ಲ್ಯಾಂಡ್ ಡೆವಲಪರ್ಸ್ ಸಮಸ್ಯೆ: ಸರ್ಕಾರದ ಗಮನಕ್ಕೆ ತರಲು ನಿರ್ಣಯ

By Kannadaprabha News  |  First Published Oct 8, 2023, 7:20 AM IST

ಬಡಾವಣೆ ರಚಿಸುತ್ತಿರುವ ವೃತ್ತಿ ನಿರತ ಜಿಲ್ಲಾ ಲ್ಯಾಂಡ್ ಡೆವಲಪರ್ಸ್ ಗಳ ಸಭೆ ನಡೆಯಿತು. ಸಭೆಯಲ್ಲಿ ಲ್ಯಾಂಡ್ ಡೆವಲಪರ್ಸ್ ಗಳಿಗೆ ಆಗುತ್ತಿರುವ ತೊಂದರೆಗಳು ಹಾಗೂ ಕುಂದುಕೊರತೆಗಳ ಬಗ್ಗೆ ಚರ್ಚಿಸಲಾಯಿತು.


 ತುಮಕೂರು :  ಬಡಾವಣೆ ರಚಿಸುತ್ತಿರುವ ವೃತ್ತಿ ನಿರತ ಜಿಲ್ಲಾ ಲ್ಯಾಂಡ್ ಡೆವಲಪರ್ಸ್ ಗಳ ಸಭೆ ನಡೆಯಿತು. ಸಭೆಯಲ್ಲಿ ಲ್ಯಾಂಡ್ ಡೆವಲಪರ್ಸ್ ಗಳಿಗೆ ಆಗುತ್ತಿರುವ ತೊಂದರೆಗಳು ಹಾಗೂ ಕುಂದುಕೊರತೆಗಳ ಬಗ್ಗೆ ಚರ್ಚಿಸಲಾಯಿತು.

ಸಂಬಂಧಪಟ್ಟ ಇಲಾಖೆಗಳಿಂದ ಬರುವಂತಹ ತೊಂದರೆಗಳ ಬಗ್ಗೆ, ಅಸೋಸೊಯೇಷನ್‌ನಲ್ಲಿ ಲೀಗಲ್ ಸೆಲ್ ತೆಗೆಯುವ ಬಗ್ಗೆ, ಖರೀದಿದಾರರು, ಮಾರಾಟಗಾರರಿಗೆ ಮಾಹಿತಿ ಕೊಡುವ ಕಾರ್ಯಗಾರ, ಹೊಸ ಚಿಂತನ ಮಂಥನ, ಮಾರ್ಗದರ್ಶನದ ಮಾಹಿತಿ ತಿಳಿಸುವುದು, ಕೆಲವು ಇಲಾಖೆಗಳಿಂದ ಆಗುವ ವಿಳಂಬ ನೀತಿಯ ವಿಷಯಗಳನ್ನು ಸದಸ್ಯರು ಚರ್ಚಿಸಿ ಸರ್ಕಾರದ ಗಮನಕ್ಕೆ ತರುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಅವಿರೋಧವಾಗಿ ಕಾರ್ಯಕಾರಣಿ ಮಂಡಳಿ ರಚಿಸಲಾಯಿತು.

Tap to resize

Latest Videos

ಮಂಡಳಿ ಗೌರವಾಧ್ಯಕ್ಷರಾಗಿ, ಬಿ.ಎಸ್.ನಾಗೇಶ್ (ಬಾವಿಕಟ್ಟೆ ನಾಗಣ್ಣ), ಅಧ್ಯಕ್ಷರಾಗಿ.ಎಸ್.ಪಿ.ಚಿದಾನಂದ್, ಉಪಾಧ್ಯಕ್ಷರಾಗಿ ವಾಲೆಚಂದ್ರಯ್ಯ, ಪ್ರಧಾನ ಕಾರ್ಯದರ್ಶಿಯಾಗಿ ರವೀಶ್ ಅರಕೆರೆ, ಖಜಾಂಚಿಯಾಗಿ ಸನತ್‌ಕುಮಾರ್ ಟಿ.ಜೆ. ಅವರನ್ನು ಆಯ್ಕೆ ಮಾಡಲಾಗಿದೆ.

ಇದು ಅತಿ ದೊಡ್ಡ ಭೂ ಹಗರಣ

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು (ಸೆ.26) : ರಾಜ್ಯದಲ್ಲೇ ಅತೀ ದೊಡ್ಡ ಲ್ಯಾಂಡ್ ಸ್ಕ್ಯಾಂಗೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಸಾಕ್ಷಿಯಾಗಿದೆ. ಕಡೂರು ಹಾಗೂ ಮೂಡಿಗೆರೆ ತಾಲೂಕಿನ ಈ ಲ್ಯಾಂಡ್ ಸ್ಕ್ಯಾಂ ರಾಜ್ಯದಲ್ಲೇ ದೊಡ್ಡದ್ದು. ಕಡೂರು ತಹಶೀಲ್ದಾರ್  ಆಗಿದ್ದ ಉಮೇಶ್ 3500 ಎಕರೆ ಅಕ್ರಮ ಮಾಡಿದ್ರೆ ಮೂಡಿಗೆರೆ ತಹಶೀಲ್ದಾರ್ ಆಗಿದ್ದ ರಮೇಶ್ 2200 ಎಕರೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆ

ತನಿಖೆಯಿಂದ ಅಕ್ರಮ ಭೂಮಿ ಮಂಜೂರು ಪತ್ತೆ

ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಿಕೊಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡಿಗೆರೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಇನ್ನಿಬ್ಬರ ಬಂಧನಕ್ಕೆ ಬಲೆ ಬೀಸಿದ್ದಾರೆ. ಮೂಡಿಗೆರೆ ತಹಸೀಲ್ದಾರ್ ವೈ.ತಿಪ್ಪೇಸ್ವಾಮಿಯವರು ಮೂಡಿಗೆರೆ ಠಾಣೆಗೆ ನೀಡಿದ ದೂರಿನನ್ವಯ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಈ ಹಿಂದೆ ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿ ಪ್ರಭಾರ ರೆವೆನ್ಯೂ ಇನ್ಸ್ ಪೆಕ್ಟರ್ ಮತ್ತು ಗ್ರಾಮ ಲೆಕ್ಕಾಧಿಕಾರಿಯಾಗಿದ್ದ ಗಿರೀಶ್ ಮತ್ತು ಭೂಮಿ ಆಪರೇಟರ್ ನೇತ್ರಾ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.ಪ್ರಕರಣದ ಪ್ರಮುಖ ಆರೋಪಿ ಮೂಡಿಗೆರೆ ಈ ಹಿಂದಿನ ತಹಸೀಲ್ದಾರ್ ಆಗಿದ್ದ ರಮೇಶ್ ಮತ್ತು ಆರ್.ಆರ್.ಟಿ. ಶಿರಸ್ತೇದಾರ್ ಪಾಲಯ್ಯ ಎಂಬುವವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಸರ್ಕಾರಿ ಜಾಗ ಒತ್ತುವರಿ ಪತ್ತೆಗೆ 'ಲ್ಯಾಂಡ್‌ ಆಡಿಟ್‌' ನಡೆಸಿ: ಸಿಎಂ ಸಿದ್ದರಾಮಯ್ಯ

ನಿರ್ದೇಶಕರುಗಳಾಗಿ ಸೈಯದ್ ರಿಜ್ವಾನ್ ಉಲ್ಲಾ, ಕೆ.ಜಿ. ಹನುಮಂತರಾಜು (ಬಾಬು), ಜೆ.ಎಸ್.ಅನಿಲ್ ಕುಮಾರ್, ಶಶಿಕುಮಾರ್, ಅನ್ವರ್ ಅಹಮ್ಮದ್, ಪಂಚಾಕ್ಷರಯ್ಯ, ಉತ್ತಮ್ ಕುಮಾರ್, ಪೃಥ್ವಿ ಪ್ರಸಾದ್, ಧರ್ಮರಾಜು, ಟಿ.ಆರ್.ಮಹೇಶ್, ಶೇಷಾಚಲಂ ಆಯ್ಕೆಯಾಗಿದ್ದಾರೆ.

click me!