ಸಚಿವ ಸ್ಥಾನ ತ್ಯಾಗದ ಬಗ್ಗೆ ಮಾತಾಡಿದ್ರು ಸಚಿವ ಈಶ್ವರಪ್ಪ

By Kannadaprabha News  |  First Published Jan 30, 2020, 12:34 PM IST

ರಾಜ್ಯದಲ್ಲಿ ಇನ್ನೂ ಕೂಡ ಸಚಿವ ಸಂಪುಟ ವಿಸ್ತರಣೆ ಚರ್ಚೆಗಳು ನಡೆಯುತ್ತಲೇ ಇದ್ದು, ಆದರೆ ಇನ್ನೂ ಈ ಬಗ್ಗೆ ಯಾವುದೇ ನಿರ್ಧಾರ ಆಗಿಲ್ಲ. ಇದೇ ವೇಳೆ ಈಶ್ವರಪ್ಪ ಸ್ಥಾನದ ತ್ಯಾಗದ ಬಗ್ಗೆ ಮಾತಾಡಿದ್ದಾರೆ. 


ಶಿವಮೊಗ್ಗ [ಜ.30]:  ಯಾವ ಸಚಿವರು ತ್ಯಾಗ ಮಾಡಬೇಕು? ಯಾರು ಮಾಡಬಾರದು ಎಂಬೆಲ್ಲ ವಿಚಾರಗಳ ಕುರಿತು ತೀರ್ಮಾನ ಮಾಡುವುದು ನಮ್ಮ ಶಾಸಕರಲ್ಲ. ಬದಲಾಗಿ ತೀರ್ಮಾನ ಕೈಗೊಳ್ಳುವುದು ಪಕ್ಷದ ನಾಯಕರು. ಇಂತಹ ಪ್ರಶ್ನೆಗಳಿಗೆ ನಾನು ಉತ್ತರಿಸುವುದೂ ಇಲ್ಲ ಎಂದು ಸಚಿವ ಕೆ. ಎಸ್‌. ಈಶ್ವರಪ್ಪ ಹೇಳಿದರು.

ಹಿರಿಯ ಸಚಿವರ ತ್ಯಾಗದ ಕುರಿತು ತಮ್ಮನ್ನು ಭೇಟಿ ಮಾಡಿದ ಪತ್ರ​ಕ​ರ್ತರು ಕೇಳಿ​ದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದ ತುಂಬಾ ಇದೇ ಪ್ರಶ್ನೆ ಕೇಳಿಬರುತ್ತಿದೆ. ಸುಮ್ಮನೆ ಎಲ್ಲ ಪ್ರಶ್ನೆಗಳಿಗೂ ನಾನು ಉತ್ತರ ಕೊಡುವುದಕ್ಕೆ ಹೋಗುವುದಿಲ್ಲ. ನೀವು ಸುಮ್ಮನೆ ಪ್ರಶ್ನೆ ಕೇಳ್ತಿರಿ. ನಾನು ಸುಮ್ಮನೆ ಇದೇ ಉತ್ತರ ಕೊಡಬೇಕು ಎಂದರು.

Tap to resize

Latest Videos

ಫೆಬ್ರವರಿ 3ರಿಂದ ಮಿನಿ ಒಲಿಂಪಿಕ್ಸ್‌ ಆರಂಭ

ಸಚಿವ ಸಂಪುಟ ವಿಸ್ತರಣೆ ವೇಳೆ ಗೆದ್ದವರನ್ನು ತೆಗೆದುಕೊಳ್ಳಬೇಕೋ? ಸೋತವರನ್ನು ತೆಗೆದುಕೊಳ್ಳಬೇಕೋ? ಹೊಸಬರನ್ನು ತೆಗೆದುಕೊಳ್ಳಬೇಕೋ? ಹಳಬರನ್ನು ತೆಗೆದುಕೊಳ್ಳಬೇಕೋ? ಎಂಬೆಲ್ಲ ವಿಷಯಗಳ ಕುರಿತು ಕೂಡ ಪಕ್ಷದ ರಾಷ್ಟ್ರೀಯ ನಾಯಕರು ಹಾಗೂ ಸಿಎಂ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಹೇಳಿದರು.

ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತಾಗಿ ಈಗಾಗಲೇ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಪಕ್ಷದ ರಾಷ್ಟಿ್ರೕಯ ನಾಯಕರು ಚರ್ಚೆ ನಡೆಸಿದ್ದಾರೆ. ಆದಷ್ಟುಶೀಘ್ರದ​ಲ್ಲಿ ಸಂಪುಟ ವಿಸ್ತರಣೆ ಆಗಲಿದೆ. ಈ ತಿಂಗಳಲ್ಲಿ ವಿಸ್ತರಣೆ ಆಗುತ್ತೋ ಇಲ್ಲವೋ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ ಎಂದರು.

click me!