ಸಂಸ್ಕೃತ ಉಚ್ಛಾರದಿಂದ ಆರೋಗ್ಯ ಸಮಸ್ಯೆಗೆ ಮುಕ್ತಿ

By Suvarna News  |  First Published Jan 17, 2020, 3:08 PM IST

ಸಂಸ್ಕೃತ ಒಂದೊಂದೇ ಅಕ್ಷರಗಳ ಉಚ್ಛಾರದಿಂದ ಹಲವು ಆರೋಗ್ಯ ಸಮಸ್ಯೆಗಳ ಪರಿಹಾರ ಸಾಧ್ಯ, ಅಷ್ಟೇ ಅಲ್ಲದೇ ಮಕ್ಕಳ ಬುದ್ದಿವಂತಿಕೆ ಹೆಚ್ಚಿಸಲು ಒಂದೇ ಅಕ್ಷರ ಸಹಕಾರಿಯಾಗಿದೆ. 


ಶಿವಮೊಗ್ಗ [ಜ.17]:  ಶ್ವಾಸಗುರು ವಚನಾನಂದ ಸ್ವಾಮೀಜಿ ಮಕ್ಕಳ ಆರೋಗ್ಯ ವೃದ್ಧಿಗೆ ಸಂಸ್ಕೃತದ 6 ಸಲಹೆಗಳನ್ನು ನೀಡಿದರು.

ಶಿವಮೊಗ್ಗದ ವಿನೋಬನಗರದ ಶುಭಮಂಗಳ ಶ್ರೀಗಂಧ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು  ಲಂ, ವಂ, ರಂ ಎಂ, ಹಂ, ಓಂ ಬೀಜಾಕ್ಷರವನ್ನ ಭೋಧಿಸುವ ಮೂಲಕ ಆರೋಗ್ಯ ವೃದ್ಧಿಸಿಕೊಳ್ಳುವ ಸಲಹೆ ಕೊಟ್ಟರು. 

Tap to resize

Latest Videos

ಪೈಲ್ಸ್ ಖಾಯಿಲೆಗೆ ಲಂ, ಉರಿ ಮೂತ್ರ ಇರುವವರಿಗೆ ವಂ, ಗ್ಯಾಸ್ಟ್ರಿಕ್ ಸಮಸ್ಯೆಗೆ ರಂ, ಹೃದಯ ಖಾಯಿಲೆಗೆ ಎಂ ಎಂದು ಒಳ್ಳೆಯ ಕಂಠಕ್ಕೆ ಹಂ ಎಂದು, ಏಕಾಗ್ರತೆಗೆ ಓಂ ಎಂದು ಉಚ್ಛರಿಸಬೇಕೆಂದು ತಿಳಿಸಿದರು. 

ವಿಮಾನ ನಿಲ್ದಾಣದಲ್ಲಿ ತುಳು ನಾಡಿನ ಸಂಸ್ಕೃತಿ..! ಇಲ್ಲಿವೆ ಕಣ್ಮನ ಸೆಳೆಯೋ ಕಲಾಕೃತಿ

ಈ ರೀತಿಯ ಸಂಸ್ಕೃತ ಉಚ್ಛಾರಣೆಯ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಸಲಹೆ ನೀಡಿದರು. ಈ ಅಕ್ಷರಗಳು ಸಂಸ್ಕೃತ ಭಾಷೆಯಲ್ಲಿ ಮಾತ್ರ ದೊರೆಯುತ್ತದೆ. ಹಾಗಾಗಿ ಸಂಸ್ಕೃತ ಭಾಷೆ ಮಾತ್ರವಲ್ಲ ಆರೋಗ್ಯ ಕಾಪಾಡುವ ಓಷಧಿಯೂ ಹೌದು ಎಂದು ವಚನಾನಂದ ಶ್ರೀಗಳು ಹೇಳಿದರು. 

ಗಣಪತಿ ಕೆರೆಗೆ ಕಾಯಕಲ್ಪ, ಹಾಲಪ್ಪ-ಕಾಗೋಡು ಜತೆಯಾದ್ರಪ್ಪ

ಈ ಮಧ್ಯೆ ತಲೆನೋವಿಗೆ ಕಣ್ಣು ಮತ್ತು ಹಣೆ ಮೇಲೆ ಕೈಯಿಟ್ಟು ಧ್ಯಾನ ಮಾಡಿದರೇ ಅದರಿಂದ ಮುಕ್ತಿ ಪಡೆಯಲು ಸಾಧ್ಯ ಎಂದು ವಚನಾನಂದ ಸ್ವಾಮೀಜಿ ತಿಳಿಸಿದರು. 

click me!