Mandya: ಖಾಸಗಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಬಲಿ: ಮಾನವೀಯತೆ ಮರೆತು ಶವ ಹೊರಗೆಸೆದ ಸಿಬ್ಬಂದಿ

By Sathish Kumar KHFirst Published Jan 10, 2023, 5:43 PM IST
Highlights

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯ ಚೇತನ್ ಮೆಟರ್ನಿಟಿ ನರ್ಸಿಂಗ್ ಹೋಮ್‌ನಲ್ಲಿ ಹೆರಿಗೆಗೆಂದು ದಾಖಲಿಸಿದ್ದರು. ನಿನ್ನೆ ಸಂಜೆ ಮಗುವಿಗೆ ಜನ್ಮ ನೀಡಿದ್ದ ಬಾಣಂತಿಯನ್ನು ಮೈಸೂರು ಆಸ್ಪತ್ರೆಗೆ ಕರೆದೊಯ್ಯುವಂತೆ ಹೇಳಿದ್ದಾರೆ. ಮೈಸೂರಿಗೆ ತೆರಳುತ್ತಿದ್ದಂತೆ ಬಾಣಂತಿ ಸಾವನ್ನಪ್ಪಿದ್ದಾರೆ.

ಮಂಡ್ಯ (ಜ.10): ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯ ಚೇತನ್ ಮೆಟರ್ನಿಟಿ ನರ್ಸಿಂಗ್ ಹೋಮ್‌ನಲ್ಲಿ ಹೆರಿಗೆಗೆಂದು ದಾಖಲಿಸಿದ್ದರು. ನಿನ್ನೆ ಸಂಜೆ ಗಂಡು ಮಗುವಿಗೆ ತಾಯಿ ಜನ್ಮ ನೀಡಿದ್ದಳು. ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಹೇಳಿದ್ದ ವೈದ್ಯರು, ಇದ್ದಕ್ಕಿದ್ದಂತೆ ಬಾಣಂತಿಯನ್ನು ಮೈಸೂರು ಆಸ್ಪತ್ರೆಗೆ ಕರೆದೊಯ್ಯುವಂತೆ ಹೇಳಿದ್ದಾರೆ. ಮೈಸೂರಿಗೆ ತೆರಳುತ್ತಿದ್ದಂತೆ ಬಾಣಂತಿ ಸಾವನ್ನಪ್ಪಿದ್ದಾರೆ ಎಂದು ಕುಟುಂಬ ಸದಸ್ಯರು ಆಸ್ಪತ್ರೆಯ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಆರ್ ಪೇಟೆ ತಾಲೂಕು ದೊಡ್ಡ ಯಾಚೇನಹಳ್ಳಿ ಗ್ರಾಮದ ನೇತ್ರಾವತಿ (29) ಮೃತ ದುರ್ದೈವಿ. ನಿನ್ನೆ ಬೆಳಿಗ್ಗೆ 11 ಗಂಟೆಗೆ ಹೆರಿಗಾಗಿ ಮಂಡ್ಯ ಜಿಲ್ಲೆ ಕೆಆರ್ ಪೇಟೆಯಲ್ಲಿರುವ ಚೇತನ್ ಮೆಟರ್ನಿಟಿ ನರ್ಸಿಂಗ್ ಹೋಮ್‌ಗೆ ದಾಖಲಿಸಲಾಗಿದೆ. ಸಂಜೆ 5:30ರ ವೇಳೆಗೆ ಗಂಡು ಮಗುವಿಗೆ ಜನನವಾಗಿದೆ. ಈ ಹೆರಿಗೆ ಬಳಿಕ ತಾಯಿ, ಮಗು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ, ತಡರಾತ್ರಿ ಆಗುತ್ತಿದ್ದಂತೆ ಬಾಣಂತಿಯನ್ನು ಮೈಸೂರು ಆಸ್ಪತ್ರೆಗೆ ಕರೆದುಕೊಂಡ ಹೋಗಲು ಶಿಫಾರಸ್ಸು ಮಾಡಿದ್ದಾರೆ. ಆದರೆ, ಮೈಸೂರಿಗೆ ತೆರಳುತ್ತಿದ್ದಂತೆ ಸಾವನ್ನಪ್ಪಿದ್ದಾಳೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

Belagavi: ಆಟವಾಡಲು ಹೋಗಿದ್ದ ಇಬ್ಬರು ಮಕ್ಕಳು ನೀರಿನ ಸಂಪ್‌ಗೆ ಬಿದ್ದು ದುರಂತ ಸಾವು

ವೈದ್ಯರ ನಿರ್ಲಕ್ಷ್ಯವೆಂದು ಪೋಷಕರ ಆಕ್ರೋಶ: 
ಬಾಣಂತಿಯ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಪೋಷಕರ ಆರೋಪ ಮಾಡಿದ್ದಾರೆ. ಹೆರಿಗೆಗೂ ಮುನ್ನ ಆರಾಮವಾಗಿದ್ದ ನೇತ್ರಾವತಿ, ಅನುಮಾನಸ್ಪದ ಸಾವು ಆಗಿದೆ. ನಿನ್ನೆತಾನೆ ಹುಟ್ಟಿದ ಹಸುಗೂಸು ತಾಯಿ ಕಳೆದುಕೊಂಡು ತಬ್ಬಲಿಯಾಗಿದೆ. ಚೇತನ್‌ ನರ್ಸಿಂಗ್‌ ಹೋಮ್‌ನ ವೈದ್ಯ ಡಾ. ದಿನೇಶ್ ವಿರುದ್ಧ ಕರ್ತವ್ಯ ಲೋಪ ಆರೋಪ ಮಾಡಿದ್ದಾರೆ. ಮೃತೆಯ ಕುಟುಂಬಸ್ಥರು ಆಸ್ಪತ್ರೆ ಮುಂಭಾಗ ಶವವಿಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಗ್ಯವಾಗಿದ್ದ ಮಗಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. 

ಶವ ಹೊರಗೆ ಹಾಕಿ ಗೇಟ್‌ ಮುಚ್ಚಿದ ಆಸ್ಪತ್ರೆ ಸಿಬ್ಬಂದಿ:
ಮೈಸೂರಿನಿಂದ ಬಾಣಂತಿಯ ಮೃತದೇಹ ತಂದು ಆಸ್ಪತ್ರೆ ಒಳಗಿಡಲು ಕುಟುಂಬಸ್ಥರು ಯತ್ನಿಸಿದ್ದಾರೆ. ಈ ವೇಳೆ ಆಸ್ಪತ್ರೆ ಸಿಬ್ಬಂದಿ ಶವವನ್ನು ಹೊರಗೆ ಇಟ್ಟು ಆಸ್ಪತ್ರೆ ಗೇಟ್‌ ಮುಚ್ಚಿದ್ದಾರೆ. ಕೂಡಲೇ ದೊಡ್ಡ ಯಾಚೇನಹಳ್ಳಿಯ ಗ್ರಾಮಸ್ಥರು ಬಂದು ಆಸ್ಪತ್ರೆಯ ಮುಂದೆ ಪ್ರತಿಭಟನೆ ಆರಂಭಿಸಿದ್ದಾರೆ. ನಂತರ ಪೊಲೀಸರಿಂದ ಪ್ರತಿಭಟನೆ ಹತ್ತಿಕ್ಕಲು ಆಸ್ಪತ್ರೆ ಸಿಬ್ಬಂದಿ ಪ್ರಯತ್ನ ಮಾಡಿದ್ದರಿಂದ ಆವೇಶಕ್ಕೊಳಗಾದ ಗ್ರಾಮಸ್ಥರು ಬಾಣಂತಿ ಶವವನ್ನು ಆಸ್ಪತ್ರೆಯ ಗೇಟ್ ಒಳಭಾಗಕ್ಕೆ ಶವ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಮಗಳ ಸಾವಿಗೆ ನ್ಯಾಯ ಬೇಕು, ಶವವಾಗಿ ಅವಳು ಬೇಡ, ಜೀವಂತವಾಗಿ ಬೇಕು ಎಂದು ಆಗ್ರಹಿಸಿದ್ದಾರೆ. ಪೊಲೀಸರು ಹಾಗೂ ಕುಟುಂಬಸ್ಥರ ನಡುವಿನ ತಳ್ಳಾಟ ನೂಕಾಟ ವೇಳೆ ಶವ ಅನಾಥವಾಗಿ ಕೆಳಗೆ ಬಿದ್ದಿತ್ತು.

ದೇವದುರ್ಗ ಖಾಸಗಿ ಆಸ್ಪತ್ರೆ ಎಡವಟ್ಟು?: ಅಧಿಕ ರಕ್ತಸ್ರಾವದಿಂದ ಬಾಣಂತಿ ಸಾವು

ಶವ ಎಸೆದ ಆಸ್ಪತ್ರೆ ವಿರುದ್ಧ ಗ್ರಾಮಸ್ಥರ ಆಕ್ರೋಶ: ಇನ್ನು ಬೆಳಗ್ಗೆಯಿಂದ ಆಸ್ಪತ್ರೆಯ ಮುಂಭಾಗ ಸೇರಿದ್ದ ಮೃತ ಯುವತಿ ಗ್ರಾಮದ ಗ್ರಾಮಸ್ಥರು ಬಂದು ಆಸ್ಪತ್ರೆಯ ವಿರುದ್ಧ ಪ್ರತಿಭಟನೆ ಆರಂಭಿಸಿದ್ದರು. ಆಸ್ಪತ್ರೆಯ ವೈದ್ಯರು ಪೊಲೀಸ್‌ ರಕ್ಷಣೆ ಪಡೆದು ತಮ್ಮ ನಿರ್ಲಕ್ಷ್ಯವನ್ನು ಮುಚ್ಚಿಹಾಕಲು ಪ್ರಯತ್ನ ಮಾಡಿದ್ದಾರೆ. ಇದಕ್ಕಾಗಿ ಆಸ್ಪತ್ರೆಯ ಆವರಣಕ್ಕೆ ಮೃತ ಮಹಿಳೆಯ ಶವವನ್ನೂ ತೆಗೆದುಕೊಳ್ಳದೆ ಗೇಟ್‌ ಮುಚ್ಚಿ ಶವವನ್ನು ಹೊರಗೆಸೆಯುತ್ತಿದ್ದ ದೃಶ್ಯಗಳು ಎಂತಹ ಮನುಷ್ಯರನ್ನೂ ಮರಗುವಂತೆ ಮಾಡಿವೆ. ಮಾನವೀಯತೆ ಮರೆತು ಆಸ್ಪತ್ರೆ ಸಿಬ್ಬಂದಿ ಶವವನ್ನು ಎಸೆದಾಡಿದ ಘಟನೆ ಇಡೀ ಸಮಾಜವನ್ನು ತಲೆ ತಗ್ಗಿಸುವಂತೆ ಮಾಡಿದೆ. 

click me!