ಮೃತಪಟ್ಟಿರುವ ದೊಡ್ಡ ಬಂಡೆಪ್ಪ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ದೊಡ್ಡ ಬಂಡೆಪ್ಪ ಬಿನ್ ಲೇಟ್ ಸುಬ್ಬಣ್ಣ ಎಂಬ ಅಪರಿಚಿತ ವ್ಯಕ್ತಿ ಅಲಿವೇಲಿ ಕೋಂ ದೊಡ್ಡ ಬಂಡೆಪ್ಪವರಿಗೆ ದಾನಪತ್ರ ಮೂಲಕ ದಾಖಲೆಗಳನ್ನು ಸೃಷ್ಟಿಸಿ 9-03-23 ರಂದು ನೊಂದಣಿ ಮಾಡಿಸಿದ್ದಾರೆ.
ಕೋಲಾರ(ಸೆ.28): ಸತ್ತ ವ್ಯಕ್ತಿ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ದಾನಪತ್ರ ಮಾಡಿ ಬೇರೆಯವರ ಹೆಸರಿಗೆ ಜಮೀನು ನೊಂದಣಿ ಮಾಡಿಸಿದ ವಿಚಾರವಾಗಿ ಕೋಲಾರ ಸಬ್ ರಿಜಿಸ್ಟರ್ ಸೇರಿದಂತೆ 12 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ತಾಲೂಕಿನ ಹುತ್ತೂರು ಹೋಬಳಿಯ ತಿಪ್ಪಸಂದ್ರ ಗ್ರಾಮದ ಸುಮಾರು 3 ಕೋಟಿ ಬೆಲೆಬಾಳುವ 11 ಎಕರೆ ಜಾಗಕ್ಕೆ ಸತ್ತವರ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ದಾನಪತ್ರ ಮೂಲಕ ಅಲಿವೇಲಿ ಎಂಬುವರ ಹೆಸರಿಗೆ ನೊಂದಣಿ ಮಾಡಿಸಿಕೊಂಡಿರುವ ಆರೋಪ ಹಿನ್ನೆಲೆ ನವೀನ್ ಎಂಬುವರು ದೂರು ನೀಡಿದ್ದಾರೆ.
undefined
ಸಂಸದ ಮುನಿಸ್ವಾಮಿ ಒಬ್ಬ ಸೈಕೋ: ಶಾಸಕ ನಾರಾಯಣಸ್ವಾಮಿ
ಮೃತಪಟ್ಟಿರುವ ದೊಡ್ಡ ಬಂಡೆಪ್ಪ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ದೊಡ್ಡ ಬಂಡೆಪ್ಪ ಬಿನ್ ಲೇಟ್ ಸುಬ್ಬಣ್ಣ ಎಂಬ ಅಪರಿಚಿತ ವ್ಯಕ್ತಿ ಅಲಿವೇಲಿ ಕೋಂ ದೊಡ್ಡ ಬಂಡೆಪ್ಪವರಿಗೆ ದಾನಪತ್ರ ಮೂಲಕ ದಾಖಲೆಗಳನ್ನು ಸೃಷ್ಟಿಸಿ 9-03-23 ರಂದು ನೊಂದಣಿ ಮಾಡಿಸಿದ್ದಾರೆ.
ನಕಲಿ ದಾಖಲೆ ಸೃಷ್ಟಿಸಿ ಜಮೀನನ್ನು ಕಬಳಿಸಲು ಯತ್ನಿಸಿದ ದೊಡ್ಡ ಬಂಡೆಪ್ಪ, ಅಲಿವೇಲಿ, ದೊಡ್ಡಮುನಿಗ, ಪುಷ್ಪ, ಪತ್ರ ಬರಹಗಾರ ಅಶ್ವಥಪ್ಪ, ದಾನಪತ್ರದ ಸಾಕ್ಷಿಗಳಾದ ನಾಗರಾಜ್ ಬಿನ್ ಕೊಂಡಯ್ಯ ಬಂಗಾರಪೇಟೆ, ಮೋಹನ್ ಕೋಲಾರ, ನಾಗರಾಜ್ ಬಿನ್ ಕೊಂಡಯ್ಯ ನೇರಳೆಕೆರೆ, ವೆಂಕಟೇಶಪ್ಪ ಬಿನ್ ರಾಮಪ್ಪ ಬಂಗಾರಪೇಟೆ ಹಾಗೂ ಕೋಲಾರ ಉಪನೊಂದಣಾಧಿಕಾರಿ ಪ್ರಸಾದ್ ಕುಮಾರ್, ಗ್ರಾಮ ಲೆಕ್ಕಾಧಿಕಾರಿ ಹಾಗೂ ರಾಜಸ್ವ ನಿರೀಕ್ಷಕರ ವಿರುದ್ಧ ಕೋಲಾರ ನಗರ ಠಾಣೆಯಲ್ಲಿ ಸೆ.14 ರಂದು ಪ್ರಕರಣ ದಾಖಲಾಗಿದ್ದು ಕೆಲವು ಆರೋಪಿಗಳು ಊರು ತೊರೆದಿದ್ದಾರೆ. ಪ್ರಕರಣ ದಾಖಲಾಗಿ 13 ದಿನ ಕಳೆದರು ವಂಚನೆ ಮಾಡಿದ ಯಾರೊಬ್ಬರನ್ನು ಇಂದಿಗೂ ಪೊಲೀಸರು ಬಂಧಿಸಿಲ್ಲ ಎಂದು ದೂರು ನೀಡಿದ ನವೀನ್ ಎಂಬುವರು ಆರೋಪ ಮಾಡಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಹಿರಿಯ ಉಪ ನೋಂದಣಾಧಿಕಾರಿ ಪ್ರಸಾದ್ ಕುಮಾರ್ ನನ್ನ ವಿರುದ್ಧ ಕೇಸ್ ಆಗಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದರು.