ಅದೊಂದು ಗಡಿ ಭಾಗದ ಹಳ್ಳಿ, ಇಲ್ಲಿಗೆ ಚುನಾವಣೆ ವೇಳೆ ಮತ ಕೇಳೋಕೆ ಬರುವ ರಾಜಕಾರಣಿಗಳು ಗೆದ್ದ ಮೇಲೆ ತಿರುಗಿ ನೋಡಲ್ವಂತೆ. ಹೀಗಾಗಿ ಮೂಲಭೂತ ಸೌಕರ್ಯಗಳ ಸಮಸ್ಯೆ ಗ್ರಾಮದಲ್ಲಿ ಹೆಮ್ಮರವಾಗಿ ಬೆಳದಿದೆ.
ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ (ಏ.14): ಅದೊಂದು ಗಡಿ ಭಾಗದ ಹಳ್ಳಿ, ಇಲ್ಲಿಗೆ ಚುನಾವಣೆ ವೇಳೆ ಮತ ಕೇಳೋಕೆ ಬರುವ ರಾಜಕಾರಣಿಗಳು ಗೆದ್ದ ಮೇಲೆ ತಿರುಗಿ ನೋಡಲ್ವಂತೆ. ಹೀಗಾಗಿ ಮೂಲಭೂತ ಸೌಕರ್ಯಗಳ ಸಮಸ್ಯೆ ಗ್ರಾಮದಲ್ಲಿ ಹೆಮ್ಮರವಾಗಿ ಬೆಳದಿದೆ. ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ಮತದಾನ ಬಹಿಷ್ಕಾರಕ್ಕೆ ಗ್ರಾಮಸ್ಥರು ಮುಂದಾಗಿದ್ದಾರೆ. ಅಷ್ಟಕ್ಕು ಆ ಗ್ರಾಮದು ಅನ್ನೋದ್ರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ. ಚುನಾವಣೆ ಹತ್ತಿರ ಬಂದಾಗ ಮಾತ್ರ ರಾಜಕಾರಣಿಗಳು ಮತ ಕೇಳಲು ಗ್ರಾಮಕ್ಕೆ ಹೋಗೋದು ಸರ್ವೆ ಸಾಮಾನ್ಯವಾಗಿದೆ. ಆದ್ದರಿಂದ ಬೇಸತ್ತಿರೋ ಕೆಲ ಗ್ರಾಮಸ್ಥರು ಈ ಬಾರಿ ಮತದಾನ ಬಹುಷ್ಕಾರ ಮಾಡಿಯೇ ಸಿದ್ದ ಎಂದು ತಮ್ಮ ಆಕ್ರೋಶ ಹೊರ ಹಾಕ್ತಿದ್ದಾರೆ.
undefined
ಇದಕ್ಕೆ ಪೂರಕ ಎಂಬಂತೆ, ಚಿತ್ರದುರ್ಗ ತಾಲ್ಲೂಕಿನ ಕಾಕಬಾಳ ಗ್ರಾಮದಲ್ಲಿ ಸರಿ ಸುಮಾರು ನಾಲ್ಕೈದು ವರ್ಷದಿಂದ ಮೂಲಭೂತ ಸೌಕರ್ಯಗಳ ಸಮಸ್ಯೆ ಎದುರಾಗಿದೆ. ಮುಖ್ಯವಾಗಿ ಈ ಗ್ರಾಮದಲ್ಲಿ ಸೂಕ್ತ ರಸ್ತೆಗಳು, ಚರಂಡಿ ಗಳು ಆಗಿಲ್ಲ. ಮೇಲಾಗಿ ನೂರಾರು ವಿಧ್ಯಾರ್ಥಿಗಳು ವಿದ್ಯಾಭ್ಯಾಸ ಕಲಿಯಲು ಆಟೋಗಳು ಹಾಗೂ ನಡೆದುಕೊಂಡು ಬೇರೆ ಊರುಗಳಿಗೆ ಹೋಗುವ ಪರಿಸ್ಥಿತಿ ಇದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ. ಇನ್ನೂ ರಾಜಕಾರಣಿಗಳಂತೂ ಕಳೆದ ಎಲೆಕ್ಷನ್ ಅಲ್ಲಿ ಗ್ರಾಮಕ್ಕೆ ಬಂದಿದ್ದು, ಇದುವರೆಗೂ ಗ್ರಾಮದಲ್ಲಿ ಜನರ ಸಮಸ್ಯೆ ಆಲಿಸಲು ಮುಂದೆ ಬಂದಿಲ್ಲ.
ರಾಮನಗರದ 4 ಕ್ಷೇತ್ರಗಳಲ್ಲೂ ಬಿಜೆಪಿಯದ್ದೇ ಗೆಲುವು: ಸಚಿವ ಅಶ್ವತ್ಥ ನಾರಾಯಣ
ಚುನಾವಣೆ ಒಳಗಾಗಿ ನಮ್ಮ ಗ್ರಾಮದ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸದಿದ್ದಲ್ಲಿ ಈ ಬಾರಿಯ ಚುನಾವಣೆಯನ್ನು ಇಡೀ ಗ್ರಾಮಸ್ಥರು ಬಹಿಷ್ಕಾರ ಮಾಡ್ತೀವಿ ಎಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ದ ಗ್ರಾಮಸ್ಥರು ಕಿಡಿಕಾರಿದರು. ಕಳೆದ ಐದು ವರ್ಷದಿಂದಲೂ ನಮ್ಮ ಗ್ರಾಮ ಮೂಲಭೂತ ಸೌಕರ್ಯಗಳ ವಂಚಿತ ಗ್ರಾಮವಾಗಿದೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದಿಂದ ಬರುವ ಯೋಜನೆಗಳಿಗೂ ಸರಿಯಾಗಿ ಬಿಲ್ ಆಗಿಲ್ಲ. ಅದಕ್ಕಾಗಿಯೇ ಈ ಹಿಂದೆ ಇದ್ದ ಕೆಲ ಅಧಿಕಾರಿಗಳು ಆರು ಎಕರೆ ಜಮೀನು ನೀಡಿ ಲೇಔಟ್ ಮಾಡಲು ಸೂಚಿಸಿದ್ದರು. ಆದ್ರೆ ಕೆಲವರು ಒತ್ತುವರಿ ಮಾಡಿದ್ರು ಅದನ್ನು ಬಿಡಿಸಿಕೊಂಡು, ಗ್ರಾಮಸ್ಥರಿಗೆ ನೀಡಲಾಗದೇ ನಿರ್ಲಕ್ಷ್ಯ ತೋರುತ್ತಿದ್ದಾರೆ.
ಮೋದಿ, ಶಾ ಟಕ್ಕರ್ ನಮ್ಮತ್ರ ನಡೆಯಲ್ಲ: ಸಂಸದ ಡಿ.ಕೆ.ಸುರೇಶ್
ಈ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದಾಗ ಮಾತ್ರ, ಅಧಿಕಾರಿಗಳು ಇಂದು ದೌಡಾಯಿಸಿದ್ದರು. ಚುನಾವಣೆ ಮುಗಿದ ಬಳಿಕ ಸರಿಪಡಿಸ್ತೀವಿ ಎಂದು ಆಶ್ವಾಸನೆ ಕೊಟ್ಟಿದ್ದಾರೆ. ನಮಗೆ ಚುನಾವಣೆ ಒಳಗೆ ಸರಿಪಡಿದ್ರೆ ಮತ ಹಾಕ್ತೀವಿ ಇಲ್ಲ ಅಂದ್ರೆ ಮತದಾನ ಬಹಿಷ್ಕಾರ ಮಾಡ್ತೀವಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಒಟ್ಟಾರೆಯಾಗಿ ಚುನಾವಣೆ ಸಮಯದಲ್ಲಿ ಮಾತ್ರ ಕೆಲ ಗ್ರಾಮಗಳತ್ತ ಧಾವಿಸಿ ಮತ ಕೇಳುವ ಜನಪ್ರತಿನಿಧಿಗಳಿಗೆ ಜನರು ಅಲ್ಲೇ ಡ್ರಾ ಅಲ್ಲೇ ಬಹುಮಾನ ಎನ್ನುವ ರೀತಿ ಘೇರಾವ್ ಹಾಕಿದಾಗ ಮಾತ್ರ ಈ ರೀತಿಯ ಸಮಸ್ಯೆಗಳು ಬಗೆಹರಿಯುತ್ತವೆ. ಚುನಾವಣೆ ವೇಳೆ ಮತವನ್ನು ಮಾರಿಕೊಳ್ಳುವ ಜನರು ಇನ್ನಾದ್ರು ಬುದ್ದಿ ಕಲಿಯಬೇಕಿದೆ.