ಕೊಳ್ಳೇಗಾಲ (ನ.25): ಕಳೆದ 36 ವರ್ಷಗಳಿಂದಲೂ ಭೂಸ್ವಾಧೀನ ಪ್ರಕರಣದಲ್ಲಿ ರೈತರಿಗೆ ಪರಿಹಾರ ನೀಡದೆ ರೈತರಿಗೆ (farmers) ನೀಡದೆ ಸತಾಯಿಸುತ್ತಿದ್ದ ಉಪ ವಿಭಾಗಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಕೊಳ್ಳೇಗಾಲ ಸಿವಿಲ್ ಕೋರ್ಟ್ (Civil Court) ಗರಂ ಆಗಿದ್ದು ಪರಿಹಾರ ನೀಡದೆ ಸತಾಯಿಸಿದ ಹಿನ್ನೆಲೆ ಕೊಳ್ಳೇಗಾಲದ ಉಪ ವಿಭಾಗಧಿಕಾರಿಗಳ ಚರಾಸ್ಥಿ ಮತ್ತು ಸ್ಧಿರಾಸ್ತಿಗಳನ್ನು ಜಪ್ತಿ ಮಾಡುವಂತೆ ಸಿವಿಲ್ ನ್ಯಾಯಾಧೀಶ ಆನಂದ್ ಅವರು ನೋಟಿಸ್ (Notice) ಜಾರಿಗೊಳಿಸಿದ್ದಾರೆ. ಕುಂತೂರು ಗ್ರಾಮ ಸಮೀಪದ ಮೋಳೆಯ ಸುಬ್ಬ ಲಕ್ಷ್ಮಮ್ಮ ಎಂಬುವರ 1985ರಲ್ಲಿ ಸರ್ಕಾರ ಇವರ ಜಮೀನನ್ನು (Farm Land) ನಿವೇಶನ ಹಂಚಿಕೆಗಾಗಿ ಭೂ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು, 2004ರಲ್ಲಿ ನಿವೇಶನ ಹಂಚಿಕೆ ಪ್ರಕ್ರಿಯೆಯೂ ಪೂರ್ಣಗೊಂಡಿತ್ತು, ಹಾಗಿದ್ದರು ಸಹ ಅವರಿಗೆ ಉಪ ವಿಭಾಗಾಧಿಕಾರಿಗಳು ಪರಿಹಾರ (Compensation) ನೀಡಿರಲಿಲ್ಲ.
ಸರ್ಕಾರಕ್ಕೂ (Karnataka govt) ಪತ್ರ (Letter) ಬರೆದು, ಮನವಿ ಸಲ್ಲಿಸಿ ಬೇಸತ್ತಿದ್ದ ಸುಬ್ಬಮ್ಮ ಅವರು 2018ರಲ್ಲಿ ಸಿವಿಲ್ ನ್ಯಾಯಾಲಯದಲ್ಲಿ ವಕೀಲ ಕೆಂಪರಾಜು ಅವರ ಮಾರ್ಗದರ್ಶನದಲ್ಲಿ ದಾವೆ ಹೂಡಿದ್ದರು, ಬುಧವಾರ ವಾದ, ವಿವಾದ ಆಲಿಸಿದ ನ್ಯಾಯಾಧೀಶ ಆನಂದ್, ಉಪ ವಿಭಾಗಾಧಿಕಾರಿಗಳು ಮತ್ತು ಸರ್ಕಾರದ ನಡೆ ವಿರುದ್ಧ ಕಲಾಪದ ವೇಳೆ ಗರಂಮ್ಮಾದರಲ್ಲದೆ ರೈತರನ್ನು ಪರಿಹಾರಕ್ಕೆ ಸತಾಯಿಸಿದ ಹಿನ್ನೆಲೆ ಕೂಡಲೇ ಚರಾಸ್ತಿ ಮತ್ತು ಸ್ಥಿರಾಸ್ತಿಯನ್ನು ವಶಕ್ಕೆ ಪಡೆಯುವಂತೆ ನೋಟೀಸ್ ಜಾರಿಗೊಳಿಸಿ ತೀರ್ಪಿತ್ತಿದೆ.
undefined
ನ್ಯಾಯಾಲಯ (Court) ಆದೇಶದ ಹಿನ್ನೆಲೆ ವಕೀಲ ಕೆಂಪರಾಜು ಅವರು ದೂರುದಾರರು ಹಾಗೂ ಗಣ್ಯರ ಸಮ್ಮುಖದಲ್ಲಿ ಉಪ ವಿಭಾಗಾಧಿಕಾರಿಗಳ ಕಚೇರಿಗೆ ನೋಟೀಸ್ ತಲುಪಿಸಲಾಗಿದೆ. ಈ ವೇಳೆ ಸರ್ಕಾರಿ ಅಭಿಯೋಜಕರು ಡಿ.6ರ ತನಕ ಕಾಲಾವಕಾಶ ಕೋರಿದ್ದಾರೆ ಎನ್ನಲಾಗಿದೆ.
ಬುಧವಾರ ಕೋರ್ಟ್ ನೋಟಿಸ್‌ನ್ನು ದೂರುದಾರರ ಸಮ್ಮುಖದಲ್ಲಿ ಪ್ರತಿಯನ್ನು ತಲುಪಿಸಲಾಗಿದೆ. ನ್ಯಾಯಾಲಯ ಉಪವಿಭಾಗಾಧಿಕಾರಿಗಳ ಕಾರು ಮತ್ತು ಕಚೇರಿಯ ಕುರ್ಚಿ, ಬೆಂಚು, ಚರಾಸ್ಥಿ ಮತ್ತು ಸ್ಥಿರಾಸ್ತಿ ಜಪ್ತಿಗೆ ನೋಟೀಸ್ ಜಾರಿಗೊಳಿಸಿದ್ದು, ಮುಂದಿನ ಕ್ರಮಕ್ಕೆ ಕಾನೂನು ಚೌಕಟ್ಟಿನಲ್ಲಿ ಮನವಿ ಸಲ್ಲಿಸಲಾಗಿದೆ ಎಂದು ವಕೀಲ ಕೆಂಪಯ್ಯ ಸುದ್ದಿಗಾರರಿಗೆ ತಿಳಿಸಿದರು.
30ವರ್ಷದ ಹಿಂದೆ ನಮ್ಮ ಜಮೀನನ್ನು ನಿವೇಶನ ಹಂಚಿಕೆಗಾಗಿ ಸರ್ಕಾರ ವಶಕ್ಕೆ ಪಡೆದಿದ್ದು, ಪರಿಹಾರಕ್ಕಾಗಿ ಉಪವಿಭಾಗಾಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದೆ. ಅಲೆದು-ಅಲೆದು ಸಾಕಾಗಿ ನ್ಯಾಯಾಲಯದ ಮೊರೆ ಹೋಗಿದ್ದೆ, ನ್ಯಾಯಾಧೀಶರು ಉಪವಿಭಾಗಾಧಿಕಾರಿಗಳ ಚರಾಸ್ಥಿ, ಸ್ಧಿರಾಸ್ತಿ ಜಪ್ತಿಗೆ ನೋಟಿಸ್ ಜಾರಿಗೊಳಿಸಿದ್ದಾರೆ. ನನಗೆ ನ್ಯಾಯಾಧೀಶರ ಸಹಕಾರದೊಂದಿಗೆ ನ್ಯಾಯ ಸಿಗುವ ವಿಶ್ವಾಸವಿದೆ.
- ಸುಬ್ಬು ಲಕ್ಷ್ಮಮ್ಮ, ದೂರುದಾರ ರೈತ ಮಹಿಳೆ
ಭೂ ಸ್ವಾಧೀನಕ್ಕೆ ರೈತರ ವಿರೋಧ : ಚಿಕ್ಕಮಗಳೂರು (Chikkamagaluru) ನಗರಾಭಿವೃದ್ಧಿ ಪ್ರಾಧಿಕಾರ ಹೊಸದಾಗಿ ಬಡಾವಣೆ ನಿರ್ಮಿಸಲು ಉದ್ದೇಶಿಸಿ ಇದಕ್ಕಾಗಿ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಗೆ ಇದೀಗ ವಿರೋಧ ವ್ಯಕ್ತವಾಗಿದೆ. ಸುಮಾರು ಮೂರು ಕಿಲೋಮೀಟರ್ ದೂರದಲ್ಲಿರುವ ಚಿಕ್ಕಕುರುಬರಹಳ್ಳಿ, ಬಿಳಿಕಲ್ಲು ಸೇರಿದಂತೆ ಕುರುವಂಗಿಯಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ನಗರಾಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ನೀಲನಕ್ಷೆಯನ್ನು ತಯಾರಿಸಿ ರೈತರೊಂದಿಗೆ ಮಾತುಕತೆ ನಡೆಸಿದೆ.
ಇದರ ಬೆನ್ನಲ್ಲೇ ಭೂಸ್ವಾಧೀನಕ್ಕೆ ಆಕ್ಷೇಪಗಳು ವ್ಯಕ್ತವಾಗಿದೆ. ಈ ಭೂಮಿಯಲ್ಲಿ (Land) ಅಡಿಕೆ ಸೇರಿದಂತೆ ಅನೇಕ ಬೆಳೆಗಳನ್ನು ವರ್ಷಕ್ಕೆ ಎರಡು ಬಾರಿ ತೆಗೆಯುತ್ತಿದ್ದು ರೈತರು ನೆಮ್ಮದಿಯಿಂದ ಇದ್ದಾರೆ ಎಂದು ಪ್ರತಿಭಟನಾನಿರತರು ಪ್ರತಿಪಾದಿಸಿದ್ದಾರೆ. ನಗರದ ಅಜಾದ್ ಪಾರ್ಕ್ ನಲ್ಲಿ ಸರ್ವಪಕ್ಷಗಳ ನೇತೃತ್ವದಲ್ಲಿ ರೈತರು ಅಡಿಕೆ ಸಸಿಗಳನ್ನು ಪ್ರದರ್ಶನ ಮಾಡಿ ಆಕ್ರೋಶವನ್ನು ಹೊರಹಾಕಿದರು. ಪ್ರಾಧಿಕಾರದಿಂದ ಬಡಾವಣೆ ನಿರ್ಮಿಸುವ ಉದ್ದೇಶದ ಹಿಂದೆ ಭೂಮಾಫಿಯಾದ ಕೈವಾಡವಿದ್ದು ಕೃಷಿ ವಿಸ್ತರಣೆ ಬಗ್ಗೆ ಮಾತನಾಡುತ್ತಲೇ ಇನ್ನೊಂದೆಡೆ ರೈತರ ಭೂಮಿಯನ್ನು ಕಸಿದುಕೊಳ್ಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.