ಕಾಲಿನಲ್ಲಿ ಪರೀಕ್ಷೆ ಬರೆದ ಕೌಶಿಕ್‌ ಫಸ್ಟ್‌ ಕ್ಲಾಸ್‌ ಪಾಸ್‌

By Suvarna NewsFirst Published Aug 11, 2020, 9:53 AM IST
Highlights

ಅಂಗವೈಕಲ್ಯದಿಂದ ಕೈಗಳಿಲ್ಲದಿದ್ದರೂ ಪರೀಕ್ಷೆಗೆ ಹಾಜರಾಗಿ, ಯಾರ ಸಹಾಯವನ್ನೂ ಪಡೆಯದೆ ಕಾಲಿನ ಬೆರಳುಗಳಲ್ಲೇ ಪೆನ್‌ ಹಿಡಿದು ಉತ್ತರ ಬರೆದ ಬಂಟ್ವಾಳ ತಾಲೂಕಿನ ಎಸ್‌ವಿಎಸ್‌ ಪ್ರೌಢಶಾಲೆ ವಿದ್ಯಾರ್ಥಿ ಕೌಶಿಕ್‌ ಎಸ್‌ಎಸ್‌ಎಲ…ಸಿ ಪರೀಕ್ಷೆಯಲ್ಲಿ 424 ಅಂಕ ಗಳಿಸುವ ಮೂಲಕ ಶೇ.68 ಫಲಿತಾಂಶ ಸಾಧಿಸಿದ್ದಾನೆ.

ಬಂಟ್ವಾಳ(ಆ.11): ಅಂಗವೈಕಲ್ಯದಿಂದ ಕೈಗಳಿಲ್ಲದಿದ್ದರೂ ಪರೀಕ್ಷೆಗೆ ಹಾಜರಾಗಿ, ಯಾರ ಸಹಾಯವನ್ನೂ ಪಡೆಯದೆ ಕಾಲಿನ ಬೆರಳುಗಳಲ್ಲೇ ಪೆನ್‌ ಹಿಡಿದು ಉತ್ತರ ಬರೆದ ಬಂಟ್ವಾಳ ತಾಲೂಕಿನ ಎಸ್‌ವಿಎಸ್‌ ಪ್ರೌಢಶಾಲೆ ವಿದ್ಯಾರ್ಥಿ ಕೌಶಿಕ್‌ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 424 ಅಂಕ ಗಳಿಸುವ ಮೂಲಕ ಶೇ.68 ಫಲಿತಾಂಶ ಸಾಧಿಸಿದ್ದಾನೆ.

ಈತನಿಗೆ ಹೆತ್ತವರಾದ ರಾಜೇಶ್‌ ಆಚಾರ್ಯ ಮತ್ತು ಜಲಜಾಕ್ಷಿ ದಂಪತಿ ಸೋಮವಾರ ಸಂಜೆ ಸಿಹಿ ತಿನಿಸಿ ಸಂಭ್ರಮಿಸಿದರು. ಕನ್ನಡದಲ್ಲಿ 96, ಆಂಗ್ಲ ಭಾಷೆಯಲ್ಲಿ 50, ಸಂಸ್ಕೃತದಲ್ಲಿ 83, ಗಣಿತದಲ್ಲಿ 63, ವಿಜಾನದಲ್ಲಿ 54, ಸಮಾಜದಲ್ಲಿ 78 ಅಂಕ ಗಳಿಸಿದ್ದು, ಒಟ್ಟು 424 ಅಂಕಗಳು ಕೌಶಿಕ್‌ಗೆ ಬಂದಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಕೌಶಿಕ್‌, ಪಿಯುಸಿ ವಾಣಿಜ್ಯ ವಿದ್ಯಾಭ್ಯಾಸ ನಡೆಸುವ ಇಚ್ಛೆ ಇದ್ದು, ಇದಕ್ಕೆ ಶಾಸಕ ರಾಜೇಶ್‌ ನಾಯ್‌್ಕ ನೆರವು ನೀಡುವುದಾಗಿ ತಿಳಿಸಿದ್ದಾರೆ ಎಂದರು.

ಕಾಲಿನಲ್ಲೇ ಸಚಿವ ಸುರೇಶ್‌ ಕುಮಾರ್‌ ಹೆಸರು ಬರೆದ ಕೌಶಿಕ್‌ಗೆ ಪ್ರಶಂಸೆ

ವಿದ್ಯಾರ್ಥಿಯಾಗಿರುವ ಕೌಶಿಕ್‌ ತನ್ನ ಅಣ್ಣ ಕಾರ್ತಿಕ್‌, ತಮ್ಮ ಮೋಕ್ಷಿತ್‌ ಜೊತೆ ಬಂಟ್ವಾಳ ಕಂಚಿಕಾರಪೇಟೆಯ ಪುಟ್ಟಮನೆಯಲ್ಲಿ ವಾಸವಿದ್ದಾನೆ. ಕೌಶಿಕ್‌ ಕಾಲ್ಬೆರಳ ಮೂಲಕ ಪರೀಕ್ಷೆ ಬರೆದಿದ್ದ ಭಾವಚಿತ್ರವನ್ನು ಟ್ವೀಟ್‌ ಮಾಡಿ ಅಭಿನಂದಿಸಿದ್ದ ಶಿಕ್ಷಣ ಸಚಿವರು, ಇತ್ತೀಚೆಗೆ ಪೊಳಲಿ ಭೇಟಿ ಸಂದರ್ಭ ಕೌಶಿಕ್‌ನ ಸಾಧನೆ ನೋಡಿ ಶ್ಲಾಘಿಸಿ ಸನ್ಮಾನಿಸಿದ್ದರು.

click me!