Mysuru : ತಮ್ಮ ಜೀವನ ಮುಡುಪಾಗಿಟ್ಟಿದ್ದ ಭಕ್ತ ಕನಕ ದಾಸರು ಸಂತ ಶ್ರೇಷ್ಠ

By Kannadaprabha News  |  First Published Nov 12, 2022, 4:56 AM IST

ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರವಾದ ಕೊಡುಗೆಯನ್ನು ನೀಡಿ ಜಾತ್ಯತೀತ ಸಮಾಜದ ನಿರ್ಮಾಣಕ್ಕೆ ತಮ್ಮ ಜೀವನ ಮುಡುಪಾಗಿಟ್ಟಿದ್ದ ಭಕ್ತ ಕನಕದಾಸರು ಸಂತ ಶ್ರೇಷ್ಠರೆಂದು ಶಾಸಕ ಸಾ.ರಾ. ಮಹೇಶ್‌ ಹೇಳಿದರು.


 ಕೆ.ಆರ್‌. ನಗರ (ನ.12):  ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರವಾದ ಕೊಡುಗೆಯನ್ನು ನೀಡಿ ಜಾತ್ಯತೀತ ಸಮಾಜದ ನಿರ್ಮಾಣಕ್ಕೆ ತಮ್ಮ ಜೀವನ ಮುಡುಪಾಗಿಟ್ಟಿದ್ದ ಭಕ್ತ ಕನಕದಾಸರು ಸಂತ ಶ್ರೇಷ್ಠರೆಂದು ಶಾಸಕ ಸಾ.ರಾ. ಮಹೇಶ್‌ ಹೇಳಿದರು.

ತಾಲೂಕು ಆಡಳಿತ, ತಾಪಂ,ಮತ್ತು ತಾಲೂಕು (Taluk)  ಕುರುಬರ ಸಂಘದ ಆಶ್ರಯದಲ್ಲಿ ಆಡಳಿತ ಸೌಧದ ಸಭಾಂಗಣದಲ್ಲಿ ನಡೆದ ಭಕ್ತ ಕನಸದಾಸರ 535ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇವರನ್ನು ಸಾಕ್ಷಾತ್ಕರಿಸಿಕೊಂಡ ಆ ಮಹಾನ್‌ ಪುರುಷ ಜಗತ್ತಿಗೆ ಜ್ಞಾನ (Knowledge)  ದೀವಿಗೆ ಹಚ್ಚಿದ ಯುಗ ಯೋಗಿ ಎಂದರು.

Latest Videos

undefined

500 ವರ್ಷಗಳ ಹಿಂದೆಯೆ ಪದ್ದತಿ ನಿರ್ಮೂಲನೆಗೆ ಆಧ್ಯತೆ ನೀಡಿ ದಾಸ ಸಾಹಿತ್ಯದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ ಕನಕ ದಾಸರ ಜೀವನ ಮತ್ತು ಸಾಧನೆ ವಿಶ್ವಕ್ಕೆ ಮಾದರಿಯಾಗಿದ್ದು ಅವರು ಕನ್ನಡ ನಾಡಿನಲ್ಲಿ ಜನಿಸಿದ್ದು ನಮ್ಮೆಲ್ಲರ ಸುಕೃತ ಎಂದು ಬಣ್ಣಿಸಿದರು.

ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ. ಶಿವಣ್ಣ ಮಾತನಾಡಿ ದೇಶದೆಲ್ಲಡೆ ಸಂಚರಿಸಿ ಸಮಾಜದ ಅಂಕು ಮತ್ತು ಡೊಂಕುಗಳನ್ನು ತಿದ್ದಿ ಜನರಿಗೆ ಜಾತ್ಯತೀತ ಪ್ರಜ್ಞೆಯ ಬೆಳಕು ಹರಿಸಿದ ಕನಕದಾಸರು ದ್ಯೆವಾಂಶ ಸಂಭೂತ ಎಂದು ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ಕೆ.ಸಿ. ಪುಟ್ಟಸಿದ್ದಶೆಟ್ಟಿ, ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್‌.ಎಂ. ಮಾಲೇಗೌಡ, ಪುರಸಭೆ ಅಧ್ಯಕ್ಷ ಪ್ರಕಾಶ್‌, ಸಾಹಿತಿ ಹೆಗ್ಗಂದೂರು ಪ್ರಭಾಕರ್‌, ತಹಸೀಲ್ದಾರ್‌ ಎಸ್‌. ಸಂತೋಷ್‌ ಮಾತನಾಡಿದರು.

ಹಿರಿಯ ವೈದ್ಯರಾದ ಡಾ.ಎನ್‌.ಡಿ. ಜಗನ್ನಾಥ್‌, ಡಾ. ಜೆ. ದೇವು, ಎಡತೊರೆ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ವೈ.ಆರ್‌. ಪ್ರಕಾಶ್‌ ಅವರಿಗೆ ಕನಕ ಪ್ರಶಸ್ತಿ ಮತ್ತು ಕನಕನಗರದ ಪರಶಿವ ಅವರಿಗೆ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿತು.

ಭಕ್ತ ಕನಕದಾಸರ 535 ನೇ ಜಯಂತ್ಯೋತ್ಸವ ಕಾರ್ಯಕ್ರಮ

ಮಹಾಲಿಂಗಪುರ: ಭಕ್ತಕನಕದಾಸ ಸೇವಾ ಸಮೀತಿ ಹಾಗೂ ಕನಕದಾಸ ಪತ್ತಿನ ಸಹಕಾರಿ ಸಂಘದ ಇವರ ಆಶ್ರಯದಲ್ಲಿ ನ 11 ರಂದು ಶುಕ್ರವಾರ ಶ್ರೀಬನಶಂಕರಿದೇವಿ ಸಾಂಸ್ಕೃತಿಕ ಭವನದಲ್ಲಿ ಜರುಗುವುದು.

ಜಯಂತ್ಯೋತ್ಸವ ಅಂಗವಾಗಿ ಮುಂಜಾನೆ 8 ಕ್ಕೆ ಭಕ್ತ ಕನಕದಾಸರ ಭಾವಚಿತ್ರವನ್ನು ಸಕಲ ವಾಧ್ಯಗಳೊಂದಿಗೆ ಮೇರವಣಿಗೆ ಮೂಲಕ ಬುದ್ನಿ ಪಿ.ಡಿ ಸಂಗೋಳ್ಳಿ ರಾಯಣ್ಣ ವೃತ್ತದಿಂದ ಪ್ರಾರಂಭಿಸಿ ಮಲ್ಲಮ್ಮ ವೃತ್ತ, ಚನ್ನಮ್ಮ ವೃತ್ತ, ಗಾಂಧಿ ವೃತ್ತ, ಜವಳಿ ಬಜಾರ, ನಡುಚೌಕಿಯಿಂದ ಮಹಾಲಿಂಗೇಶ್ವರ ದೇವಸ್ಥಾನದ ಮುಖಾಂತರ ಶ್ರೀಬನಶಂಕರಿದೇವಿ ಸಾಂಸ್ಕೃತಿಕ ಭವನ ತಲುಪುವುದು, ನಂತರ ಮುತ್ತೈದೆಯರಿಗೆ ಉಡಿ ತುಂಬುಕ ಕಾರ್ಯಕ್ರಮ ನಂತರ ಗಣ್ಯಮಾನ್ಯರ ಸನ್ಮಾನ ಹಾಗೂ ಶ್ರೀಗಳಿಂದ ಆಶಿರ್ವಚನ ನಂತರ ಮಹಾಪ್ರಸಾದ ಇರುವುದು.

ಈ ಕಾರ್ಯಕ್ರಮದ ಉಧ್ಘಾಟನೆಯನ್ನು ಶ್ರೀಮನ್‌ ಮಹಾರಾಜ ನಿರಂಜನ ಜಗದ್ಗುರು ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಮಾಡುವರು. ಕವಲಗುಡ್ಡದ ಸಿದ್ದಯೋಗಿ ಅಮರೇಶ್ವರ ಮಹಾರಾಜರು ಸಾನಿಧ್ಯ ವಹಿಸುವುರು, ಹಂದಿಗುಂದದ ಸದ್ಗುರು ಶ್ರೀಮಂತ ಶಿವಯೋಗಿಗಳ ಸಮ್ಮುಖ ವಹಿಸುವರು. ಕನಕ ಸೇವಾ ಸಮೀತಿ ಅಧ್ಯಕ್ಷ ಸತ್ಯಪ್ಪ ಹುದ್ದಾರ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಸಿದ್ದು ಸವದಿ, ಮಾಜಿ ಸಚಿವೆ ಉಮಾಶ್ರೀ, ಮಾಜಿ ಶಾಸಕ ಬಿ ಜಿ ಜಮಖಂಡಿ, ಪುರಸಭೆ ಅಧ್ಯಕ್ಷ ಬಸವರಾಜ ಹಿಟ್ಟಿನಮಠ ಆಗಮಿಸುವರು. ಹಿಡಕಲ್‌ದ ಶಿಕ್ಷಕರಾದ ಭೀಮಪ್ಪ ಘಂಟಿ ಉಪನ್ಯಾಸ ನೀಡುವರು. ಅತಿಥಿಗಳಾಗಿ ಡಿ.ಸಿಸಿ ಬ್ಯಾಂಕಿನ ನಿರ್ಧೇಶಕರಾದ ಬಸನಗೌಡ ಪಾಟೀಲ, ಜಿ.ಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ, ಕನಕದಾಸ ಪತ್ತಿನ ಬ್ಯಾಂಕಿನ ಅಧ್ಯಕ್ಷ ಮಹಾಲಿಂಗಪ್ಪ ಜಕ್ಕನ್ನವರ, ಕೆ.ಪಿ.ಸಿ.ಸಿ ಕಿಸಾನ ಘಟಕದ ಸಂಚಾಲಕ ಡಾ ಪದ್ಮಜೀತ ನಾಡಗೌಡ, ಖ್ಯಾತ ವ್ಯೆದ್ಯ ಡಾ ಎ.ಆರ್‌ ಬೆಳಗಲಿ, ಬ್ಯಾಕ ಕಾಂಗ್ರೆಸ ಅಧ್ಯಕ್ಷ ಮಲ್ಲಪ್ಪ ಸಿಂಗಾಡಿ, ಖ್ಯಾತ ಹೃದಯರೋಗ ತಜ್ಞ ಡಾ ಅಜೀತ ಕನಕರಡ್ಡಿ, ಆಮ್‌. ಆದ್ಮಿ ಪಕ್ಷದ ಮುಖಂಡ ಅರ್ಜುನ ಹಲಗಿಗೌಡರ, ಸಮಾಜ ಸೇವಕರಾದ ಅಂಬಾದಾಸ ಕಾಮೂರ್ತಿ. ಸಿದ್ದು ಕೊಣ್ಣೂರ, ರಂWನಗೌಡ ಪಾಟೀಲ, ಸಂಗಪ್ಪ ಹಲ್ಲಿ, ಗೌಡಪ್ಪಗೌಡ ಪಾಟೀಲ, ಗಂಗಾಧರ ಮೇಟಿ, ಮಲ್ಲಪ್ಪ ಬಾವಿಕಟ್ಟಿ, ಮಹಾಲಿಂಗಪ್ಪ ಲಾತೂರ ಸೇರಿದಂತೆ ಹಲವರು ಆಗಮಿಸುವರು ಎಂದು ಸಮಾಜದ ಮುಖಂಡ ವಿಠ್ಠಲ ಸಂಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪುರಸಭೆ ಸದಸ್ಯರಾದ ನಟರಾಜು, ತೋಂಟದಾರ್ಯ, ಸಂತೋಷ್‌ಗೌಡ, ದಲಿತ ಮುಖಂಡ ಹನಸೋಗೆನಾಗರಾಜು, ತಾಲೂಕು ವಕೀಲರ ಸಂಘದ ಖಜಾಂಚಿ ಬಿ.ಕೆ. ನೂತನ್‌, ಕುರುಬ ಸಮಾಜದ ಮುಖಂಡರಾದ ಜಿ.ಎಂ. ಹೇಮಂತ್‌, ಬುಡೀಗೌಡ, ರಾಘವೇಂದ್ರ ಗುಡ್ಡಪ್ಪ, ಶೇಖರ್‌, ಕೃಷ್ಣೇಗೌಡ, ಪುರಸಭೆ ಮುಖ್ಯಾಧಿಕಾರಿ ಡಾ. ಜಯಣ್ಣ, ಪೊಲೀಸ್‌ ಇನ್ಸ್‌ಪೆಕ್ಟರ್‌ ಎಂ.ಆರ್‌. ಲವ ಇದ್ದರು.

click me!