Mysuru : ಸ್ಪರ್ಧಾತ್ಮಕ ಪರೀಕ್ಷೆಗೆ ಮೊಬೈಲ್‌ ಬಿಟ್ಟು ಪುಸ್ತಕ ಹಿಡಿಯಿರಿ

By Kannadaprabha News  |  First Published Nov 12, 2022, 5:06 AM IST

ವಿದ್ಯಾರ್ಥಿಗಳು ದಿನಪತ್ರಿಕೆ ಓದುವ ಹವ್ಯಾಸದೊಂದಿಗೆ ಮೊಬೈಲ್‌, ಟಿ.ವಿ ಬಳಕೆ ಕಡಿಮೆ ಮಾಡಿ, ಗ್ರಂಥಾಲಯಗಳಲ್ಲಿನ ಪುಸ್ತಕಗಳನ್ನು ಹೆಚ್ಚು ಓದಿ ವಿಷಯ ಮನನ ಮಾಡಿಕೊಂಡರೆ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆ ಪರಿಣಾಮಕಾರಿ ಎದುರಿಸಲು ಸಾಧ್ಯ ಎಂದು ಮೈಸೂರಿನ ಹಿರಿಯ ಪತ್ರಕರ್ತರು, ಲೇಖಕರಾದ ಅಂಶಿ ಪ್ರಸನ್ನಕುಮಾರ್‌ ಹೇಳಿಸಿದರು.


  ಚಾಮರಾಜನಗರ (ನ.112):  ವಿದ್ಯಾರ್ಥಿಗಳು ದಿನಪತ್ರಿಕೆ ಓದುವ ಹವ್ಯಾಸದೊಂದಿಗೆ ಮೊಬೈಲ್‌, ಟಿ.ವಿ ಬಳಕೆ ಕಡಿಮೆ ಮಾಡಿ, ಗ್ರಂಥಾಲಯಗಳಲ್ಲಿನ ಪುಸ್ತಕಗಳನ್ನು ಹೆಚ್ಚು ಓದಿ ವಿಷಯ ಮನನ ಮಾಡಿಕೊಂಡರೆ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆ ಪರಿಣಾಮಕಾರಿ ಎದುರಿಸಲು ಸಾಧ್ಯ ಎಂದು ಮೈಸೂರಿನ ಹಿರಿಯ ಪತ್ರಕರ್ತರು, ಲೇಖಕರಾದ ಅಂಶಿ ಪ್ರಸನ್ನಕುಮಾರ್‌ ಹೇಳಿಸಿದರು.

ಜಿ.ಪಂ.ಸಭಾಂಗಣದಲ್ಲಿ ಜಿ.ಪಂ.ಯಿಂದ ಪ.ಜಾ, ಪ.ಪಂ. ಮತ್ತು ಹಿಂ.ವ ಇಲಾಖೆಯ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಮತ್ತು ವ್ಯಕ್ತಿತ್ವ ವಿಕಸನ ಕುರಿತು ಏರ್ಪಡಿಸಲಾಗಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

Latest Videos

undefined

ವಿದ್ಯಾರ್ಥಿಗಳಿಗೆ ಪತ್ರಿಕೋದ್ಯಮ ಶಿಕ್ಷಣದ ಜೊತೆಗೆ ಕೌಶಲ್ಯಾಭಿವೃದ್ಧಿ ತರಬೇತಿ ಅವಶ್ಯ. ವಿದೇಶಗಳಲ್ಲಿ ಅನೇಕ ಭಾರತೀಯರು ವಿವಿಧ ಉದ್ಯೋಗದಲ್ಲಿದ್ದಾರೆ.

ಇದಕ್ಕೆ ಸ್ಪರ್ಧಾತ್ಮಕ ಅವಕಾಶಗಳೇ ಕಾರಣ ಎಂದರು.

ಮಾಧ್ಯಮ ಕ್ಷೇತ್ರದಲ್ಲಿ ಸಾಕಷ್ಟುಅವಕಾಶಗಳಿವೆ. ಸಾಮಾನ್ಯ ಜ್ಞಾನವಿರುವ ಯಾವುದೇ ವ್ಯಕ್ತಿ ಮಾಧ್ಯಮ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದರು.

ಜಿ.ಪಂ. ಸಿಇಒ ಕೆ.ಎಂ. ಗಾಯಿತ್ರಿ, ವಿದ್ಯಾರ್ಥಿ ಜೀವನದಲ್ಲಿ ಸತತ ಪರಿಶ್ರಮ, ನಿರಂತರ ಅಧ್ಯಯನ ಪ್ರಯತ್ನದಿಂದ ಸಾಗುವ ಗುರಿಯೆಡೆಗೆ ವಿದ್ಯಾರ್ಥಿಗಳು ಸ್ಪಷ್ಟತೆಯನ್ನು ಹೊಂದಿರಬೇಕು ಎಂದು ಅಭಿಪ್ರಾಯಪಟ್ಟರು.

ವಿದ್ಯಾರ್ಥಿಗಳ ಬುದ್ಧಿಮತ್ತೆ ಹೆಚ್ಚಿಸಲು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಮತ್ತು ವ್ಯಕ್ತಿತ್ವ ವಿಕಸನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಟ್ಟದಲ್ಲಿ ಇದರ ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.

ಮೊಬೈಲ್‌ ಬಳಕೆಯಿಂದ ವಿದ್ಯಾರ್ಥಿಗಳಲ್ಲಿ ಆಲೋಚನಾ ಕ್ರಮ ಕಡಿಮೆಯಾಗುತ್ತಿದೆ. ಮಿತವಾಗಿ ಬಳಸುವ ಮೂಲಕ ಸಕಾರಾತ್ಮಕ ಚಿಂತನೆಯೊಂದಿಗೆ ವಿದ್ಯಾರ್ಥಿಗಳು ಮುನ್ನಡೆಯಬೇಕು ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಗ್ರಂಥಾಲಯಗಳಿಗೆ ಅವಶ್ಯಕ ಪುಸ್ತಕಗಳ ಪಟ್ಟಿನೀಡಬೇಕು. ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳಿಕೆಗೆ ಖಾಸಗಿಯಾಗಿ ಕುಳಿತು ಓದಲು ಪ್ರತ್ಯೇಕ ಅಧ್ಯಯನ ಕೊಠಡಿ ಇರಬೇಕು. ವಾರಾಂತ್ಯದಲ್ಲಿ ವಿಷಯತಜ್ಞರ ಪಠ್ಯವಿಷಯಗಳ ಕುರಿತು ಕೂಲಕುಂಶ ಚರ್ಚೆಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದರು.

ಮೈಸೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಭೂಗೋಳಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ಪಿ.ಎನ್‌. ಹೇಮಚಂದ್ರ, ಉದ್ಯೋಗ ಮಾರ್ಗದರ್ಶನ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಒಂದು ಪರಿಚಯ ಕುರಿತು, ಮೈಸೂರಿನ ಸಿದ್ದಾರ್ಥ ನಗರದ ಸ.ಪ್ರ.ದ ಕಾಲೇಜಿನ ಇಂಗ್ಲೀಷ್‌ ವಿಭಾಗದ ಸಹ ಪ್ರಾಧ್ಯಾಪಕ ಕೆ.ಎ. ಪ್ರಸನ್ನಕುಮಾರ್‌ ಅವರು ವ್ಯಕ್ತಿತ್ವ ವಿಕಸನ ಮತ್ತು ಜೀವನ ಕೌಶಲ ಕುರಿತು ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ ಅವರು ಕ್ರೀಡಾ ಕ್ಷೇತ್ರ ಕುರಿತು ವಿಷಯ ಮಂಡಿಸಿದರು.

ಜಿ.ಪಂ. ಮುಖ್ಯ ಯೋಜನಾ​ಧಿಕಾರಿ ಕೆ.ಬಿ. ಪ್ರಭುಸ್ವಾಮಿ, ಜಿ.ಪ. ವರ್ಗಗಳ ಕಲ್ಯಾಣಾಧಿ​ಕಾರಿ ಮಂಜುಳ, ಹಿಂ.ವ. ಕಲ್ಯಾಣ ಇಲಾಖೆಯ ಜಿಲ್ಲಾಅ​ಧಿಕಾರಿ ಬಿಂದಿಯಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್‌ ಇದ್ದರು.

ಆಟೊದಲ್ಲಿ ಗ್ರಂಥಾಲಯ

ಶಶಿಕಲಾ ತಳವಾರ

ಹುಬ್ಬಳ್ಳಿ (ನ.6) : ಇಲ್ಲೊಬ್ಬ ಆಟೋ ಚಾಲಕ ತನ್ನ ರಥದಲ್ಲಿ ಕನ್ನಡ ಪುಸ್ತಕ ಇಟ್ಟುಕೊಂಡು ಓದಿನ ಅಭಿರುಚಿ ಬೆಳೆಸುತ್ತಿದ್ದಾರೆ. ದಿನದ ದುಡಿಮೆಯಲ್ಲಿ ಸಮಾಜ ಸೇವೆಗಾಗಿಯೇ ಇಂತಿಷ್ಟುಹಣ ತೆಗೆಹಿಡುವ ಜತೆಗೆ ನಿರಾಶ್ರಿತರಿಗೆ ಅನ್ನ, ಹೊದಿಕೆ ನೀಡುತ್ತಾರೆ. ಕನ್ನಡ ರಾಜ್ಯೋತ್ಸವ ದಿನದಿಂದ ತನ್ನ ರಥದಲ್ಲಿ ಉಚಿತ ಸೇವೆ ನೀಡುವ ಜತೆಗೆ ಪ್ರತಿ ಪ್ರಯಾಣಿಕರಿಗೆ ಗುಲಾಬಿ ಹೂ ನೀಡಿ ಕನ್ನಡ ಪುಸ್ತಕ ಓದುವಂತೆ ಹಾಗೂ ಕನ್ನಡ ಭಾಷೆ ಬೆಳೆಸಲು ಪ್ರೇರೆಪಿಸುತ್ತಾರೆ.

ಕನ್ನಡ ಪುಸ್ತಕ ಪ್ರೇಮಿ ಮೈಸೂರಿನ ಸೈಯದ್ ಇಸಾಕ್‌ಗೆ ರಾಜರತ್ನಂ ಪ್ರಶಸ್ತಿ

ಇಂತಹ ಕನ್ನಡ ಸೇವೆ ಮಾಡುತ್ತಿರುವವರು ನಗರದ ವೀರಾಪುರ ಓಣಿಯ ಗೊಲ್ಲರ ಕಾಲನಿಯ ನಾಗರಾಜ ಗಬ್ಬೂರು. ಅಪಮಾನವೇ ಗ್ರಂಥಾಲಯಕ್ಕೆ ಪ್ರೇರಣೆ: ನಾಗರಾಜ ಓದಿದ್ದು ಎಸ್‌ಎಸ್‌ಎಲ್‌ಸಿ ಮಾತ್ರ. ಕಾರಣಾಂತರಗಳಿಂದ ವಿದ್ಯಾಭಾಸ ಮುಂದುವರಿಸಲಿಲ್ಲ. 11 ವರ್ಷದಿಂದ ಆಟೋ ಚಾಲನೆ ಮಾಡುತ್ತಿದ್ದಾರೆ. ಅವರ ಸೇವಾ ಮನೋಭಾವನೆಗೆ ಮೂಲ ಕಾರಣ, ಇಲ್ಲಿನ ಹಳೆ ಬಸ್‌ ನಿಲ್ದಾಣದ ಕಾಮತ್‌ ಹೋಟೆಲ್‌ ಹತ್ತಿರ ಶಿರಡಿ ಸಾಯಿಬಾಬಾ ಟ್ರಸ್ಟ್‌ ವತಿಯಿಂದ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಆಟೋ ಓಡಿಸುತ್ತಲೇ ಈ ಕಾಯಕದಲ್ಲಿ ನಾಗರಾಜ ಸಹ ಭಾಗಿಯಾಗಿರುತ್ತಿದ್ದರು. ಈ ವ್ಯವಸ್ಥೆ ಬಂದ್‌ ಆಯಿತು. ಬಳಿಕ ನಾಗರಾಜ್‌ ಆಟೋದಲ್ಲಿಯೇ ನೀರಿನ ಕ್ಯಾನ್‌ ಇಟ್ಟುಕೊಂಡು ಜನರ ದಾಹ ಇಂಗಿಸಿದರು. ಆರಂಭದಲ್ಲಿ ಕೆಲವರು ಅಪಹಾಸ್ಯ ಮಾಡಿದರು. ಇನ್ನು ಕೆಲವರು ನೋಡಿ ನಕ್ಕರು. ಆದರೆ ಅವರ ಗುರುಗಳಾದ ಡಾ. ಎ.ಸಿ. ವಾಲಿ ಅವರು ಪುಸ್ತಕ ನೀಡಿ ಪ್ರೋತ್ಸಾಹಿಸಿದರು. ಪುಸ್ತಕದ ಮೇಲೆ ಅಪಾರ ಅಭಿಮಾನ ಹೊಂದಿದ್ದ ನಾಗರಾಜ್‌ ಅಂದಿನಿಂದ ಆಟೋದಲ್ಲಿಯೇ ಗ್ರಂಥಾಲಯ ಆರಂಭಿಸಿದರು.

ರಾಜ್ಯೋತ್ಸವ ದಿನ ಉಚಿತ ಸೇವೆ:

ಇವರ ಆಟೋ ಹತ್ತಿದ್ದರೆ ಸಾಕು. ಬಗೆಬಗೆಯ ಪುಸ್ತಕಗಳು ರಾರಾಜಿಸುತ್ತಿವೆ. ಸಂತ ಶಿಶುನಾಳ ಶರೀಫರು, ಬಸವೇಶ್ವರ ವಚನಗಳು, ವಿವಿಧ ಸಾಹಿತಿಗಳ ಪುಸ್ತಕಗಳು ಸಿಗಲಿವೆ. ಕನ್ನಡ ರಾಜ್ಯೋತ್ಸವ ದಿನದಂದು ಇವರ ರಥ ಉಚಿತ ಸೇವೆ ನೀಡಲಿದೆ. ಅಂದು ಆಟೋ ಹತ್ತುವ ಪ್ರತಿಯೊಬ್ಬರಿಗೂ ಗುಲಾಬಿ ಹೂ ನೀಡುವ ಜತೆಗೆ ಕನ್ನಡ ಪುಸ್ತಕಗಳನ್ನು ಓದುವ ಜತೆಗೆ ಭಾಷೆ ಬೆಳೆಸುವಂತೆ ಮನವಿ ಮಾಡುತ್ತಾರೆ. ಪ್ರಯಾಣಿಕರು ಪುಸಕ್ತಗಳನ್ನು ಓದಿದ ಬಳಿಕ ಅವರಿಂದ ಅಭಿಪ್ರಾಯ ಪಡೆಯುತ್ತಾರೆ.

click me!