* ರಾಜಾ ಉತ್ಸವಾಂಬ ದೇಗುಲಕ್ಕೆ ಭೇಟಿ ನೀಡಿದ ರುಷಿಕುಮಾರಶ್ರೀ
* ಕಾಂಗ್ರೆಸ್‌ನವರು ಚಡ್ಡಿ ಭಯಕ್ಕೆ ಯಾರ ಸುದ್ದಿಗೂ ಹೋಗಲ್ಲ
* ಚಿತ್ರದುರ್ಗದಲ್ಲಿ ಸಿದ್ದರಾಮಯ್ಯ ವಿರುದ್ಧ ರುಷಿಕುಮಾರಶ್ರೀ ವಾಗ್ದಾಳಿ
ವರದಿ: ಕಿರಣ್ ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ(ಜೂ.09): ಜಿಲ್ಲೆಯ ಪ್ರಸಿದ್ದ ದೇವಾಲಯಗಳಲ್ಲಿ ಒಂದಾಗಿರೋ ಕೋಟೆನಾಡಿನ ಅಧಿದೇವತೆ ರಾಜಾ ಉತ್ಸವಾಂಬ ಅಲಿಯಾಸ್ ಉಚ್ಚಂಗಿ ಯಲ್ಲಮ್ಮ ದೇವಾಲಯಕ್ಕೆ ಇಂದು(ಗುರುವಾರ) ಚಿಕ್ಕಮಗಳೂರಿನ ರಿಷಿಕುಮಾರ ಶ್ರೀಗಳು ಭೇಟಿ ನೀಡಿದರು.
ನಂತರ ದೇವಾಲಯವನ್ನು ಒಂದು ಸುತ್ತು ಪ್ರದಕ್ಷಿಣೆ ಹಾಕಿದ ಶ್ರೀಗಳು, ಪುರತತ್ವ ಇಲಾಖೆಯವರು ಯಾಕೋ ನಿರ್ಲಕ್ಷ್ಯ ತೋರ್ತಿದ್ದಾರೆ. ದೇವಾಲಯಗಳಲ್ಲಿ ಸೂಕ್ತ ನಿರ್ವಹಣೆ ತೋರಿಸ್ತಿಲ್ಲ ಎಂದು ಕಿಡಿಕಾರಿದರು. ಯಾಕಂದ್ರೆ ದೇವಾಲಯದ ಗುಡಿಯೊಳಗೆ ಧೂಳು ಹೆಚ್ಚಿದೆ ಯಾರೂ ಸರಿಯಾಗಿ ಕೆಲಸ ಮಾಡ್ತಿಲ್ಲ ಹೀಗಾದ್ರೆ ನಮ್ಮ ಇತಿಹಾಸದಲ್ಲಿ ಪ್ರಸಿದ್ದಿ ಪಡೆದಿರೋ ತಾಯಿಗೆ ಅವಮಾನ ಮಾಡಿದಂತೆ ಎಂದು ಬೇಸರ ವ್ಯಕ್ತಪಡಿಸಿದರು.ಕೂಡಲೇ ರಾಜ ವೀರ ಮದಕರಿ ನಾಯಕ ಸ್ಮಾರಕ ಟ್ರಸ್ಟ್ ಅನ್ನು ನಾವು ರಚನೆ ಮಾಡೋದಕ್ಕೆ ಎಲ್ಲಾ ಪ್ಲಾನ್ ಮಾಡಿಕೊಂಡಿದ್ದೇವೆ. ಈ ಕುರಿತು ನಾಳೆ ನಮ್ಮ ಗೌರವಾಧ್ಯಕ್ಷತೆಯಲ್ಲಿ ಟ್ರಸ್ಟ್ ರಚನೆನೆ ರೂಪುರೇಷೆಗಳನ್ನು ಸಿದ್ದಪಡಿಸಲಾಗುವುದು ಎಂದು ಶ್ರೀಗಳು ತಿಳಿಸಿದರು.
ಇನ್ನೂ ಇದೇ ವೇಳೆ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶ್ರೀಗಳು, ಶ್ರೀರಂಗಪಟ್ಟಣದಲ್ಲಿ ಮದಕರಿ ನಾಯಕ ಸ್ಮಾರಕ ನಿರ್ಮಾಣಕ್ಕೆ ಆಗ್ರಹ. ಮದಕರಿ ನಾಯಕರಿಗೆ ವಿಷವಿಟ್ಟು ಹೈದರಾಲಿಯಿಂದ ಮೋಸದ ಹತ್ಯೆಯಾಗಿದೆ. ಶ್ರೀರಂಗಪಟ್ಟಣದ್ದು ಮಸೀದಿ ಅಲ್ಲ, ಆಂಜನೇಯ ದೇಗುಲ. ನನ್ನ ಕಣ್ಣಿಗೆ ಈಗಲೇ ಅದು ಆಂಜನೇಯನ ದೇಗುಲವೇ ಆದ್ರೆ ಸರ್ಕಾರ ಯಾಕೆ ಇದನ್ನು ಪರಿಗಣಿಸ್ತಿಲ್ಲ ಎಂಬುದೇ ಬೇಸರ ವ್ಯಕ್ತಪಡಿಸಿದ್ದಾರೆ.
ಈಗಿರುವ ಮಸೀದಿಯಲ್ಲಿರುವ ಮದರಸಾ ಖಾಲಿ ಮಾಡಿಸಬೇಕು. ನಾವು ಇಷ್ಟಕ್ಕೆ ಸುಮ್ಮನಾಗಲ್ಲ, ಮೊನ್ನೆ ನಮ್ಮ ಹುಡುಗರು ಬರೀ ಸ್ಯಾಂಪಲ್ ಕೊಟ್ಟಿದ್ದಾರೆ. ಮುಂದಿನ ನಮ್ಮ ಹೋರಾಟ ತುಂಬಾ ದೊಡ್ಡಮಟ್ಟದಲ್ಲಿ ಇರುತ್ತದೆ. ಇದಕ್ಕಾಗಿಯೇ ಬೆಂಗಳೂರಿನಿಂದ ಶ್ರೀರಂಗಪಟ್ಟಣವರೆಗೆ ಪಾದಯಾತ್ರೆ ಮಾಡುತ್ತೇವೆ. ಬೆಂಗಳೂರಿನ ಮಹಾತಾಯಿ ಅಣ್ಣಮ್ಮನ ದೇವಾಲಯದಿಂದ ಶುರುವಾಗಲಿರುವ ನಮ್ಮ ಪದಯಾತ್ರೆ, ಶ್ರೀರಂಗಪಟ್ಟಣದ ಶ್ರೀ ರಂಗನಾಥ ಸ್ವಾಮಿಯ ದೇಗುಲದವರೆಗೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಇನ್ನೂ ಇತ್ತೀಚಿಗೆ ಕಾಂಗ್ರೆಸ್ ನಾಯಕರು ಅದ್ರಲ್ಲೂ ಮುಖ್ಯವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಆರ್‌ಎಸ್‌ಎಸ್ ಚಡ್ಡಿ ಸುಡುವ ವಿಚಾರವನ್ನು ಹೆಚ್ಚು ಚರ್ಚೆ ಮಾಡ್ತಿದ್ದಾರೆ. ಕೇವಲ ಒಂದು ಚಡ್ಡಿ ಸುಟ್ಟಿದ್ದಕ್ಕೆ ಕೆಪಿಸಿಸಿ ಕಚೇರಿ ತುಂಬ ಚಡ್ಡಿ ನೇತಾಡ್ತಿವೆ. ಆದ ಕಾರಣಕ್ಕೆ ಸಿದ್ದರಾಮಯ್ಯ ಹಾಗೂ ಕಾಂಗ್ರೆಸಿಗರು ಈಗ ಚಡ್ಡಿ ಭಯಕ್ಕೆ ಯಾರ ಸುದ್ದಿಗೂ ಹೋಗಲ್ಲ ಅಂತಿದ್ದಾರೆ. ಅದಕ್ಕೆ ಸಿದ್ದರಾಮಯ್ಯ ಅವರು ಬಿಜೆಪಿ ಅವರು ಸೀಳನಾಯಿ ಬಂದಂಗೆ ಬರ್ತವೆ ಅನ್ನೋದು ನಿಮ್ಮ ಭಾಷೆಯದು. ನಿಜ, ಆರ್‌ಎಸ್‌ಎಸ್‌ನವರು ಶತೃಗಳಿಗೆ ಸೀಳು ನಾಯಿಗಳೇ ಎಂದು ಶ್ರೀಗಳು ಖಡಕ್ ಎಚ್ಚರಿಕೆ ಕೊಟ್ಟರು.
ಇನ್ನೂ ನೀವು ಶತೃತ್ವ ಯಾಕೆ ಕಟ್ಟಿಕೊಳ್ಳೋಕೆ ಹೋಗ್ತೀದ್ದೀರಿ, ಚಡ್ಡಿ ಸುಡ್ತೀನಿ ಅಂದಿದ್ದಕ್ಕೆ ನೀನು ತರೋದು ಬೇಡ ಅಂತ ಚಡ್ಡಿ ಕಳಿಸ್ತಿರೋದು. ಚಡ್ಡಿ ವಾಸನೆ ತಡೆಯಲು ಆಗದೆ ಸೀಳುನಾಯಿಯಂತೆ ಬರ್ತಾರೆ ಅಂತಿರೋದು. ಚಡ್ಡಿ ವಾಸನೆ ಸಿದ್ದರಾಮಯ್ಯ ಮೂಗಿಗೆ ಹೊಡೆದಿದೆ. ಇನ್ಮುಂದೆ ಆದ್ರು ಸಿದ್ದರಾಮಯ್ಯ ಗಿಲಿ ಬಿಲಿ ಆಟಗಳನ್ನು ಬಿಡಬೇಕು ಎಂದು ಶ್ರೀಗಳು ಗರಂ ಆದರು.
ದೇಶ, ಧರ್ಮಕ್ಕಾಗಿ, ಜಗತ್ತಿನ ಒಳಿತಾಗಿ ಚಿಂತಿಸಿ. ಎಲ್ಲರನ್ನೂ ಒಂದೇ ರೀತಿ ನೋಡ್ತೀನಿ ಎಂದು ಚುನಾವಣೆ ಎದುರಿಸಿ. ಅದನ್ನು ಬಿಟ್ಟು ದಿನಕ್ಕೊಂದು ಹೇಳಿ ನಾಟಕ ಮಾಡೋದು ಸರಿಯಲ್ಲ. ಚಡ್ಡಿ ಸುಡ್ತೀನಿ, ಕಾಚಾ ಸುಡ್ತೀನಿ ಅಂದರೆ ಮುಂದಿನ ಚುನಾವಣೆಯಲ್ಲಿ ಜನ ವಾಸನೆ ತೋರಿಸ್ತಾರೆ ಎಂದು ಸಿದ್ದರಾಮಯ್ಯ ವಿರುದ್ದ ರಿಷಿಕುಮಾರಶ್ರೀ ವಾಗ್ದಾಳಿ ನಡೆಸಿದರು.