
ಹರಪನಹಳ್ಳಿ(ಜು.15): ಆಟವಾಡುವಾಗ ಗೋಲಿ ನುಂಗಿದ ಪರಿಣಾಮ 14 ತಿಂಗಳ ಮಗವೊಂದು ಮೃತಪಟ್ಟ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಬೇವಿನಹಳ್ಳಿ ತಾಂಡಾದದಲ್ಲಿ ಬುಧವಾರ ನಡೆದಿದೆ.
ಬೇವಿನಹಳ್ಳಿ ತಾಂಡಾದ ನಿವಾಸಿ ಹರೀಶ್ ಎಂಬುವರ ಪುತ್ರ ಮನವೀರ್ ಮೃತಪಟ್ಟಿದ್ದು, ಮನೆಯಂಗಳದಲ್ಲಿ ಆಟವಾಡುತ್ತಿದ್ದಾಗ ಮಗು ಗೋಲಿಯನ್ನು ನುಂಗಿದೆ. ಕೂಡಲೇ ಗೋಲಿಯನ್ನು ಹೊರತೆಗೆಯಲು ಪೋಷಕರು ಪ್ರಯತ್ನಿಸಿದ್ದಾರೆ.
ಶ್ವಾಸನಾಳದಲ್ಲಿ ಜೀರುಂಡೆ ಸಿಲುಕಿ ಮಗು ಸಾವು
ಆದರೆ, ಗೋಲಿ ಹೊರಬಾರದೆ ಇದ್ದಾಗ ಅಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮಗು ಸಾವನ್ನಪ್ಪಿದೆ.