Council Election : 'ಕಾಂಗ್ರೆಸ್ - ಜೆಡಿಎಸ್‌ನವರಿಂದಲೂ BJPಗೆ ಮತ ಸಿಗಲಿವೆ'

By Kannadaprabha NewsFirst Published Nov 25, 2021, 8:30 AM IST
Highlights
  • ನಾವು ಮಾಡಿರುವ ಕೆಲಸಗಳನ್ನು ಹೇಳಿ, ಮತ ಕೇಳುತ್ತೇವೆ -  ಸಿ ಟಿ ರವಿ
  •  ನಮ್ಮ ಕೆಲಸ ಮಾಡಿರುವ ರಿಪೋರ್ಟ್‌ ಕಾರ್ಡ್‌ ಹಿಡಿದು ಮತ ಕೇಳಲು ಜನರ ಬಳಿ ಹೋಗುತ್ತಿದ್ದೇವೆ

 ಕಡೂರು (ನ.25):  ವಿರೋಧಿಗಳು ಮತ್ತು ವಿಪಕ್ಷಗಳನ್ನು ಟೀಕೆ ಮಾಡಿ, ನಾವು ಮತ ಕೇಳಲು ಹೋಗದೇ ಜಿಲ್ಲೆಯಲ್ಲಿ ನಾವು ಮಾಡಿರುವ ಕೆಲಸಗಳನ್ನು ಹೇಳಿ, ಮತ ಕೇಳುತ್ತೇವೆ ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (CT Ravi) ಹೇಳಿದರು. ಪಟ್ಟಣದ ಸುರುಚಿ ಸಭಾಂಗಣದಲ್ಲಿ ಬಿಜೆಪಿಯಿಂದ (BJP) ಆಯೋಜಿಸಿದ್ದ ವಿಧಾನ ಪರಿಷತ್ತು ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಚಿಕ್ಕಮಗಳೂರು (Chikkamagaluru) ಜಿಲ್ಲೆಗೆ ಭದ್ರಾ ಮೇಲ್ದಂಡೆ ಯೋಜನೆಯಿಂದ ತರೀಕೆರೆ ಕಡೂರು ಮತ್ತು ಚಿಕ್ಕಮಗಳೂರು ಭಾಗಕ್ಕೆ ನೀರುಹರಿಸುವ 1281 ಕೋಟಿ ರು. ಯೋಜನೆಗೆ ಮಂಜೂರು ಮಾಡಿಸಿ, ಟೆಂಡರ್‌ ಕರೆದು ಈಗಾಗಲೇ ಕೆಲಸ ಆರಂಭವಾಗಿದೆ. 1008 ಕೋಟಿ ರು. ವೆಚ್ಚದಲ್ಲಿ ಗ್ರಾಮೀಣ  ಕುಡಿವ ನೀರು ನೀಡುವ ಯೋಜನೆ ಸರ್ಕಾರದ ಮುಂದಿದೆ. ಮೆಡಿಕಲ್‌ ಕಾಲೇಜಿನ (College) ಕಾಮಗಾರಿ ನಡೆಯುತ್ತಿದೆ. ನಮ್ಮ ಕೆಲಸ ಮಾಡಿರುವ ರಿಪೋರ್ಟ್‌ ಕಾರ್ಡ್‌ (Report Card) ಹಿಡಿದು ಮತ ಕೇಳಲು ಜನರ ಬಳಿ ಹೋಗುತ್ತಿದ್ದೇವೆ ಎಂದರು.

ನಮ್ಮ ಪ್ರಾಣೇಶ್‌ (Pranesh) ರೋಲ್‌ ಕಾಲ್‌ ಎಂಎಲ್‌ಸಿ (MLC) ಅಲ್ಲ, ಕಾಲ್‌ ರಿಸೀವ್‌ ಮಾಡುವ ಎಂಎಲ್‌ಎಸಿ. ಯಾರಿಗೂ ಕೆಟ್ಟದ್ದು ಮಾಡಿರುವ ಉದಾಹರಣೆ ಇಲ್ಲ. ಒಳ್ಳೆತನಕ್ಕೆ ಮತ ನೀಡುವಂತೆ ಇನ್ನೊಬ್ಬರನ್ನು ಟೀಕಿಸಿ ತೊಂದರೆ ಮಾಡಿಲ್ಲ. ತಮ್ಮ ನಿಧಿಯಿಂದ ಜಿಲ್ಲೆಯ ಶೇ.90ರಷ್ಟು ಗ್ರಾ.ಪಂ.ಗಳಿಗೆ ಜನರೇಟರ್‌ಗಳನ್ನು ನೀಡಲಾಗಿದೆ ಎಂದರು.

ಹಣಕ್ಕಾಗಿ ಲೆಟರ್‌ ಹೆಡ್‌ ಮಾರಿಕೊಂಡು ರಾಜಕಾರಣ (Politics) ಮಾಡಿದರು ಇದ್ದಾರೆ. ಸಜ್ಜನಿಕೆ ರಾಜಕಾರಣಿ ಪ್ರಾಣೇಶ್‌. ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳು ಬಿಜೆಪಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ರಾಮನ ಸೈನ್ಯದಲ್ಲೂ ಇದ್ದ ವಿಭೂಷಣನಂತಹ ಕಾಂಗ್ರೆಸ್‌ (Congress) ಮತ್ತು ಜೆಡಿಎಸ್‌ನಲ್ಲಿ (JDS) ಅಂತಹ ತ್ಯಾಗಮಯಿ ಸದಸ್ಯರು ಬಿಜೆಪಿ ಅಭ್ಯರ್ಥಿಗೆ ಮತ ನೀಡುವ ಮೂಲಕ ಪ್ರಾಣೇಶ್‌ ಗೆಲುವು ಸಾಧಿಸಲಿದ್ದಾರೆ ಎಂದು ಸಿಟಿ ರವಿ ತಿಳಿಸಿದರು.

ಕೆಲವರು ಒಳ್ಳೇ ಕೆಲಸಕ್ಕೆ ಅಡ್ಡಹಾಕುವುದೇ ರಾಜಕಾರಣ ಎಂದುಕೊಂಡಿದ್ದಾರೆ. ಜನರೇಟರ್‌ ಖರೀದಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. 700 ಮತಗಳ ಅಂತರದಿಂದ ಮಾಲಕ ಗೆಲ್ಲುತ್ತೇವೆ. ಬೀರೂರು ದೇವರಾಜು ಮತ್ತು ವಕೀಲರಾದ ಕೆ.ಎನ್‌.ಬೊಮ್ಮಣ್ಣ ನಮ್ಮವರೇ ಆಗಿದ್ದು, ಮುಂದೆ ಪಕ್ಷ ಅವರನ್ನು ಗುರುತಿಸುವ ಕಾರ್ಯ ಮಾಡಲಿದೆ ಎಂದರು.

ಬೀರೂರು ದೇವರಾಜ್‌ ಮಾತನಾಡಿ, ನಾನು ಸಿ.ಟಿ.ರವಿ ಅವರು ನಮ್ಮ ನಾಯಕರು ಎಂದು ಒಪ್ಪಿಕೊಂಡಿದ್ದೇನೆ. ಇದೇ ಬಯಲು ಪ್ರದೇಶಕ್ಕೆ ಸರ್ಕಾರದಿಂದ (Karnataka Govt) ನಿಗಮ ಮಂಡಳಿಯಲ್ಲಿ ಮತ್ತು ಪಕ್ಷದಲ್ಲಿ ಆದ್ಯತೆ ನೀಡಿ ಎಂದು ಕೇಳಿದ್ದೇವೆ. ನನಗೆ ಬೇಡ, ಪಕ್ಷದಲ್ಲಿರುವವರಿಗೆ ನೀಡಿ ಎಂದು ಕೇಳಲಾಗಿದೆ ಎಂದಾಗ ರವಿ ಅವರು, ಪಕ್ಷದಲ್ಲಿ ಕೆಲಸ ಮಾಡಲು ಜವಾಬ್ದಾರಿ ನೀಡಿ ಎಂದಿದ್ದಾರೆ ಎಂದರು.

ಶಾಸಕ ಬೆಳ್ಳಿ ಪ್ರಕಾಶ್‌, ಎಂಎಲ್‌ಸಿ ಎಂ.ಕೆ.ಪ್ರಾಣೇಶ್‌, ಬಿಜೆಪಿ ಮುಖಂಡರಾದ ಬೀರೂರು ದೇವರಾಜ್‌, ಕಲ್ಮರುಡಪ್ಪ, ಅರೇಕಲ್‌ ಪ್ರಕಾಶ್‌, ಚೌಳಹಿರಿಯೂರು ರವಿ, ಮಹೇಶ್‌ ಒಡೆಯರ್‌, ಜಿಗಣೇಹಳ್ಳಿ ನೀಲಕಂಠಪ್ಪ, ಕಾವೇರಿ ಲಕ್ಕಪ್ಪ, ಶಾಮಿಯಾನ ಚಂದ್ರು ಮತ್ತಿತರರು ಉಪಸ್ಥಿತರಿದ್ದರು.

ಅವಿರೋಧ ಆಯ್ಕೆಗೆ ಕಸರತ್ತು  : ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ (MLC Election) ನಡೆಯುವ ಚುನಾವಣೆ  ಕಾವು ಪಡೆದುಕೊಂಡಿದ್ದು, ಸೋಲು ಗೆಲುವಿನ ಲೆಕ್ಕಾಚಾರ ಆರಂಭಗೊಂಡಿದೆ. ಆದರೆ, ವಿಜಯಪುರ- ಬಾಗಲಕೋಟೆ (Vijayapura - Bagalkote) ದ್ವಿಸದಸ್ಯ ಕ್ಷೇತ್ರದಲ್ಲಿನ ಲೆಕ್ಕಾಚಾರವೇ ಬೇರೆಯಾಗಿದೆ. ಕಾಂಗ್ರೆಸ್‌ (Congress), ಬಿಜೆಪಿ (BJP) ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಲು ತೆರೆಮರೆಯ ಕಸರತ್ತು ಆರಂಭಗೊಂಡಿದೆ. ಡಿ.10ರಂದು ನಡೆಯಲಿರುವ ವಿಧಾನ ಪರಿಷತ್‌ ಚುನಾವಣೆಗೆ ವಿಜಯಪುರ-ಬಾಗಲಕೋಟೆ ದ್ವಿ ಸದಸ್ಯತ್ವ ಕ್ಷೇತ್ರಕ್ಕೆ ಒಟ್ಟು 13 ಜನರು 19 ನಾಮಪತ್ರ ಸಲ್ಲಿಸಿದ್ದರು. ಆದರೆ, ನಾಮಪತ್ರ ಪರಿಶೀಲನೆ ವೇಳೆ ಪಕ್ಷೇತರ ಅಭ್ಯರ್ಥಿ ನಾಮಪತ್ರ (Nomination) ತಿರಸ್ಕೃತಗೊಂಡಿದ್ದು, 12 ಜನರು ಈಗ ಕಣದಲ್ಲಿ ಉಳಿದುಕೊಂಡಿದ್ದಾರೆ. ಈ ಪೈಕಿ ಕಾಂಗ್ರೆಸ್‌, ಬಿಜೆಪಿಯಿಂದ (BJP) ಒಬ್ಬ ಅಭ್ಯರ್ಥಿ ಉಳಿದ 10 ಜನರು ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧೆ ಮಾಡಿದ್ದಾರೆ. ಹೀಗಾಗಿ 10 ಜನ ಪಕ್ಷೇತರರನ್ನು ಕಣದಿಂದ ಹಿಂದಕ್ಕೆ ಸರಿಸಿ, ಕಾಂಗ್ರೆಸ್‌, ಬಿಜೆಪಿ ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡುವ ಕಸರತ್ತು ತೆರೆಮರೆಯಲ್ಲಿ ಗಂಭೀರವಾಗಿ ನಡೆಯುತ್ತಿದೆ.

 

click me!