
ಬೆಂಗಳೂರು(ಜೂ.04): ಕರ್ತವ್ಯ ಲೋಪ ಹಾಗೂ ಭ್ರಷ್ಟಾಚಾರ ಆರೋಪದಡಿ ಮಹಿಳಾ ಇನ್ಸ್‌ಪೆಕ್ಟರ್ ಅಮಾನತ್ತು ಮಾಡಿ ಪೊಲೀಸ್ ಕಮಿಷನರ್ ಆದೇಶ ಹೊರಡಿಸಿದ್ದಾರೆ. ಶಿವಾಜಿನಗರ ಮಹಿಳಾ ಠಾಣೆಯ ಇನ್ಸ್‌ಪೆಕ್ಟರ್ ಸುಮಾ ಅವರು ಸಸ್ಪೆಂಡ್ ಆಗಿದ್ದಾರೆ.
ಕೆಲ ದಿನಗಳ ಹಿಂದೆ ಲೋಕಾಯುಕ್ತ ಟ್ರ್ಯಾಪ್ ಕೂಡ ಆಗಿತ್ತು. ಶಿವಾಜಿನಗರ ಠಾಣೆ ಪಿಎಸ್‌ಐ ಸುಮಾ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚದ ಹಣ 5 ಸಾವಿರ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಲೋಕಾ ಬಲೆಗೆ ಬಿದ್ದಿದ್ದರು. ಈ ಕೇಸ್‌ನಲ್ಲೂ ಇನ್ಸ್‌ಪೆಕ್ಟರ್ ಸುಮಾ ಹೆಸರು ಕೇಳಿ ಬಂದಿತ್ತು. ಇನ್ಸ್‌ಪೆಕ್ಟರ್ ಸುಮಾ ಮೇಲೆ ಹಲವು ಆರೋಪಗಳು ಕೇಳಿ ಬಂದಿದ್ದವು. ಈ ಹಿಂದೆ ಡಿಸಿಪಿ ಭೀಮಾಶಂಕರ್ ಗುಳೇದ್ ಎಚ್ಚರಿಕೆ ನೀಡಿದ್ರು ಅಂತ ತಿಳಿದು ಬಂದಿದೆ.
ಸಿದ್ದರಾಮಯ್ಯ ಸರ್ಕಾರದ ವಿರುದ್ಧ 'ಬಿಟ್ಟಿ ಭಾಗ್ಯ' ಪೋಸ್ಟ್; ಶಿಕ್ಷಕ ಸಸ್ಪೆಂಡ್!
ಹಿರಿಯ ಅಧಿಕಾರಿಗಳ ಜೊತೆ ದುರ್ವತನೆ ಆರೋಪ, ಲಂಚದ ಆರೋಪ, ಕರ್ತವ್ಯ ಲೋಪ, ದುರ್ವತನೆ ಎಲ್ಲಾ ಆರೋಪಗಳ ಹಿನ್ನಲೆ ಸುಮಾ ಅವರನ್ನ ಸಸ್ಪೆಂಡ್ ಮಾಡಿ ಪೊಲೀಸ್ ಕಮಿಷನರ್ ಆದೇಶ ಹೊರಡಿಸಿದ್ದಾರೆ.
ಹಿರಿಯ ಅಧಿಕಾರಿಗಳು ಕೇಸ್ ಸಂಬಂಧ ಹೇಳಿ ಕಳಿಸಿದರೂ ಇನ್ಸ್‌ಪೆಕ್ಟರ್ ಸುಮಾ ಲಂಚಕ್ಕೆ ಬೇಡಿಕೆ ಇಡುತ್ತಿದ್ದರು. ಯಾವ ಆಫೀಸರ್ ಕಳಿಸಿದ್ರೂ ಹಣ ಕೊಟ್ರೆ ಮಾತ್ರ ಕೆಲಸ ಎನ್ನುತ್ತಿದ್ದರು ಇನ್ಸ್‌ಪೆಕ್ಟರ್ ಸುಮಾ. ಹೀಗಾಗಿ ಇನ್ಸ್‌ಪೆಕ್ಟರ್ ಸುಮಾ ಇದೀಗ ಸಸ್ಪೆಂಡ್ ಆಗಿದ್ದಾರೆ.