ಮೈಸೂರು ಕನ್ನಡಿ ಗೋಡೆ: ಮೂತ್ರ ವಿಸರ್ಜನೆ ತಡೆ ಯೋಜನೆ ವಿಫಲ! ಕ್ಯಾರೇ ಅನ್ನದೆ ಕನ್ನಡಿ ಮುಂದೆ ನಿಂತೇ ಮೂತ್ರ ಮಾಡಿದ!

Published : May 10, 2026, 11:19 AM IST
Mysuru Installs Mirror

ಸಾರಾಂಶ

ಸ್ವಚ್ಛ ಸರ್ವೇಕ್ಷಣೆಯಲ್ಲಿ ನಂ.1 ಸ್ಥಾನಕ್ಕೇರಲು ಮೈಸೂರು ಮಹಾನಗರ ಪಾಲಿಕೆಯು ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ತಡೆಯಲು ಕನ್ನಡಿ ಗೋಡೆಗಳನ್ನು ಅಳವಡಿಸಿತ್ತು. ಆದರೆ, ಸಬರ್ಬ್ ಬಸ್ ನಿಲ್ದಾಣದ ಬಳಿ ವ್ಯಕ್ತಿಯೊಬ್ಬರು ಈ ಕನ್ನಡಿಯ ಎದುರೇ ಮೂತ್ರ ವಿಸರ್ಜಿಸುವ ಮೂಲಕ ಈ ಯೋಜನೆಗೆ ಹಿನ್ನಡೆ ಉಂಟುಮಾಡಿದ್ದಾರೆ.

ಮೈಸೂರು: ಈ ಬಾರಿಯ ಸ್ವಚ್ಛ ಸರ್ವೇಕ್ಷಣೆಯಲ್ಲಿ ನಂ.1 ಪಟ್ಟಕ್ಕೇರಲು ಹವಣಿಸುತ್ತಿರುವ ಮೈಸೂರು ಮಹಾನಗರ ಪಾಲಿಕೆಯು ನಗರದಲ್ಲಿ ಸ್ವಚ್ಛತೆ ಕಾಪಾಡುವ ಸಲುವಾಗಿ ವಿಶೇಷ ಯೋಜನೆಯೊಂದನ್ನು ಕೈಗೊಂಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ, ಕಸ ಸುರಿಯುವುದನ್ನು ತಡೆಗಟ್ಟಲು ನಗರ ಪ್ರಮುಖ ರಸ್ತೆಯೊಂದರ ಪಾದಚಾರಿ ಮಾರ್ಗಕ್ಕೆ ಅಂಟಿಕೊಂಡಿರುವ ಕಾಂಪೌಂಡ್‌ಗೆ ಕನ್ನಡಿ ಅಳವಡಿಸಿ ಗಮನ ಸೆಳೆಯುತ್ತಿದೆ.

ಕನ್ನಡಿ ಎದುರು ನಿಂತೇ ಮೂತ್ರ ವಿಸರ್ಜಿಸಿದ ವ್ಯಕ್ತಿ

ಆದರೆ ಇದೆರೆಲ್ಲದರ ಮಧ್ಯೆ ಮೈಸೂರಿನ ಸಬರ್ಬ್ ಬಸ್ ನಿಲ್ದಾಣದ ಎದುರು ಅಳವಡಿಸಿರುವ ಮಿರರ್ ಕಾಂಪೌಂಡ್ ಗೆ ವ್ಯಕ್ತಿಯೋರ್ವ ಮೂತ್ರ ವಿಸರ್ಜಿಸಿದ್ದಾನೆ. ಮೂತ್ರ ವಿಸರ್ಜನೆ ತಪ್ಪಿಸಲು ಹಾಕಿದ್ದ ಮಿರರ್ ಅನ್ನು ಲೆಕ್ಕಿಸದೆ ಎದುರೇ ನಿಂತೇ ಮೂತ್ರ ವಿಸರ್ಜಿಸಿದ್ದಾನೆ. ಇದನ್ನು ಗಮನಿಸಿದ ಸಾರ್ವಜನಿಕರಿಂದ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಳ್ಳಲಾಯ್ತು. ಒಟ್ಟು 9.5 ಲಕ್ಷ ವೆಚ್ಚದಲ್ಲಿ ಮಿರರ್ ಅಳವಡಿಸಲಾಗಿದೆ. ಕೇವಲ ಒಂದು ವಾರ ಕಳೆಯುವ ಮುನ್ನವೇ ಹಳೆ ಚಾಳಿ ಮುಂದುವರಿಸಿದ ಸಾರ್ವಜನಿಕ. ಎಲ್ಲೆಡೆ ಪ್ರಶಂಸೆಗೆ ಒಳಗಾಗಿದ್ದ ಪಾಲಿಕೆಗೆ ಮತ್ತೆ ತಲೆ ನೋವು ತಂದಿಟ್ಟಿದ್ದಾನೆ. ನೆಟ್ಟಿಗರು ಸಿವಿಕ್ ಸೆನ್ಸ್ ಇಲ್ಲ ಎಂದು ಛೀಮಾರಿ ಹಾಕುತ್ತಿದ್ದಾರೆ.

ಕನ್ನಡಿ ಅಳವಡಿಸಲು ಕಾರಣವೇನು?

ಇಲ್ಲಿ ಸಾಮಾನ್ಯವಾಗಿ ಬಸ್‌ ನಿಲ್ದಾಣಕ್ಕೆ ಬರುವ ಪ್ರಯಾಣಿಕರು, ಸಾರ್ವಜನಿಕರು, ದಾರಿಹೋಕರು ಮೂತ್ರ ವಿಸರ್ಜನೆ ಮಾಡುವುದು ಸಾಮಾನ್ಯವಾಗಿತ್ತು. ಇದನ್ನು ತಪ್ಪಿಸಲು ಈಗ ಕನ್ನಡಿ ಅಳವಡಿಸಲಾಗಿದೆ. ಇದರಿಂದಾಗಿ ಸಾರ್ವಜನಿಕರು ಮೂತ್ರ ವಿಸರ್ಜನೆಗೆ ನಿಂತರೇ ಮೂತ್ರ ವಿಸರ್ಜಿಸುವುದನ್ನು ತಾವೇ ನೋಡುವಂತಾಗುತ್ತದೆ. ಜೊತೆಗೆ ರಸ್ತೆಯಲ್ಲಿ ಓಡಾಡುವ ಜನರಿಗೂ ಕಾಣುತ್ತದೆ. ಇದರಿಂದ ಅನೈರ್ಮಲ್ಯ ತಪ್ಪಿಸಬಹುದು ಎಂಬುದು ನಗರ ಪಾಲಿಕೆ ಯೋಜನೆ ಮತ್ತು ಯೋಚನೆ.

ಅಲ್ಲದೆ ರಾತ್ರಿ ವೇಳೆ ಈ ಕನ್ನಡಿಯ ಕೆಳಗೆ ಎಲ್‌ಇಡಿ ಬಲ್ಪ್‌ ಅಳವಡಿಸಿರುವುದರಿಂದ ರಾತ್ರಿ ವೇಳೆಯೂ ಮೂತ್ರ ವಿಸರ್ಜನೆ ಮಾಡುವುದು ತಪ್ಪಿಸಬಹುದು. ಈ ಕಾರ್ಯ ಯಶಸ್ವಿಯಾದರೆ ನಗರದ ಇತರ ಕಡೆಗೂ ವಿಸ್ತರಿಸುವ ಸಾಧ್ಯತೆ ಹೆಚ್ಚಿದೆ. ಈ ಸಲಹೆಯನ್ನು ಯಾರು ಕೊಟ್ಟರೋ ಏನೋ ಆದರೆ ಉತ್ತಮವಾಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ. ಕನ್ನಡಿ ಅಳವಡಿಸಿರುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ.

PREV
Read more Articles on
click me!

Recommended Stories

ಬೆಂಗಳೂರಿನ ನೆಲದಲ್ಲಿಂದು ಕೇಸರಿ ಸೂರ್ಯ ಉದಯ, ಎಚ್‌ಎಎಲ್‌ನಲ್ಲಿ ಪ್ರಧಾನಿ ಮೋದಿ ಅಬ್ಬರ, ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ!
ಬರ್ತ್​ಡೇ ದಿನ ಗುಡ್​ನ್ಯೂಸ್ ಕೊಡ್ತೀರಾ ಕೇಳಿದ್ರೆ ಅಭಿಮಾನಿಗಳ ಮೇಲೆ ಕೇಸ್​ ಹಾಕೋ ಎಚ್ಚರಿಕೆ ಕೊಟ್ಟ ಡಿಕೆಶಿ- ಫ್ಯಾನ್ಸ್​ ಶಾಕ್​