* ಶಿರಸಿ ತಾಲೂಕಿನ 6 ಸಾವಿರ ಹೆಕ್ಟೇರ್‌ಗಿಂತ ಹೆಚ್ಚಿನ ಪ್ರದೇಶದ ಫಸಲು ಹಾಳು
* ಕೊಳೆತು ಕಪ್ಪು ಬಣ್ಣಕ್ಕೆ ತಿರುಗಿದ ಬತ್ತದ ಹುಲ್ಲು
* ಅಕಾಲಿಕ ಮಳೆಗೆ 6 ಸಾವಿರ ಹೆಕ್ಟೇರ್‌ಗಿಂತ ಹೆಚ್ಚಿನ ಪ್ರದೇಶದ ಫಸಲು ಹಾಳು
ಶಿರಸಿ(ಡಿ.08): ಈ ವರ್ಷದ ಸಾಲು ಸಾಲು ಅಕಾಲಿಕ ಮಳೆ(Untimely Rain) ಬತ್ತದ ಬೆಳೆ ಸಂಗಡ ಜಾನುವಾರುಗಳ(Livestock) ಮೇವನ್ನೂ ಕಿತ್ತುಕೊಂಡಿದೆ. ಬತ್ತದ ಹುಲ್ಲು ಕೊಳೆತು ಕಪ್ಪು ಬಣ್ಣಕ್ಕೆ ತಿರುಗಿದ್ದು, ಈಗ ಮಳೆಯ ಬಳಿಕ ಒಣಗಿಸಿದರೂ ಬಳಕೆಗೆ ಬರದಂತಾಗಿದೆ. ತಾಲೂಕಿನಲ್ಲಿ 50 ಸಾವಿರ ಹೆಕ್ಟೇರ್‌ಗಿಂತ ಹೆಚ್ಚು ಪ್ರದೇಶದಲ್ಲಿ ಬತ್ತ(Paddy) ಬೆಳೆಯಲಾಗುತ್ತಿದೆ. ಪ್ರಾಥಮಿಕ ಅಂದಾಜಿನಂತೆ ಮಳೆಯಿಂದ ತಾಲೂಕಿನ 6 ಸಾವಿರ ಹೆಕ್ಟೇರ್‌ಗಿಂತ ಹೆಚ್ಚಿನ ಪ್ರದೇಶದ ಫಸಲು ಹಾಳಾಗಿದೆ. ಬೇಸಾಯದ ಶೇ. 40ರಷ್ಟು ಪ್ರದೇಶದ ಸಸಿಗಳು ಮಳೆಗೆ ಹಾನಿಗೀಡಾಗಿದೆ.
ಬತ್ತದ ಕಾಳುಗಳು ಮೊಳಕೆಯೊಡೆದು ಹಾಳಾಗಿದ್ದರೆ, ಹುಲ್ಲು(Fodder) ನೀರಿನಲ್ಲಿ ನೆನೆದು ಮುಗ್ಗಿದೆ. ಅಲ್ಲದೆ ಮಳೆನೀರಿಗೆ ಸಿಕ್ಕು ಹಾಳಾದ ಹುಲ್ಲುಗಳನ್ನು ಹೆಚ್ಚು ಕಾಲ ದಾಸ್ತಾನಿಡುವದು ಕಷ್ಟ. ಬನವಾಸಿ, ದಾಸನಕೊಪ್ಪ ಭಾಗದಿಂದ ತಾಲೂಕಿನ ಪಶ್ಚಿಮ ಭಾಗವಾದ ಸಂಪಖಂಡ, ಹುಲೇಕಲ್ಕ ಹೋಬಳಿಗೆ ಬತ್ತದ ಹುಲ್ಲನ್ನು ಮೇವಿಗಾಗಿ ತರಲಾಗುತ್ತದೆ. ಬತ್ತದ ಕಟಾವು ಅವಧಿಯ ಬಳಿಕ ಹುಲ್ಲುಗಳ ಮಾರಾಟ ಪ್ರಕ್ರಿಯೆ ಜೋರಾಗುತ್ತದೆ. ವರ್ಷಗಳ ಕಾಲ ಸಂಗ್ರಹಿಸುವಷ್ಟು ಹುಲ್ಲನ್ನು ಏಕಕಾಲಕ್ಕೆ ದಾಸ್ತಾನಿಟ್ಟುಕೊಳ್ಳುವ ಹೈನುಗಾರರ ಸಂಖ್ಯೆಯೂ ಸಾಕಷ್ಟಿದೆ. ಹೀಗಾಗಿ, ಬತ್ತದ ಹಂಗಾಮು ಮುಗಿದ ಬಳಿಕ ಪ್ರತಿ ದಿನ 40ಕ್ಕೂ ಅಧಿಕ ಟ್ರಾಕ್ಟರ್‌ಗಳು ಹುಲ್ಲು ತುಂಬಿ ಮಾರಾಟಕ್ಕೆ ಹೊರಡುತ್ತಿದ್ದವು.
undefined
Karnataka Rains: ಅಕಾಲಿಕ ಮಳೆ ತಂದಿಟ್ಟ ಸಂಕಷ್ಟ: ಒಂದೇ ವಾರದಲ್ಲಿ ಮೂವರು ರೈತರು ಆತ್ಮಹತ್ಯೆ
ಅಕಾಲಿಕ ಮಳೆ ಬತ್ತದ ಜತೆಗೆ ಜಾನುವಾರುಗಳ ಮೇವಿನ ಮೇಲೂ ಅಡ್ಡ ಪರಿಣಾಮ ಬೀರಿದೆ. ಕಟಾವು ಮಾಡಿ ಬಣವೆ ಮಾಡಿಟ್ಟ ಹುಲ್ಲುಗಳು ಹಾಳಾಗಿವೆ. ಪ್ರತಿ ವರ್ಷ ಸಾವಿರಾರು ಕಟ್ಟುಗಳನ್ನು ಮಾರಾಟ ಮಾಡಲಾಗುತ್ತಿತ್ತು. ಈ ಬಾರಿ ನಾವು ಸಾಕಿದ ಜಾನುವಾರುಗಳಿಗೆ ಮೇವು ಸಿಗುವುದು ಕಷ್ಟವಾಗಲಿದೆ ಎನ್ನುತ್ತಾರೆ ದಾಸನಕೊಪ್ಪ ಬಳಿಯ ಧನಗನಹಳ್ಳಿ ರೈತ(Farmer) ಬಸವರಾಜ. ಕಳೆದ ವರ್ಷ ಪ್ರತಿ ಕಟ್ಟು ಬತ್ತದ ಹುಲ್ಲಿಗೆ 19 ದರವಿದ್ದು, ಸದ್ಯ .28ಕ್ಕೆ ಏರಿಕೆಯಾಗಿದೆ. ಮೇವಿನ ಕೊರತೆ ಎನ್ನುತ್ತಿದ್ದ ವ್ಯಾಪಾರಿಗಳು(Merchants) ಈ ಬಾರಿ ದರ ಹೆಚ್ಚಿಸುವ ಆತಂಕವಿದೆ. ದುಬಾರಿ ದರದಲ್ಲಿ ಮೇವು ಖರೀದಿಸಿ ಹೈನುಗಾರಿಕೆ(Dairy) ನಡೆಸುವದು ಹೇಗೆ?’ ಎನ್ನುತ್ತಿದ್ದಾರೆ ಹಲವು ರೈತರು.
ಬತ್ತದ ಹುಲ್ಲು ಪಶುವಿನ ಮುಖ್ಯ ಆಹಾರವಾಗಿದ್ದರೂ ಅವುಗಳ ಅವಧಿ ಮುಗಿದ ಬಳಿಕ ಜೋಳದ ಹುಲ್ಲು ಸೇರಿದಂತೆ ನಾಲ್ಕು ವಿಧದ ಹುಲ್ಲು ಬೆಳೆಸಲು ಬೀಜಗಳನ್ನು ರೈತರಿಗೆ ಉಚಿತವಾಗಿ ನೀಡಲಾಗುತ್ತಿದೆ.
ವಾರ್ಷಿಕ 60 ಸಾವಿರ ಮೆಟ್ರಿಕ್ ಟನ್‌ನಷ್ಟು ಮೇವನ್ನು ಹೀಗೆ ಪಡೆಯುತ್ತಿದ್ದೇವೆ’ ಎನ್ನುತ್ತಾರೆ ಪಶು ಸಂಗೋಪನಾ ಇಲಾಖೆ(Department of Animal Husbandry) ಉಪನಿರ್ದೇಶಕ ರಾಕೇಶ ಬಂಗ್ಲೆ.
ಪ್ರತಿ ಜಾನುವಾರಿಗೆ ದಿನಕ್ಕೆ ಕನಿಷ್ಠ 6 ಕೆಜಿ ಮೇವು ಬೇಕಾಗುತ್ತದೆ. 4.10 ಲಕ್ಷ ಜಾನುವಾರುಗಳಿದ್ದು ಅವುಗಳಿಗೆ ಬೇಕಾಗುವ 3.31 ಲಕ್ಷ ಮೆಟ್ರಿಕ್ ಟನ್ ಮೇವನ್ನು ಹೊಂದಿಸಿಕೊಳ್ಳಲು ಕ್ರಮವಹಿಸಿದ್ದೇವೆ. ಕೊರತೆ ಎದುರಾದರೆ ಬೇರೆ ಕಡೆಯಿಂದ ಮೇವು ತರಿಸಿಕೊಳ್ಳಲೂ ಅವಕಾಶವಿದೆ’ ಎನ್ನುತ್ತಾರೆ.
Rain Effect: ಕೇಜಿಗೆ 360 ರೂ.: ನುಗ್ಗೆಕಾಯಿ ಬೆಲೆ ಕೇಳಿ ಸುಸ್ತಾದ ಗ್ರಾಹಕ..!
ಸದ್ಯದ ಸ್ಥಿತಿಯಲ್ಲಿ ಮೇವು ದಾಸ್ತಾನಿದೆ. ಈಗ ಬತ್ತದ ಹುಲ್ಲು ಹೆಚ್ಚು ಹಾನಿಯಾಗಿರುವ ಪರಿಣಾಮ ನಂತರದ ದಿನಗಳಲ್ಲಿ ಕೊರತೆಯ ಸಮಸ್ಯೆ ಎದುರಾಗಬಹುದು ಎಂದು ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ರಾಕೇಶ ಬಂಗ್ಲೆ ತಿಳಿಸಿದ್ದಾರೆ.
ಅಕಾಲಿಕ ಮಳೆಗೆ ನೀರುಪಾಲಾದ ಬೆಳೆ, ಕಂಗಾಲಾದ ಅನ್ನದಾತ..!
ಉತ್ತರಕನ್ನಡ ಜಿಲ್ಲೆಯಲ್ಲಿ ಭಾನುವಾರ ಹಾಗೂ ಸೋಮವಾರ ಸುರಿದ ಅಕಾಲಿಕ ಮಳೆ ರೈತರನ್ನು ಸಂಕಷ್ಟಕ್ಕೆ ನೂಕಿದ್ದು, ಜಿಲ್ಲೆಯ ಕರಾವಳಿ ಭಾಗದಲ್ಲಿ ಕೊಯ್ಲಾದ ಬತ್ತದ ಬೆಳೆ ಸಂಪೂರ್ಣ ಮಳೆ ನೀರಿಗೆ ಸಿಕ್ಕಿ ಹಾನಿಯಾಗಿದೆ.
ಮೋಡ ಕವಿದ(Cloudy) ವಾತಾವರಣವಿದ್ದ ಜಿಲ್ಲೆಯಲ್ಲಿ ಜಿಲ್ಲೆಯಾದ್ಯಂತ ಗುಡುಗು-ಸಿಡಿಲು ಸಹಿತ ಭಾರಿ ಮಳೆಯಾಗಿತ್ತು(Rain). ತಡರಾತ್ರಿವರೆಗೆ ಸುರಿದ ಅಕಾಲಿಕ ಮಳೆ(Premature Rain) ಶಿರಸಿ, ಸಿದ್ದಾಪುರ ಸೇರಿದಂತೆ ಹಲವೆಡೆ ಮಳೆಯಾಗಿದ್ದು, ರೈತರು(Farmers) ಜನಸಂಕಷ್ಟಕ್ಕೆ ಸಿಲುಕುವಂತಾಗಿದೆ.