Ramanagara ರೇಷ್ಮೆ ಮಾರುಕಟ್ಟೆಯಲ್ಲಿ ಸಿಬ್ಬಂದಿ ಕೊರತೆ

By Suvarna News  |  First Published Jun 9, 2022, 4:03 PM IST

ರಾಮನಗರ ರೇಷ್ಮೆ ಮಾರುಕಟ್ಟೆ ಏಷ್ಯಾ ಖಂಡದಲ್ಲಿಯೇ ಎರಡನೇ ಅತಿದೊಡ್ಡ ಮಾರುಕಟ್ಟೆ. ಆದ್ರೆ 3 ದಶಕ‌ ಕಳೆದ್ರೂ ರೇಷ್ಮೆ ಇಲಾಖೆಯಲ್ಲಿ ಹೊಸ ನೇಮಕಾತಿ ಇಲ್ಲ. 
 


ವರದಿ: ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್ 

ರಾಮನಗರ (ಜೂ.9): ರೇಷ್ಮೆ ಅಂದ ಕೂಡಲೇ ನೆನಪಿಗೆ ಬರೋದು ರೇಷ್ಮೆ ನಾಡು ರಾಮನಗರ. ಇಲ್ಲಿನ ಮಾರುಕಟ್ಟೆ ಏಷ್ಯಾ ಖಂಡದಲ್ಲಿಯೇ ಎರಡನೇ ಅತಿದೊಡ್ಡ ಮಾರುಕಟ್ಟೆ. ಆದ್ರೆ ಈ ಮಾರುಕಟ್ಟೆಯಲ್ಲಿ ಇರಬೇಕಾದ ಸಿಬ್ಬಂದಿಗಳು ಮಾತ್ರ ಇಲ್ಲಾ. ಸಿಬ್ಬಂದಿಗಳ ಕೊರತೆಯಿಂದ ರೈತರು ಬೆಳಿಗ್ಗೆಯಿಂದ ಸಂಜೆ ವರೆಗೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Tap to resize

Latest Videos

ರಾಮನಗರ ಹೇಳಿ ಕೇಳಿ ರೇಷ್ಮೆ ನಾಡು. ಈ ಜಿಲ್ಲೆಯಲ್ಲಿ ಸಾಕಷ್ಟು ರೈತರು ರೇಷ್ಮೆ ಬೆಳೆಯನ್ನೇ ನಂಬಿ ಜೀವನ ನಡೆಸುತ್ತಾರೆ. ರಾಮನಗರದಲ್ಲಿನ ರೇಷ್ಮೆ ಮಾರುಕಟ್ಟೆ ಬಹುದೊಡ್ಡ ಮಾರುಕಟ್ಟೆ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಆದ್ರೆ ಇಂತಹ ಮಾರುಕಟ್ಟೆಯಲ್ಲಿ ಸಿಬ್ಬಂದಿಗಳ ಕೊರತೆ ಕಾಡುತ್ತಿದೆ. ಮಾರುಕಟ್ಟೆಯಲ್ಲಿ ಒಟ್ಟು 60 ಸಿಬ್ಬಂದಿಗಳ ಹುದ್ದೆಗಳಿವೆ ಆದ್ರೆ ಇದೀಗ ಇರುವ ಸಿಬ್ಬಂದಿಗಳ ಸಂಖ್ಯೆ 24 ಮಾತ್ರ. 24 ಸಿಬ್ಬಂದಿಗಳೇ ಇಡಿ ಮಾರುಕಟ್ಟೆಯನ್ನ ನೋಡಿಕೊಳ್ಳಬೇಕಿದೆ.

ಚಡ್ಡಿ ಸುಡ್ತೀನಿ ಅಂದರೆ ಎಲೆಕ್ಷನ್‌ನಲ್ಲಿ ಜನ ವಾಸನೆ ತೋರಿಸ್ತಾರೆ:

ರೇಷ್ಮೆ ಗೂಡು ತಂದ ರೈತರಿಗೆ ಚೀಟಿ ನೀಡುವುದು, ಹರಾಜು ಸಂದರ್ಭದಲ್ಲಿ ಇರುವುದು, ತೂಕ ಮಾಡುವ ಯಂತ್ರದ ಬಳಿ ಇರೋದು, ಹಣ ಪಾವತಿ ಸ್ಥಳದಲ್ಲಿ ಸಿಬ್ಬಂದಿ ವರ್ಗ ಇರಬೇಕಿದೆ. ಇಷ್ಟು ಕಡೆಗಳಲ್ಲಿ ಈಗಿರುವ 24 ಸಿಬ್ಬಂದಿಗಳೇ ಎಲ್ಲವನ್ನು ನೋಡಿಕೊಳ್ಳಬೇಕಿದೆ. ಪ್ರತಿದಿನ 30 ರಿಂದ 40 ಟನ್ ರೇಷ್ಮೆ ಮಾರುಕಟ್ಟೆಗೆ ಬರುತ್ತಿದ್ದು, ಇಲಾಖೆಯಲ್ಲಿ ಸಿಬ್ಭಂದಿ ಕೊರತೆಯಿಂದಾಗಿ ಸ್ವಲ್ಪ ತೊಂದರೆಯಾಗ್ತಿದೆ.

ಅಂದಹಾಗೇ ಈ ರೇಷ್ಮೆ ಮಾರುಕಟ್ಟೆಗೆ ಕೇವಲ ನಮ್ಮ ರಾಜ್ಯ ರೈತರಲ್ಲದೆ ಆಂದ್ರ, ತಮಿಳುನಾಡು, ಕೇರಳ ರಾಜ್ಯಗಳಿಂದ ಸಹ ರೈತರು ರೇಷ್ಮೆ ಗೂಡನ್ನ ಈ ಮಾರುಕಟ್ಟೆಗೆ ತರುತ್ತಾರೆ. ಸಿಬ್ಬಂದಿಗಳ ಕೊರತೆಯಿಂದ ರೇಷ್ಮೆ ಗೂಡು ತಂದ ರೈತರಿಗೆ ಸಮಸ್ಯೆ ಆಗುತ್ತಿದೆ. ಬೆಳಿಗ್ಗೆ ರೇಷ್ಮೆ ಗೂಡು ತಂದ ರೈತ ಹರಾಜು ಮುಗಿದ ಮೇಲೆ ತೂಕ ಹಾಕಿಸಲು ಸರತಿ ಸಾಲಿನಲ್ಲಿ ಘಂಟೆ ಗಟ್ಟಲೆ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ತೂಕದ ನಂತ್ರ ಹಣ ವರ್ಗಾವಣೆಗೆ ಅಗತ್ಯ ದಾಖಲೆ ನೀಡಲು ಸಹ ಸಮಯ ವ್ಯರ್ಥ ಮಾಡಬೇಕಾಗಿದೆ. ಸರಕಾರ ಕೂಡಲೇ ಸಿಬ್ಬಂದಿಗಳ ನಿಯೋಜನೆ ಮಾಡಬೇಕೆಂದು ರೈತರು ಆಗ್ರಹ ಪಡಿಸಿದ್ದಾರೆ. 

ಬಿಜೆಪಿಯವರು ಉಡುಪಿಯಲ್ಲಿ ಪ್ರಯೋಗಶಾಲೆ ಮಾಡಿದ್ದಾರೆ: ಸೊರಕೆ

ಏಷ್ಯಾದ ಅತಿ ದೊಡ್ಡ ಮಾರುಕಟ್ಟೆ ಎಂಬ ಹೆಸರು ಪಡೆದಿರುವ ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ಸಿಬ್ಬಂದಿಗಳ ಕೊರತೆ ಎದ್ದು ಕಾಣುತ್ತಿದೆ. ಕೂಡಲೇ ರಾಜ್ಯ ಸರ್ಕಾರ ಇತ್ತ ಗಮನ ಹರಿಸಿ ಹೊಸ ಸಿಬ್ಬಂದಿಗಳ ನೇಮಕಾತಿಗೆ ಮುಂದಾಗಬೇಕಿದೆ.

click me!