ರಾಯಚೂರು: ಲಿಂಗಸುಗೂರು ಸರ್ಕಾರಿ ಕಚೇರಿಯಲ್ಲಿ ಅಧಿಕಾರಿಗಳಿಂದಲೇ ತಡರಾತ್ರಿಯವರೆಗೆ ಗುಂಡು-ತುಂಡು ಪಾರ್ಟಿ, ಭಾರೀ ಆಕ್ರೋಶ

Published : May 10, 2026, 12:48 PM IST
Raichur PWD office party

ಸಾರಾಂಶ

ರಾಯಚೂರು ಜಿಲ್ಲೆಯ ಲಿಂಗಸುಗೂರು ಪಿಡಬ್ಲ್ಯುಡಿ ಕಚೇರಿಯಲ್ಲಿ, ಎಇಇ ಹನುಮಪ್ಪ ಅದವಾನಿ ನೇತೃತ್ವದಲ್ಲಿ ತಡರಾತ್ರಿ ಪಾರ್ಟಿ ನಡೆಸಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಪಾರ್ಟಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ರಾಯಚೂರು: ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ಸಾರ್ವಜನಿಕ ಕಾಮಗಾರಿಗಳ ಇಲಾಖೆ (ಪಿಡಬ್ಲ್ಯುಡಿ) ಕಚೇರಿಯಲ್ಲಿ ನಡೆದ ರಾತ್ರಿ ಪಾರ್ಟಿ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಸರ್ಕಾರಿ ಕಚೇರಿಯಲ್ಲೇ ತಡರಾತ್ರಿ ವರೆಗೆ ಪಾರ್ಟಿ ನಡೆಸಿದ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಲಿಂಗಸುಗೂರಿನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿಯಲ್ಲಿ ಈ ಪಾರ್ಟಿ ನಡೆದಿದ್ದು, ಎಇಇ ಹನುಮಪ್ಪ ಅದವಾನಿ ನೇತೃತ್ವದಲ್ಲಿ ಈ ಪಾರ್ಟಿ ನಡೆದಿದೆ ಎನ್ನಲಾಗಿದೆ. ಕಚೇರಿಯಲ್ಲೇ ಪರಿಚಯಸ್ಥರು ಹಾಗೂ ಕೆಲವು ಸಿಬ್ಬಂದಿಯನ್ನು ಸೇರಿಸಿಕೊಂಡು ಈ ಪಾರ್ಟಿ ಮಾಡಲಾಗಿದೆಯಂತೆ. ಯಾವ ಉದ್ದೇಶದಿಂದ ಈ ಪಾರ್ಟಿ ನಡೆದಿದೆ ಎಂಬ ಬಗ್ಗೆ ಮಾಹೊತೊ ತಿಳಿದುಬಂದಿಲ್ಲ.

ನಿಯಮಗಳನ್ನು ಗಾಳಿಗೆ ತೂರಿದ ಅಧಿಕಾರಿಗಳು

ಸರ್ಕಾರಿ ಕಚೇರಿಗಳಲ್ಲಿ ಕಚೇರಿ ಸಮಯ ಮುಗಿದ ನಂತರ ಇಂತಹ ಚಟುವಟಿಕೆಗಳಿಗೆ ಅವಕಾಶವಿಲ್ಲದಿದ್ದರೂ, ಇಲಾಖೆಯ ನಿಯಮಗಳನ್ನು ಲೆಕ್ಕಿಸದೆ ತಡರಾತ್ರಿ ವರೆಗೆ ಪಾರ್ಟಿ ನಡೆದಿರುವುದು ಈಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸಾರ್ವಜನಿಕ ಸೇವೆಗೆ ಮೀಸಲಾಗಿರುವ ಕಚೇರಿಯನ್ನು ಖಾಸಗಿ ಉದ್ದೇಶಗಳಿಗೆ ಬಳಸಿಕೊಂಡಿರುವುದನ್ನು ಜನರು ತೀವ್ರವಾಗಿ ಖಂಡಿಸಿದ್ದಾರೆ.

ವೈರಲ್ ವಿಡಿಯೋದಿಂದ ಬಯಲಾದ ಪಾರ್ಟಿ ಕಥೆ

ಈ ಪಾರ್ಟಿಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಇದು ಬೆಳಕಿಗೆ ಬಂದಿದೆ. ಈ ಘಟನೆ ಹಿನ್ನೆಲೆಯಲ್ಲಿ ತಪ್ಪಿತಸ್ಥ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಸರ್ಕಾರಿ ಕಚೇರಿಗಳ ಗೌರವ ಕಾಪಾಡುವ ಜವಾಬ್ದಾರಿ ಹೊಂದಿರುವ ಅಧಿಕಾರಿಗಳೇ ಇಂತಹ ನಡೆ ತೋರಿರುವುದು ಆತಂಕಕಾರಿ ಎಂದು ಅಭಿಪ್ರಾಯ ವ್ಯಕ್ತವಾಗಿದೆ. ಇದು ರಾಯಚೂರು ಜಿಲ್ಲೆಯಲ್ಲಿ ಆಡಳಿತ ವ್ಯವಸ್ಥೆಯ ಪ್ರಶ್ನಿಸುವಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂಬ ಒತ್ತಾಯವೂ ಕೇಳಿಬರುತ್ತಿದೆ.

PREV
Read more Articles on
click me!

Recommended Stories

Art of Living: ಬಂಜರು ಭೂಮಿಯಲ್ಲಿ ಅರಳಿದ ಆರ್ಟ್ ಆಫ್ ಲಿವಿಂಗ್!
ಮಲೆ ಮಹದೇಶ್ವರ ಬೆಟ್ಟದಲ್ಲಿ ಚಿರತೆ ದಾಳಿ, ಕುಟುಂಬದೊಂದಿಗೆ ನಾಗಮಲೆಯತ್ತ ಹೋಗುತ್ತಿದ್ದಾಗ ಬೆಂಗಳೂರು ಮೂಲದ ಬಾಲಕ ಬಲಿ!