದ್ಯೆ ಕಲಿಸುವ ಶಿಕ್ಷಕ, ಯುವತಿ ಜೊತೆ ಅಸಭ್ಯವಾಗಿ ನಡೆದುಕೊಂಡ ಘಟನೆ ಸಾಗರದಲ್ಲಿ ನಡೆದಿದೆ. ಆಮೇಲೆ ಯುವಕರ ಗುಂಪೊಂದು ಗೂಸಾ ನೀಡಿದೆ. 

ಪಾಠ ಕಲಿಸುವ ಅಧ್ಯಾಪಕರೇ ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪಗಳು ಸಾಕಷ್ಟಿವೆ, ಈ ಕುರಿತು ಒಂದಿಷ್ಟು ವರದಿಗಳಾಗಿವೆ. ಅಂಥಹದೇ ಘಟನೆ ಸಾಗರದಲ್ಲಿ ನಡೆದಿದೆ. ಹೌದು, ಆಶರ್ಶ್‌ ಎಂ ಆರ್‌ ಎನ್ನುವ ಅಧ್ಯಾಪಕರೊಬ್ಬರು ಈ ರೀತಿ ನಡೆದುಕೊಂಡಿದ್ದಾರೆ.

ವಿಡಿಯೋ ವೈರಲ್‌ ಆಗ್ತಿದೆ

ಈ ಹಿಂದೆ ಆದರ್ಶ್‌ ಎನ್ನುವವರು ಶಿರಸಿಯ ಕೊಳಗಿಬೀಸ್‌ ಕಾಲೇಜಿನ ವಿದ್ಯಾರ್ಥಿಯೊಂದಿಗೆ ಚಕ್ಕಂದವಾಡಿ ಸಿಕ್ಕಿಬಿದ್ದು ಹೊಡೆತ ತಿಂದಿದ್ದರು. ಆಗಲೂ ಇವರಿಗೆ ಥಳಿಸಲಾಗಿತ್ತು. ಆಗ ಅವರನ್ನು ಬೇರೆ ಕಾಲೇಜಿಗೆ ವರ್ಗಾಯಿಸಲಾಗಿತ್ತು. ಈಗ ಸಾಗರದ ಕಾಲೇಜುವೊಂದರಲ್ಲಿ ಮುಸ್ಲಿಂ ಯುವತಿ ಜೊತೆ ಚಕ್ಕಂದವಾಡಿದ್ದು, ಯುವಕರ ಗುಂಪೊಂದು ಹೊಡೆದ ವಿಡಿಯೋ ವೈರಲ್‌ ಆಗ್ತಿದೆ.

ಮುಖ ತೋರಿಸಿಲ್ಲ

ಮಗಳ ವಯಸ್ಸಿನ ಹುಡುಗಿಯ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಒಂದಿಷ್ಟು ಯುವಕರು ಸಿಟ್ಟಿನಿಂದ ಆದರ್ಶ್‌ ಎಂ ಆರ್‌ ಎಂಬ ಅಧ್ಯಾಪಕನಿಗೆ ಹೊಡೆದಿದ್ದಾರೆ. ವಿಡಿಯೋದಲ್ಲಿ ಆದರ್ಶ್‌ ಮಾತ್ರ ಮುಖವನ್ನು ತೋರಿಸುತ್ತಿಲ್ಲ. ಯುವಕರು ಬಾಯಿಗೆ ಬಂದಹಾಗೆ ಬೈದಾಗಲೂ ಅವರು ಮುಖ ಮುಚ್ಚಿಕೊಂಡಿದ್ದಾರೆ. ಅವರ ಮುಖವನ್ನು ವಿಡಿಯೋದಲ್ಲಿ ಬರುವ ಹಾಗೆ ಮಾಡಬೇಕು ಎಂದು ಯುವಕರು ಒದ್ದಾಡಿದ್ದಾರೆ. ಆದರೂ ಕೂಡ ಆದರ್ಶ್‌ ಮಾತ್ರ ಮುಖವನ್ನು ತೋರಿಸಲು ಬಿಟ್ಟಿಲ್ಲ.

ಹೇಗೆ ಶಾಲೆಗೆ ಕಳಿಸೋದು?

ಯಾವ ಶಿಕ್ಷಕ ಕೂಡ ಹೀಗೆ ಮಾಡಬಾರದು, ಮಕ್ಕಳನ್ನು ನಾವು ಓದಿಸಲು ಶಾಲೆಗೆ ಕಳಿಸುತ್ತೇವೆ, ಇವರು ಹೀಗೆ ಮಾಡಿದರೆ ಏನು ಮಾಡಬೇಕು? ಆದರ್ಶ್‌ ಅಲ್ಲ, ಬೇರೆ ಯಾರೂ ಕೂಡ ಹೀಗೆ ಮಾಡಬಾರದು ಎಂದು ಯುವಕರು ವಿಡಿಯೋದಲ್ಲಿ ಹೇಳಿದ್ದಾರೆ. ಮಗಳ ವಯಸ್ಸಿನ ಹುಡುಗಿ ಜೊತೆ ಹೀಗೆ ನಡೆದುಕೊಳ್ಳಲು ಹೇಗೆ ಮನಸ್ಸು ಬರುತ್ತದೆ ಎಂದು ಯುವಕರು ಪ್ರಶ್ನೆ ಮಾಡಿದ್ದಾರೆ.

ಈ ಘಟನೆಯು ಪೊಲೀಸ್‌ ಠಾಣೆ ಮೆಟ್ಟಿಲೇರಿದೆಯೋ ಅಥವಾ ಅಲ್ಲೇ ಬಗೆಹರಿದಿದೆಯೋ ಎಂಬ ಬಗ್ಗೆ ಉತ್ತರ ಇಲ್ಲ. ಸದ್ಯ ಈ ವಿಡಿಯೋ ಮಾತ್ರ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. ಅಂದಹಾಗೆ ಇಂಥ ಪ್ರಕರಣಗಳು ಮತ್ತೆ ಆಗದಂತೆ ಪೊಲೀಸ್‌ ಠಾಣೆ, ಸಮಾಜ ಕೂಡ ಗಮನಕೊಡಬೇಕಿದೆ.

PREV
Read more Articles on
click me!

Recommended Stories

ಅಮೆರಿಕಾಗೆ ಹೊರಟಿದ್ದ ಹುಬ್ಬಳ್ಳಿ ಮಹಿಳೆಯ ಕೋಟಿಗಟ್ಟಲೆ ಚಿನ್ನ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಚೆಕ್ಕಿಂಗ್ ಬಳಿಕ ಮಾಯ!
ಕಾರವಾರ ನಗರಸಭೆಯ ಶಿರವಾಡ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಭಾರೀ ಅಗ್ನಿ ಅವಘಡ! ರಣಭೀಕರ ದೃಶ್ಯಗಳು ಇಲ್ಲಿವೆ ನೋಡಿ!