ಬೆಂಗಳೂರು (ಜು.15): ಕರಾವಳಿ ಮತ್ತು ಮಲೆನಾಡಿನ ಒಟ್ಟು ಐದು ಜಿಲ್ಲೆಗಳಲ್ಲಿ ಮಂಗಳವಾರವೂ ಮಳೆಯಾಗಿದೆ. ಭಾರೀ ಗಾಳಿ ಮಳೆಗೆ ಉಡುಪಿ ಮತ್ತು ಶಿವಮೊಗ್ಗದ ಗ್ರಾಮೀಣ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಗಾಳಿ-ಮಳೆ ಮುಂದುವರಿದಿತ್ತಾದರೂ ಉಡುಪಿ, ಶಿವಮೊಗ್ಗ ಹೊರತುಪಡಿಸಿ ಉಳಿದ ಮೂರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗಿನಲ್ಲಿ ಮಳೆಯಬ್ಬರ ಕಡಿಮೆ ಇತ್ತು.
undefined
ಉಡುಪಿಯಲ್ಲಿ ಅನೇಕ ನದಿಗಳು ತುಂಬಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ಹೆಚ್ಚಿದೆ. ಸೋಮವಾರ ರಾತ್ರಿಯ ಭಾರೀ ಗಾಳಿ, ಮಳೆಗೆ ಉಡುಪಿಯಲ್ಲಿ ಸುಮಾರು 20ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ದಕ್ಷಿಣ ಕನ್ನಡದಲ್ಲಿ ದಿನವಿಡೀ ಮೋಡ ಕವಿದ ವಾತಾವರಣ ಇದ್ದರೂ ಮಳೆಯಬ್ಬರ ಕ್ಷೀಣಸಿತ್ತು.
ಕೊಡಗಿನಲ್ಲಿ ಆ.16ರ ತನಕ ಭಾರಿ ವಾಹನ ಸಂಚಾರ ನಿಷೇಧ .
ಕೊಡಗು ಮತ್ತು ಚಿಕ್ಕಮಗಳೂರಲ್ಲೂ ಇದೇ ಸ್ಥಿತಿ ಇತ್ತು. ಇಡೀ ದಿನ ಈ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ. ಆದರೆ, ಶಿವಮೊಗ್ಗ ಮುಂಗಾರು ಮಳೆಯಾರ್ಭಟ ಮುಂದುವರೆದಿದೆ. ಇದರಿಂದ ಲಿಂಗನಮಕ್ಕಿ, ತುಂಗಾ ಸೇರಿದಂತೆ ವಿವಿಧ ಜಲಾಶಯಗಳ ಒಳಹರಿವಿನಲ್ಲಿಯೂ ಏರಿಕೆಯಾಗಿದೆ.
ತತ್ತರಿಸಿದ ಕೊಡಗು : ಕೊಡಗು ಜಿಲ್ಲೆಯಲ್ಲಿ ಮುಂಗಾರು ಚುರುಕುಗೊಂಡಿದ್ದು, ಮಡಿಕೇರಿಯ ಮಂಗಳೂರು ರಸ್ತೆಯಲ್ಲಿ ಸಣ್ಣ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿದೆ.
ಇನ್ನೂ 4 ದಿನ ಮಳೆ : ಹಲವು ಜಿಲ್ಲೆಗಳಿಗೆ ಯಲ್ಲೋ ಅಲರ್ಟ್
ಪಯಸ್ವಿನಿ ನದಿ ತುಂಬಿ ಹರಿಯುತ್ತಿದ್ದು ಪ್ರವಾಹ ದಿಂದ ಕೊಯನಾಡು ಗ್ರಾಮದ ಸುತ್ತಮುತ್ತಲ ನಿವಾಸಿಗಳು ಆತಂಕಕ್ಕಿಡಾಗಿದ್ದಾರೆ. ಭಾಗ ಮಂಡಲದ ತ್ರಿವೇಣಿ ಸಮಗಮದಲ್ಲಿ ನೀಡಿನ ಮಟ್ಟ ಏರಿಕೆಯಾಗಿದೆ. ಮಡಿಕೇರಿಯ ಕೆಲವೆಡೆ ಮರ ಕುಸಿದು ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಬಸವಸಾಗರ ಭರ್ತಿ : ಕೃಷ್ಣಾ ನದಿ ನೀಡಿನ ಮಟ್ಟ ಏರಿಕೆಯಾಗಿದ್ದು ಯಾದಗಿರಿ ಜಿಲ್ಲೆಯ ಬಸವಸಾಗರ ಡ್ಯಾಂ ಈ ಮಳೆಗಾಲದಲ್ಲಿ ಮೊದಲ ಬಾರಿಗೆ ಭರ್ತಿಯಾಗಿದೆ.