ಬೆಂಗಳೂರು: ಸಿಎಂ ಸಿದ್ದರಾಮಯ್ಯಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ವ್ಯಕ್ತಿಗೆ ಬಿತ್ತು ಗೂಸಾ..!

Published : Jun 04, 2023, 10:13 AM IST
ಬೆಂಗಳೂರು: ಸಿಎಂ ಸಿದ್ದರಾಮಯ್ಯಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ವ್ಯಕ್ತಿಗೆ ಬಿತ್ತು ಗೂಸಾ..!

ಸಾರಾಂಶ

ವ್ಯಕ್ತಿಯ ದುರ್ವರ್ತನೆ ಕಂಡ ಸಿದ್ದರಾಮಯ್ಯ ಅಭಿಮಾನಿಗಳು ವ್ಯಕ್ತಿಯನ್ನ ಸೆರೆ ಹಿಡಿದಿದ್ದಾರೆ. ಸಿದ್ದರಾಮಯ್ಯ ಪೋಸ್ಟರ್ ಬಳಿ ಕರೆದೊಯ್ದು ಕ್ಷಮೆ ಕೇಳುವಂತೆ ಒತ್ತಾಯಿಸಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಅಭಿಮಾನಿಗಳು ವ್ಯಕ್ತಿಯ ಕೆನ್ನೆಗೆ ಬಾರಿಸಿದ್ದಾರೆ. 

ಬೆಂಗಳೂರು(ಜೂ.04):  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಅವಾಚ್ಯವಾಗಿ ಮಾತಾಡಿದ್ದಕ್ಕೆ ವ್ಯಕ್ತಿಯೊಬ್ಬನಿಗೆ ಅಭಿಮಾನಿಗಳಿಂದ ಗೂಸ ಬಿದ್ದ ಘಟನೆ ನಗರದ ಕೆಪಿ ಅಗ್ರಹಾರದ ವಿಜಯನಗರ ಪಾರ್ಕ್ ಬಳಿ ನಡೆದಿದೆ. ಸಿದ್ದರಾಮಯ್ಯ ಫೋಸ್ಟರ್ ನೋಡಿ ವ್ಯಕ್ತಿ ಬೈಯುತ್ತಿದ್ದ, ಇದನ್ನು ನೋಡಿದ ಸಿದ್ದು ಅಭಿಮಾನಿಗಳು ವ್ಯಕ್ತಿಗೆ ಥಳಿಸಿದ್ದಾರೆ. 

ವ್ಯಕ್ತಿಯ ದುರ್ವರ್ತನೆ ಕಂಡ ಸಿದ್ದರಾಮಯ್ಯ ಅಭಿಮಾನಿಗಳು ವ್ಯಕ್ತಿಯನ್ನ ಸೆರೆ ಹಿಡಿದಿದ್ದಾರೆ. ಸಿದ್ದರಾಮಯ್ಯ ಪೋಸ್ಟರ್ ಬಳಿ ಕರೆದೊಯ್ದು ಕ್ಷಮೆ ಕೇಳುವಂತೆ ಒತ್ತಾಯಿಸಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಅಭಿಮಾನಿಗಳು ವ್ಯಕ್ತಿಯ ಕೆನ್ನೆಗೆ ಬಾರಿಸಿದ್ದಾರೆ. ಸಿದ್ದರಾಮಯ್ಯ ಅಲ್ಲದೇ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರ ಬಗ್ಗೆಯೂ ಅವಾಚ್ಯ ಶಬ್ದಗಳಿಂದ ವ್ಯಕ್ತಿ ಬೈಯುತ್ತಿದ್ದನಂತೆ. 

ಹಣಕಾಸು ವಿಚಾರಕ್ಕೆ ಬಾರಲ್ಲಿ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ, ಉದ್ಯಮಿ ನಾಯ್ದು ಫೈಟ್‌: ಪೊಲೀಸ್‌ ಠಾಣೆಗೆ ಪರಸ್ಪರ ದೂರು

ಈ ಸಂಬಂಧ ಸಿದ್ದರಾಮಯ್ಯ ಅವರ ಅಭಿಮಾನಿಗಳು ವಿಜಯನಗರ ಠಾಣೆ ದೂರು ನೀಡಲು ಹೋಗಿದ್ದಾರೆ ಅಂತ ತಿಳಿದು ಬಂದಿದೆ. ನವೀನ್ ಎಂಬುವವರ ಫೇಸ್‌ಬುಕ್ ಪೇಜ್‌ನಲ್ಲಿ ವಿಡಿಯೋ ಪೋಸ್ಟ್ ಆಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಭಾರೀ ವೈರಲ್ ಆಗಿದೆ.  
 

PREV
Read more Articles on
click me!

Recommended Stories

ಪಿಎಸ್‌ಐ ನೇಮಕಾತಿಗೆ ಗೃಹ ಇಲಾಖೆ ರೆಡ್‌ ಸಿಗ್ನಲ್‌: ಎಎಸ್‌ಐಗಳಿಗೆ ಮುಂಬಡ್ತಿ
ಅಧಿಕಾರ ಹಂಚಿಕೆ ವಿಷಯದಲ್ಲಿ ಕಾಂಗ್ರೆಸ್‌ ಹೈಕಮಾಂಡ್ ವಿಫಲ: ಕೆ.ಎಸ್.ಈಶ್ವರಪ್ಪ ಲೇವಡಿ