ಕಳೆದ ಬಾರಿ ಅತಿ​ವೃಷ್ಟಿ, ಈ ಬಾರಿ ಅನಾ​ವೃಷ್ಟಿ, ಆತಂಕದಲ್ಲಿ ರೈತರು!

By Kannadaprabha News  |  First Published Jun 25, 2023, 4:22 AM IST

ಸಂಪೂರ್ಣ ಒಣ ಬೇಸಾಯ ಕೃಷಿ ಪದ್ಧತಿಗೆ ಆಸರೆಯಾಗಿರುವ ಕಾಳಗಿ ತಾಲೂಕಿನಲ್ಲಿ ಈ ಬಾರಿ ಮುಂಗಾರು ಮಳೆ ಬರ ಕಾಡಿದೆ. ಹೀಗಾಗಿ ರೈತರು ಕಂಗಾಲಾಗಿದ್ದಾರೆ. ಕಳೆದ ಬಾರಿ ಮುಂಗಾರು ಮಳೆಯಿಂದ ಅತಿವೃಷ್ಟಿಎದುರಿಸಿ ಅದರಲ್ಲುಳಿದ ಅಲ್ಪ ಸ್ವಲ್ಪ ಹೆಸರು, ತೊಗರಿ, ಉದ್ದು, ಸೋಯಾ ಹತ್ತಿ ಸೇರಿ ಮುಂತಾದ ಬೆಳೆಗಳಿಗೆ ಶಂಕದ ಕೀಟದ ಕಾಟದಿಂದ ರೈತ ಸಂಪೂರ್ಣ ಬೇಸತ್ತಿದ್ದು ವಾಸ್ತವವೇ ಸರಿ.


ಕಾಳಗಿ (ಜೂ.25) : ಸಂಪೂರ್ಣ ಒಣ ಬೇಸಾಯ ಕೃಷಿ ಪದ್ಧತಿಗೆ ಆಸರೆಯಾಗಿರುವ ಕಾಳಗಿ ತಾಲೂಕಿನಲ್ಲಿ ಈ ಬಾರಿ ಮುಂಗಾರು ಮಳೆ ಬರ ಕಾಡಿದೆ. ಹೀಗಾಗಿ ರೈತರು ಕಂಗಾಲಾಗಿದ್ದಾರೆ.

ಕಳೆದ ಬಾರಿ ಮುಂಗಾರು ಮಳೆಯಿಂದ ಅತಿವೃಷ್ಟಿಎದುರಿಸಿ ಅದರಲ್ಲುಳಿದ ಅಲ್ಪ ಸ್ವಲ್ಪ ಹೆಸರು, ತೊಗರಿ, ಉದ್ದು, ಸೋಯಾ ಹತ್ತಿ ಸೇರಿ ಮುಂತಾದ ಬೆಳೆಗಳಿಗೆ ಶಂಕದ ಕೀಟದ ಕಾಟದಿಂದ ರೈತ ಸಂಪೂರ್ಣ ಬೇಸತ್ತಿದ್ದು ವಾಸ್ತವವೇ ಸರಿ. ಕಲ್ಯಾಣ ಕರ್ನಾಟಕದಲ್ಲಿ ತೊಗರಿ ಬೆಳೆ ಸಂಪೂರ್ಣ ನೆಟೆ ರೋಗದಿಂದ ಹಾಳಾಗಿದ್ದು, ಇದಕ್ಕೆ ಸರ್ಕಾರವು ಯಾವುದೆ ಪರಿಹಾರ ಸಹ ನೀಡಿಲ್ಲ.

Tap to resize

Latest Videos

undefined

 

ಇನ್ನು 4-5 ವರ್ಷ ಕರ್ನಾಟಕದಲ್ಲಿ ಮಳೆ ಕೊರತೆ?

ಕಳೆದ ಬಾರಿ ಅತಿವೃಷ್ಟಿ, ಈ ಬಾರಿ ಅನಾವೃಷ್ಟಿ, ಉದ್ದು, ಹೆಸರು ನಾಟಿ ಮಾಡುವ ಸಮಯದಲ್ಲಿ ಬರಬೇಕಿದ್ದ ಮೃಗಶಿರ ಆರಿದ್ರ ಚರ​ಣ​ಗಳು ಸಂಪೂರ್ಣ ಕೈಕೊಟ್ಟರೈತನಿಗೆ ಕಂಗಾಲಾಗಿ ದಿಕ್ಕು ತೋಚದಂತಾಗಿದೆ. ಚಿಂಚೋಳಿ ತಾಲೂಕು ಭಾಗಶಃ ಕೊಳವೆ ಬಾವಿ ಆಸರೆಯ ಜಮೀನಿನವರಾಗಿದ್ದು, ಕಾಳಗಿ ತಾಲೂಕಿನ ರೈತರು ಸಂಪೂರ್ಣ ಮಳೆಯ ಆಶ್ರಿತರು.

ಚಿತ್ತಾಪುರ ಕಾಳಗಿಯಲ್ಲಿ ಮೇ ತಿಂಗಳಿನಲ್ಲಿ 120ಮಿ.ಮೀ ಮಳೆಯಾಗಬೇಕಿತ್ತು. ಸುರಿದಿದ್ದು ಬರೀ 70ಮಿ.ಮೀ ಮಳೆಯಾಗಿದೆ. ಈ ವರ್ಷ ವಾರ್ಷಿಕ 788 ಮಿ.ಮೀ ಮಳೆಯಾಗುವ ನಿರೀಕ್ಷೆಯಿದೆ. ಕಲಬುರಗಿ ಜಿಲ್ಲೆ ಆದಿಯಾಗಿ ತಾಲೂಕಿನಲ್ಲಿ ಜೂನ್‌ ಮೊದಲ ಅಥವಾ ಎರಡನೇ ವಾರದಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿತ್ತು. ಆದರೆ ಈಗ ಹುಸಿಯಾದಂತಾಗಿದೆ.

ತಾಲೂಕಿನ 78 ಹಳ್ಳಿಗಳು ಮಳೆಯಾಶ್ರಿತ ಪ್ರದೇಶವಾಗಿದ್ದು, ಸಕಾಲದಲ್ಲಿ ಮಳೆಯಾಗದಿದ್ದರೆ ಈ ಭಾಗದ ರೈತರು ಮುಂಗಾರು ಬಿತ್ತನೆ ವೇಳೆ ಕಷ್ಟಅನುಭವಿಸುವ ಪರಸ್ಥಿತಿ ಎದುರಾಗಿದೆ.

ಈಗಾಗಲೇ ಬಿತ್ತನೆಗೆ ಭೂಮಿ ಹದಗೊಳಿಸಿದ್ದೇವೆ. ಈ ಬಾರಿ ಪೂರ್ವ ಮುಂಗಾರಿನಲ್ಲಿ ವಾಡಿಕೆಗಿಂತ ಕಡಿಮೆ, ಹೆಚ್ಚು ಅನ್ನದೆ ಒಂದು ಹನಿಯು ಮಳೆಯಾಗಿಲ್ಲ. ಜೂ.7ರಂದು ಬರಬೇಕಿದ್ದ ಮಳೆ ಪುನಃ ಆರಿದ್ರ ಚರಣ ಹೂಡಿದರು ಮಳೆಯಿಲ್ಲ. ನೆಟೆ ರೋಗದ ಪರಿಹಾರವು ಸರ್ಕಾರ ನೀಡಿಲ್ಲ. ಬೆಳೆ ವಿಮೆ ಇನ್ಶೂರೆನ್ಸ್‌ ಕಟ್ಟಿಕೊಂಡು ರೈತರಿಗೆ ನಯಾಪೈಸೆ ಹಣವು ದೊರಕಿಲ್ಲ.

- ರಾಜೆಶೇಖರ ಗುಡದಾ, ರಟಕಲ್‌ ರೈತ

ಕಾಳಗಿ ತಾಲೂಕಿನಲ್ಲಿ ಮುಂಗಾರಲ್ಲಿ ಒಟ್ಟಾರೆ 65 ಸಾವಿರ ಹೆಕ್ಟೇರ್‌ ಬಿತ್ತನೆ ಗುರಿ ಹೊಂದಲಾಗಿದೆ. ಮುಖ್ಯ ಬೆಳೆಗಳಾದ ಹೆಸರು, ಉದ್ದು, ಸೋಯಾಬಿನ್‌, ಹತ್ತಿ, ಮೆಕ್ಕೆಜೋಳ 50 ಸಾವಿರ ಹೆಕ್ಟೇರ್‌ ತೊಗರಿ ಬೆಳೆಗಳನ್ನು ಬಿತ್ತುವ ನಿರಿಕ್ಷೇಯಲ್ಲಿದ್ದ ರೈತರ ಕನಸು ಭಗ್ನವಾಗಿದೆ. ಬಿತ್ತನೆ ಬೀಜ ಹಾಗೂ ರಸಗೊಬ್ಬರ ಈಗಾಗಲೇ ಸಾಕಷ್ಟುಪ್ರಮಾಣದಲ್ಲಿ ಸಂಗ್ರಹಿಸಲಾಗಿದೆ. ಮುಂಗಾರಿನಲ್ಲಿ ರೈತರಿಗೆ ತೊಂದರೆಯಾಗದಂತೆ ನೋಡಿಕೊಂಡಿದ್ದೇವೆ.

- ಸರೋಜಾ, ಕೃಷಿ ಅಧಿಕಾರಿ, ಕಲಬುರಗಿ

click me!