ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ, ಮತದಾರರ ಓಲೈಕೆಗಾಗಿ ಅಕ್ರಮವಾಗಿ ಹಣ, ಮದ್ಯಸಾಗಾಟ ಜೋರಾಗಿದ್ದು, ರಾಜ್ಯದ್ಯಂತ ಪೊಲೀಸರು ಹೈಅಲರ್ಟ್ ಆಗಿದ್ದಾರೆ. ಚೆಕ್‌ಪೋಸ್ಟ್ ನಿರ್ಮಿಸಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದಾರೆ. ದಿನನಿತ್ಯ ಕೋಟ್ಯಂತರ ಹಣ, ಮದ್ಯ ವಶಪಡಿಸಿಕೊಳ್ಳಲಾಗುತ್ತಿದೆ. ರಾಜ್ಯದೊಳಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಹಿನ್ನೆಲೆ ನೆರೆ ರಾಜ್ಯ ಗೋವಾದಿಂದಲೂ ಅಕ್ರಮವಾಗಿ ಮದ್ಯ ಸಾಗಾಟ ಮಾಡಲಾಗುತ್ತಿದೆ.
ಜೊಯಿಡಾ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ, ಮತದಾರರ ಓಲೈಕೆಗಾಗಿ ಅಕ್ರಮವಾಗಿ ಹಣ, ಮದ್ಯಸಾಗಾಟ ಜೋರಾಗಿದ್ದು, ರಾಜ್ಯದ್ಯಂತ ಪೊಲೀಸರು ಹೈಅಲರ್ಟ್ ಆಗಿದ್ದಾರೆ. ಚೆಕ್‌ಪೋಸ್ಟ್ ನಿರ್ಮಿಸಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದಾರೆ. ದಿನನಿತ್ಯ ಕೋಟ್ಯಂತರ ಹಣ, ಮದ್ಯ ವಶಪಡಿಸಿಕೊಳ್ಳಲಾಗುತ್ತಿದೆ. ರಾಜ್ಯದೊಳಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಹಿನ್ನೆಲೆ ನೆರೆ ರಾಜ್ಯ ಗೋವಾದಿಂದಲೂ ಅಕ್ರಮವಾಗಿ ಮದ್ಯ ಸಾಗಾಟ ಮಾಡಲಾಗುತ್ತಿದೆ.
ಗೋವಾಂದಿಂದ ಅಕ್ರಮವಾಗಿ ಲಾರಿಯಲ್ಲಿ ಸಾಗಿಸುತ್ತಿದ್ದ ಮದ್ಯ ಅನಮೋಡ ಚೆಕ್ ಪೋಸ್ಟ್ ಬಳಿ ಪೊಲೀಸರು ಪತ್ತೆ ಹಚ್ಚಿ ವಶಪಡಿಸಿಕೊಂಡು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
undefined
ಉತ್ತರ ಪ್ರದೇಶ ಮೂಲದ ಮನೋಜ್ ಬಲವೀರ್ ಸಿಂಹ್ ಬಂಧಿತ ಆರೋಪಿಯಾಗಿದ್ದಾನೆ. ಕಂಟೇನರ್‌ನಲ್ಲಿ ಸುಮಾರು 44 ಲೀಟರ್ ಮದ್ಯ ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಬಲೆಗೆ ಬಿದ್ದ ಆರೋಪಿ. ಮದ್ಯ ಎಲ್ಲಿಗೆ ಸಾಗಿಸಲಾಗುತ್ತಿತ್ತು. ಇದರ ಮೂಲ ಯಾವುದು ಎಂಬುದು ವಿಚಾರಣೆಗೊಳಪಡಿಸಿದ್ದಾರೆ.
ರಾಜ್ಯದಲ್ಲಿ ಎಲೆಕ್ಷನ್ ಬೇಟೆ: ಬರೋಬ್ಬರಿ 12 ಕೋಟಿ ನಗದು, 16 ಕೋಟಿ ಮದ್ಯ, 6 ಕೋಟಿ ಮೌಲ್ಯದ ಚಿನ್ನ ವಶಕ್ಕೆ!
ಗೋವಾ ಮದ್ಯ ವಶಕ್ಕೆ:
ಕಾರವಾರ (ಏ.14) : ತಾಲೂಕಿನ ಮಾಜಾಳಿ ಚೆಕ್‌ಪೋಸ್ಟ್ ಬಳಿ ಕಾರಿನಲ್ಲಿ ಸಾಗಿಸುತ್ತಿದ್ದ .25,500 ಮೌಲ್ಯದ ಗೋವಾ ಮದ್ಯವನ್ನು ಅಬಕಾರಿ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಜಪ್ತು ಪಡಿಸಿಕೊಂಡಿದ್ದಾರೆ.
ತೆಲಂಗಾಣ ಮೂಲದ ತೆಕುಲಾ ವರಪ್ರಸಾದ ರೆಡ್ಡಿ(Tekula vara prasad reddy) ಆರೋಪಿಯಾಗಿದ್ದು, ಈತ ಗೋವಾದಿಂದ ಕಾರವಾರದ ಕಡೆಗೆ ಬರುವ ಕಾರಿನಲ್ಲಿ ಮದ್ಯ ಸಾಗಿಸುತ್ತಿರುವಾಗ ಮಾಜಾಳಿ ಚೆಕ್‌ಪಸ್ಟ್(Majali checkpost) ಬಳಿ ತಪಾಸಣೆ ಮಾಡಿದಾಗ 18 ಲೀಟರ್ ಗೋವಾ ಮದ್ಯ, 1.5 ಲೀಟರ್ ಗೋವಾ ಪೆನ್ನಿ ಹಾಗೂ 1.5 ಲೀಟರ್ ಗೋವಾ ವೈನ್ ಪತ್ತೆಯಾಗಿದೆ. ಈ ಬಗ್ಗೆ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಬಕಾರಿ ದಾಳಿ 17 ಲೀ. ಮದ್ಯ ವಶಕ್ಕೆ
ಗದಗ : ಚುನಾವಣೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ . 6,745 ಮೌಲ್ಯದ 17.280 ಲೀ ಮದ್ಯ ಹಾಗೂ ಒಂದು ದ್ವಿಚಕ್ರ ವಾಹನವನ್ನು ಅಬಕಾರಿ ಇಲಾಖೆ ವತಿಯಿಂದ ವಶಕ್ಕೆ ಪಡೆಯಲಾಗಿದೆ.
ಅನಧಿಕೃತ ಮದ್ಯ ಮಾರಾಟ ಕಂಡುಬಂದರೆ ಕಟ್ಟು ನಿಟ್ಟಿನ ಕ್ರಮ
ಏ. 12ರಂದು ಮಧ್ಯಾಹ್ನ 3.30ಕ್ಕೆ ಶಿರಹಟ್ಟಿತಾಲೂಕಿನ ಬೆಳ್ಳಟ್ಟಿಗ್ರಾಮದಿಂದ ಮಾಚೇನಹಳ್ಳಿ ಗ್ರಾಮದ ದಾರಿಯಲ್ಲಿ ಬಾವನೂರ ಗ್ರಾಮದ ಶರಣಪ್ಪ ಹೊನಕೇರಿ ಎಂಬುವವರು ದ್ವಿಚಕ್ರ ವಾಹನದಲ್ಲಿ . 6,745 ಮೌಲ್ಯದ 17.280 ಲೀ ಮದ್ಯವನ್ನು ಅಕ್ರಮವಾಗಿ ಸಾಗಿಸುವ ಸಂದರ್ಭದಲ್ಲಿ ಅಬಕಾರಿ ಇಲಾಖೆ ಸಿಬ್ಬಂದಿ ದಾಳಿ ನಡೆಸಿ ಅಕ್ರಮ ಮದ್ಯ ಹಾಗೂ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದು ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಲಾಗಿರುತ್ತದೆ.