ಚಿತ್ರದುರ್ಗದಲ್ಲಿ ಅಮಾನವೀಯ ಘಟನೆ: ಅಂತರ್ ಜಾತಿ ವಿವಾಹವಾಗಿದ್ದಕ್ಕೆ ವಾಕ್-ಶ್ರವಣ ದೋಷದ ದಂಪತಿಗೆ ಬಹಿಷ್ಕಾರ

By Girish Goudar  |  First Published Sep 28, 2023, 9:32 AM IST

ದಂಪತಿಗೆ ಗ್ರಾಮದಿಂದ ಬಹಿಷ್ಕಾರ ಹಾಕಿದ್ರು ಯಾವುದೇ ಪೊಲೀಸ್ ಠಾಣೆ ಮೆಟ್ಟಿಲೇರದೇ ಮತ್ತೆ ಬೆಂಗಳೂರಿಗೆ ತೆರಳಿದ್ದರು. ಬಳಿಕ ಚಳ್ಳಕೆರೆ ತಾಲ್ಲೂಕಿನಲ್ಲಿ ನಡೆದ ಪ್ರಸಿದ್ದ ಗೌರಸಂದ್ರ ಮಾರಮ್ಮ ಜಾತ್ರೆಗೆಂದು ಆಗಮಿಸಿದ್ದಾಗಲೂ ಗ್ರಾಮದ ಅನೇಕ ಮುಖಂಡರು ಅವರಿಗೆ ಕಿರುಕುಳ ಕೊಡುತ್ತಿದ್ದರು ಎಂಬ ಆರೋಪ‌ ಕೇಳಿ ಬಂದಿದೆ. 


ಕಿರಣ್.ಎಲ್.ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ 

ಚಿತ್ರದುರ್ಗ(ಸೆ.28):  ದೇಶದಲ್ಲಿ ಅಂತರ್ ಜಾತಿಯ ವಿವಾಹಗಳು ಹೆಚ್ಚಾಗಿ ಆಗುವುದರಿಂದ ಜಾತೀಯತೆ ವ್ಯವಸ್ಥೆ ತೊಲಗಿಸಬಹುದು ಎಂದು ಹಿರಿಯರು ಮಾತನಾಡ್ತಾರೆ. ಆದ್ರೆ ಇಂತಹ ಆಧುನಿಕ ಯುಗದಲ್ಲಿಯೂ ಈ ಒಂದು ಗ್ರಾಮದಲ್ಲಿ ಅಂತರ್ ಜಾತಿ ವಿವಾಹ ಆಗಿದ್ದಕ್ಕೆ ಬಹಿಷ್ಕಾರ ಹಾಕಿರುವ ಅಮಾನವೀಯ ಘಟನೆಯೊಂದು ನಡೆದಿದೆ. ಈ ಕುರಿತು ಒಂದು ಸ್ಷೆಪಲ್ ರಿಪೋರ್ಟ್ ಇಲ್ಲಿದೆ ನೋಡಿ......,

Tap to resize

Latest Videos

undefined

ಅನಾದಿ ಕಾಲದಿಂದಲೂ ನಮ್ಮ ದೇಶದಲ್ಲಿ ಜಾತಿ ವ್ಯವಸ್ಥೆ ತಾಂಡವಾಡ್ತಿದೆ. ಒಂದು ಜಾತಿ ಕಂಡ್ರೆ ಮತ್ತೊಂದು ಜಾತಿಗೆ ಆಗುವುದಿಲ್ಲ. ಆದ್ರೆ ಇತ್ತೀಚಿನ ದಿನಗಳಲ್ಲಿ ಅಂತರ್ ಜಾತಿಯ ವಿವಾಹಗಳು ಆಗುವುದರಿಂದ ಸ್ವಲ್ಪ ಮಟ್ಟಿಗೆ ಜಾತೀಯತೆ ಕಡಿಮೆ ಆಗ್ತಿದೆ ಎಂದು ಜನ ಭಾವಿಸ್ತಿದ್ದಾರೆ. ಆದ್ರೆ ನಿಜಕ್ಕೂ ಇದೆಲ್ಲಾ ಸತ್ಯಕ್ಕೆ ದೂರವಾದ ಮಾತು ಅಂತ ಹೇಳೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಯಾಕಪ್ಪ ಅಂದ್ರೆ ಅದಕ್ಕೊಂದು ಸೂಕ್ತ ನಿದರ್ಶನ ಇಲ್ಲಿದೆ ನೋಡಿ, ಹೀಗೆ ವಾಕ್ ಶ್ರವಣ ಇಲ್ಲದ ಮುದ್ದಾದ ಜೋಡಿಯೊಂದು ತನ್ನ ಕೈಯಲ್ಲಿ ಪುಟಾಣಿ ಮಗು ಹಿಡ್ಕೊಂಡು ಒಬ್ಬರಿಗೊಬ್ಬರು ಸನ್ನೆ ಮಾಡುತ್ತಾ ತಮ್ಮ ಕಷ್ಟಗಳನ್ನು ಹೇಳಿ‌ಕೊಳ್ತಿರೋ ಪರಿ ನೋಡಿದ್ರೆ ನಿಜಕ್ಕೂ ಎಂಥವರಿಗೂ ಕರಳು ಕಿತ್ತು ಬರುತ್ತೆ ಕಣ್ರಿ. 

ಸನಾತನ ಧರ್ಮ ನಾಶ ಮಾಡ್ತೇವೆ ಎನ್ನುವವರಿಗೆ ಪಾಠ ಕಲಿಸಬೇಕು: ಆರೆಸ್ಸೆಸ್ ಮುಖಂಡ ಪಟ್ಟಾಭಿರಾಮ

ಚಳ್ಳಕೆರೆ ತಾಲ್ಲೂಕಿನ ಎನ್.ದೇವರಹಳ್ಳಿ ಗ್ರಾಮದ ಸಾವಿತ್ರಮ್ಮ ಹಾಗೂ ಆಂಧ್ರ ಮೂಲದ ಮಣಿಕಂಠ ಎಂಬಾತ ಕಳೆದ ಮೂರು ವರ್ಷದ ಹಿಂದೆ ಬೆಂಗಳೂರಿನಲ್ಲಿ ಪ್ರೀತಿಸಿ ಮದುವೆ ಆಗಿದ್ದರು. ಮೂರು ವರ್ಷದ ಬಳಿಕ ಸಾವಿತ್ರಮ್ಮ ತವರು ಮನೆ ಎನ್. ದೇವರಹಳ್ಳಿಗೆ ಬಂದಿದ್ದ ಜೋಡಿಗೆ ಆ ಗ್ರಾಮದ ಜೋಗಿ ಜನಾಂಗದ ಮಹಾನ್ ಪುರುಷರು ಅಂತರ್ ಜಾತಿ ವಿವಾಹ ಆಗಿದ್ದೀರಿ ಎಂದು, ಮೂವತ್ತು ಸಾವಿರ ದಂಡ ವಿಧಿಸಿದ್ದಲ್ಲದೇ ಗ್ರಾಮದಿಂದ ಬಹಿಷ್ಕಾರ ಹಾಕಿರುವ ಅಮಾನವೀಯ ಘಟನೆ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಆಕೆ ಬಾಣಂತಿ ಎಂಬುದನ್ನು ಲೆಕ್ಕಸಿದೇ ಗ್ರಾಮದಲ್ಲಿ ಜನರು ಈ ರೀತಿ ಮಾನವೀಯತೆ ಬಿಟ್ಟು ನಡೆದುಕೊಂಡಿರೋದು ನಿಜಕ್ಕೂ ತುಂಬಾ ನೋವಿನ ಸಂಗತಿ. 

ಮುದ್ದಾದ ಈ‌ ಜೋಡಿಗೆ ಗ್ರಾಮದಿಂದ ಬಹಿಷ್ಕಾರ ಹಾಕಿದ್ರು ಯಾವುದೇ ಪೊಲೀಸ್ ಠಾಣೆ ಮೆಟ್ಟಿಲೇರದೇ ಮತ್ತೆ ಬೆಂಗಳೂರಿಗೆ ತೆರಳಿದ್ದರು. ಬಳಿಕ ಚಳ್ಳಕೆರೆ ತಾಲ್ಲೂಕಿನಲ್ಲಿ ನಡೆದ ಪ್ರಸಿದ್ದ ಗೌರಸಂದ್ರ ಮಾರಮ್ಮ ಜಾತ್ರೆಗೆಂದು ಆಗಮಿಸಿದ್ದಾಗಲೂ ಗ್ರಾಮದ ಅನೇಕ ಮುಖಂಡರು ಅವರಿಗೆ ಕಿರುಕುಳ ಕೊಡುತ್ತಿದ್ದರು ಎಂಬ ಆರೋಪ‌ ಕೇಳಿ ಬಂದಿದೆ. ‌ಪುಟ್ಟ ಮಗುವಿನೊಂದಿಗೆ ದಂಪತಿ ಆಗಮಿಸಿದ್ದನ್ನೂ ಲೆಕ್ಕಿಸದ ಗ್ರಾಮಸ್ಥರು ಮನೆ ಬಿಟ್ಟು ಹೋಗುವಂತೆ ಒತ್ತಡ ಹಾಕಿದ್ದಲ್ಲದೇ ಮತ್ತೆಯೂ ದಂಡ ವಿಧಿಸಲು, ಬಹಿಷ್ಕಾರ ಹಾಕಲು ಮುಂದಾಗಿದ್ದಾರೆ. ಇದ್ರಿಂದ ಬೇಸರಗೊಂಡ ಮುದ್ದಾದ ವಾಕ್ ಶ್ರವಣ ದೋಷವಿರುವ ಜೋಡಿ ತಮ್ಮ ಪುಟ್ಟ ಮಗುವಿನೊಂದಿಗೆ ಚಳ್ಳಕೆರೆ ಸಂತ್ವಾನ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಸದ್ಯ ಸಂತ್ರಸ್ತ ಜೋಡಿಯ ಪರ ನಿಂತಿರುವ ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಅವರು ಬಹಿಷ್ಕಾರ ಹಾಕಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಒಟ್ಟಾರೆಯಾಗಿ ಬುದ್ದಿ ಬಂದತ್ತೆಲ್ಲಾ ಜನರು ಬದಲಾಗ್ತಾರೆ ಜಾತಿ ವ್ಯವಸ್ಥೆ ಕಡಿಮೆ ಆಗಬಹುದು ಎಂದು ಹಿರಿಯರು ಹೇಳ್ತಿದ್ದರು. ಆದ್ರೆ ಇತ್ತೀಚೆಗೆ ಬುದ್ದಿ ಬಂದತ್ತೆಲ್ಲಾ ಜಾತಿ ವ್ಯವಸ್ಥೆ ಇನ್ನೂ ಹೆಚ್ಚಾಗ್ತಿದೆ ಎಂಬುದಕ್ಕೆ ಇದೊಂದು ಸೂಕ್ತ ನಿದರ್ಶನ. ಈ ಘಟನೆಗೆ ಕಾರಣವಾದ ಇಡೀ ಊರಿನ ಗ್ರಾಮಸ್ಥರಿಗೆ ಕಠಿಣ ಶಿಕ್ಷೆಯಾಗಲಿ ಎಂಬುದು ಸಾರ್ವಜನಿಕ ಅಭಿಪ್ರಾಯ..

click me!