ಮಲೆನಾಡಿನ ನಕ್ಸಲ್ ನೆಲೆ ಬೆಳಕಿಗೆ ತಂದ ಚೀರಮ್ಮ ನಿಧನ

By Web Desk  |  First Published Jun 19, 2019, 10:35 AM IST

ಮಲೆನಾಡಿನಲ್ಲಿ ನಕ್ಸಲ್ ನೆಲೆಯನ್ನು ಬೆಳಕಿಗೆ ತಂದಿದ್ದ ಚೀರಮ್ಮ ನಿಧನ ಹೊಂದಿದ್ದಾರೆ. ವಯೋಸಹಜ ಅನಾರೋಗ್ಯದಿಂದ 100 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.


ಚಿಕ್ಕಮಗಳೂರು [ಜೂ.19] : ಮಲೆನಾಡು ಪ್ರದೇಶದಲ್ಲಿ ನಕ್ಸಲ್ ನೆಲೆಯನ್ನ ಬೆಳಕಿಗೆ ತಂದ ಮಹಿಳೆ ಚೀರಮ್ಮ ನಿಧನ ಹೊಂದಿದ್ದಾರೆ.

2002 ರಲ್ಲಿ ಮಲೆನಾಡಲ್ಲಿ ಕೆಂಪು ಉಗ್ರರು ನೆಲೆ ಕಾಣುತ್ತಿದ್ದ ವೇಳೆ  ಮತ್ತಷ್ಟು ಚಿಗುರುವಂತೆ ಮಾಡಿದ್ದಳು. ಎಕೆ 47ನಿಂದ ಗುಂಡೇಟು ತಿಂದು ಮತ್ತಷ್ಟು ನಕ್ಸಲ್ ಸಾಮ್ರಾಜ್ಯ ವಿಸ್ತರಣೆಗೆ ಕಾರಣವಾದ ಈಕೆ ಕೊಪ್ಪ ತಾಲೂಕಿನ ಮೆಣಸಿನಹಾಡ್ಯದಲ್ಲಿ ನಿಧನ ಹೊಂದಿದ್ದಾರೆ.

Tap to resize

Latest Videos

ಈಕೆ ಗುಂಡೇಟು ತಿಂದು ಆಸ್ಪತ್ರೆಗೆ ಬಂದಿದ್ದ ವೇಳೆಯೇ ಮಲೆನಾಡಲ್ಲಿ ನಕ್ಸಲ್ ಬೇರು ಚಿಗುರುತ್ತಿದೆ ಎನ್ನುವ ಸುಳಿವೊಂದು ಲಭ್ಯವಾಗಿತ್ತು. ಇದೇ ವೇಳೆ ಪೊಲೀಸರು ನಕ್ಸಲ್ ಇರುವಿಕೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು.

ಇದೀಗ 100 ವರ್ಷ ವಯಸ್ಸಿನ ಚೀರಮ್ಮ ವಯೋಸಹಜ ಅನಾರೋಗ್ಯದಿಂದ ಚಿಕ್ಕಮಗಳೂರು ಜಿಲ್ಲೆ ಮೆಣಸಿನ ಹಾಡ್ಯದಲ್ಲಿ ನಿಧನರಾಗಿದ್ದಾರೆ.

click me!