ಈಗಿನ ರಾಜಕಾರಣದಲ್ಲಿ ಅನಂತಕುಮಾರ್‌ ಕೊರತೆ ಎದ್ದು ಕಾಣುತ್ತಿದೆ: ನಿತಿನ್‌ ಗಡ್ಕರಿ

By Kannadaprabha News  |  First Published Nov 13, 2021, 6:16 AM IST

*  ಬಿಜೆಪಿ ಬೃಹತ್‌ ಪಕ್ಷವಾಗಿ ಬೆಳೆಯುವಲ್ಲಿ ಅನಂತ ಕುಮಾರ್‌ ಪಾತ್ರ ಅಪಾರ: ಕೇಂದ್ರ ಸಚಿವ
*  3ನೇ ಪುಣ್ಯತಿಥಿಯಲ್ಲಿ ಅಗಲಿದ ನಾಯಕನ ಗುಣಗಾನ
*  ರಾಷ್ಟ್ರಕ್ಕೆ ನೀಡಿದ ಕೊಡುಗೆಗಳ ಸ್ಮರಣೆ
 


ಬೆಂಗಳೂರು(ನ.13):  ಸಾಮಾನ್ಯ ಕಾರ್ಯಕರ್ತರೇ ಪಕ್ಷದ ಶಕ್ತಿ ಎಂದು ನಂಬಿದ್ದ ಕೇಂದ್ರದ ಮಾಜಿ ಸಚಿವ ಅನಂತಕುಮಾರ್‌(Ananth Kumar) ಅಪಾರ ಸಾಮಾಜಿಕ ಕಾಳಜಿಯನ್ನು ಹೊಂದಿದ್ದರು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ(Nitin Gadkari) ಹೇಳಿದ್ದಾರೆ. 

ನಗರದ ಆರ್‌.ವಿ ಶಿಕ್ಷಕರ ಕಾಲೇಜಿನ ಸಭಾಂಗಣದಲ್ಲಿ ದಿವಂಗತ ಅನಂತಕುಮಾರ್‌ ಅವರ 3ನೇ ಪುಣ್ಯತಿಥಿಯ ಸ್ಮರಣಾರ್ಥ ಆಯೋಜಿಸಲಾಗಿದ್ದ ಅನಂತಕುಮಾರ್‌ ಸ್ಮಾರಕ ಉಪನ್ಯಾಸದಲ್ಲಿ ವರ್ಚುಯಲ್‌ ಆಗಿ ಭಾಗವಹಿಸಿ ಅವರು ಮಾತನಾಡಿದರು.

Latest Videos

undefined

"

ವಿಶ್ವದಲ್ಲೇ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷವಾಗಿ ಬಿಜೆಪಿ(BJP) ಬೆಳೆಯುವಲ್ಲಿ ಅನಂತಕುಮಾರ್‌ ಅವರಂತಹ ಸದಸ್ಯರ ಕೊಡುಗೆ ಅಪಾರವಾಗಿದೆ. ಕಳೆದ ಎರಡು ವರ್ಷಗಳಲ್ಲಿ ಅನಂತಕುಮಾರ್‌, ಅರುಣ್‌ ಜೇಟ್ಲಿ(Arun Jaitley) ಹಾಗೂ ಸುಷ್ಮಾ ಸ್ವರಾಜ್‌(Sushma Swaraj) ಅವರಂತಹ ಪ್ರಮುಖರನ್ನು ಕಳೆದುಕೊಂಡು ಪಕ್ಷ ಬಡವಾಗಿದೆ. ಅನಂತಕುಮಾರ್‌ ಅವರಿಗೆ ಇನ್ನು ರಾಜಕಾರಣದಲ್ಲಿ(Politics) ಬಹಳಷ್ಟು ಅವಕಾಶವಿತ್ತು. ಅವರ ಅನಾರೋಗ್ಯದ ಬಗ್ಗೆ ತಿಳಿದುಕೊಳ್ಳುವಲ್ಲಿ ಆದ ತಡದಿಂದಾಗಿ ಅವರನ್ನು ಅಕಾಲಿಕವಾಗಿ ಕಳೆದುಕೊಳ್ಳಬೇಕಾಯಿತು ಎಂದು ದುಃಖ ವ್ಯಕ್ತಪಡಿಸಿದರು.

Ananth kumar hegde;ರಾಜಕೀಯ ಬದ್ಧವೈರಿ ಅಸ್ನೋಟಿಕರ್ ಮನೆಗೆ ದಿಢೀರ್ ಭೇಟಿ ನೀಡಿದ ಹೆಗಡೆ!

ದೇಶದ(India0 ಪ್ರಸಕ್ತ ರಾಜಕಾರಣದಲ್ಲಿ ಅನಂತಕುಮಾರ್‌ ಅವರ ಕೊರತೆ ಎದ್ದು ಕಾಣುತ್ತಿದೆ. ದಕ್ಷಿಣ ಭಾರತದಲ್ಲಿ(South India) ಭಾರತೀಯ ಜನತಾ ಪಕ್ಷದ ಬೆಳವಣಿಗೆಯಲ್ಲಿ ಅನಂತಕುಮಾರ್‌ ಅವರ ಕೊಡುಗೆ ಅಪಾರ. ಅವರು ಕರ್ನಾಟಕ ರಾಜ್ಯದ ಬಿಜೆಪಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನಾವು ಹಲವು ಲೋಕಸಭಾ ಕ್ಷೇತ್ರಗಳಲ್ಲಿ ಗೆಲವು ಸಾಧಿಸಿದೆವು. ಈ ಮೂಲಕ ಭಾರತೀಯ ಜನತಾ ಪಕ್ಷ ದಕ್ಷಿಣ ಭಾರತದಲ್ಲಿ ತನ್ನ ಖಾತೆಯನ್ನು ತೆರೆಯಲು ಸಾಧ್ಯವಾಯಿತು ಎಂದು ಹೇಳಿದರು.

ಸ್ಟಾರ್ಟ್‌ಅಪ್‌ ಮುಂಚೂಣಿ:

ದೇಶದಲ್ಲಿ ಗ್ರೀನ್‌ ಎಕಾನಮಿ(Green Economy) ಬಹಳ ವೇಗವಾಗಿ ಅಭಿವೃದ್ಧಿಗೊಳ್ಳುತ್ತಿದೆ. ಇವಿ ಹಾಗೂ ಗ್ರೀನ್‌ ಹೈಡ್ರೋಜನ್‌ನಂತಹ ಕ್ಷೇತ್ರಗಳಲ್ಲಿ ಬೆಂಗಳೂರು(Bengaluru) ನಗರದ ಸ್ಟಾರ್ಟ್‌ಅಪ್‌ಗಳು ಪ್ರಮುಖ ಸಂಶೋಧನೆಯನ್ನು ಕೈಗೊಂಡಿವೆ. ಕರ್ನಾಟಕ ರಾಜ್ಯದಲ್ಲಿ ಇಥೆನಾಲ್‌ ಉತ್ಪಾದನೆ ಹೆಚ್ಚಾಗಿದೆ. ಫ್ಲೇಕ್ಸ್‌ ಇಂಜಿನ್‌ ಹಾಗೂ ಎಲೆಕ್ಟ್ರಿಕ್‌ ವಾಹನಗಳ ಅಭಿವೃದ್ಧಿಯಲ್ಲಿ ಹಲವಾರು ಸಂಶೋಧನೆಗಳು ನಡೆಯುತ್ತಿವೆ. ಈ ಸಂಶೋಧನೆಗಳಲ್ಲಿ ಬೆಂಗಳೂರು ನಗರದ ಕೊಡುಗೆ ಬಹಳಷ್ಟಿದೆ. ಮುಂಬರುವ ದಿನಗಳಲ್ಲಿ ದೇಶದಲ್ಲಿ ಹಸಿರು ಆರ್ಥಿಕತೆ ಅಭಿವೃದ್ಧಿಯಾಗಲಿದ್ದು, ಬೆಂಗಳೂರು ನಗರದ ಸ್ಟಾರ್ಟ್‌ಅಪ್‌ಗಳು ನೇತೃತ್ವ ವಹಿಸಲಿದೆ ಎಂದರು.

ಎಲೆಕ್ಟ್ರಿಕ್‌ ವಾಹನಗಳ ಕ್ಷೇತ್ರದಲ್ಲಿ ಆಗುತ್ತಿರುವ ಸಂಶೋಧನೆಗಳನ್ನು ನೋಡಿದಲ್ಲಿ ಮುಂದಿನ 5 ವರ್ಷಗಳಲ್ಲಿ ಭಾರತ ದೇಶ ವಿಶ್ವದಲ್ಲೇ ಮೊದಲ ಸ್ಥಾನ ಪಡೆಯುವುದರಲ್ಲಿ ಸಂಶಯವಿಲ್ಲ. ಈ ಕ್ಷೇತ್ರದಲ್ಲೂ ಬೆಂಗಳೂರು ನಗರ ಪ್ರಮುಖ ಪಾತ್ರವಹಿಸಲಿದೆ . ಈಗಾಗಲೇ ಅಂತರಾಷ್ಟ್ರೀಯ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಲಾಗುತ್ತಿದ್ದು ಅದೇ ರೀತಿಯಲ್ಲಿ ಒಳನಾಡು ಜಲಸಾರಿಗೆಗೆ ಮಾರ್ಗಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಹೇಳಿದರು.

JDS ಸ್ಟ್ರಾಂಗ್; ಸಿಎಂ ಬದಲಾವಣೆ ನಂತ್ರ ಅನಂತ್ ಪುತ್ರಿಯ ಒಂದು ಟ್ವೀಟ್ ..ಸಾವಿರ ಪ್ರಶ್ನೆ!

ಅನಂತಕುಮಾರ್‌ ಅವರ ಬಹುದಿನಗಳ ಕನಸಾಗಿದ್ದ ಬೆಂಗಳೂರು ಹೊರ ವರ್ತುಲ ರಸ್ತೆಯ ನಿರ್ಮಾಣದ ಬಗ್ಗೆ ಈಗಾಗಲೇ ಚರ್ಚೆ ನಡೆಸಲಾಗಿದೆ. ಚುನಾವಣೆಯ ನೀತಿ ಸಂಹಿತೆಯ ನಂತರ ಕರ್ನಾಟಕ ರಾಜ್ಯಕ್ಕೆ ಆಗಮಿಸಲಿದ್ದು ಹೊರ ವರ್ತುಲ ರಸ್ತೆಯ ಕಾಮಗಾರಿ ಪ್ರಾರಂಭದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಅದಮ್ಯ ಚೇತನ ಮುಖ್ಯಸ್ಥೆ ಡಾ.ತೇಜಸ್ವಿನಿ ಅನಂತಕುಮಾರ್‌, ಅದಮ್ಯ ಚೇತನ ಸಂಸ್ಥೆಯ ಟ್ರಸ್ಟಿಗಳಾದ ಎಚ್‌.ಎನ್‌ ನಂದಕುಮಾರ್‌, ಪ್ರದೀಪ್‌ ಓಕ್‌ ಸೇರಿದಂತೆ ಹಲವರು ಭಾಗವಹಿಸಿದ್ದರು.

ಪಂಜಿನ ಮೆರವಣಿಗೆ

ಕೇಂದ್ರದ ಮಾಜಿ ಸಚಿವ ಅನಂತ್‌ ಕುಮಾರ್‌ ಅವರ 3ನೇ ಪುಣ್ಯ ತಿಥಿ ಅಂಗವಾಗಿ ಶುಕ್ರವಾರ ಸಂಜೆ ಪಂಜಿನ ಮೆರವಣಿಗೆ ನಡೆಯಿತು. ಅನಂತ ಸ್ಮೃತಿ ನಡಿಗೆ ಪಂಜಿನ ಮೆರವಣಿಗೆಗೆ ಕಂದಾಯ ಸಚಿವ ಆರ್‌.ಅಶೋಕ್‌(R Ashok) ಚಾಲನೆ ನೀಡಿದರು.

ಆರ್‌.ವಿ.ಶಿಕ್ಷಕರ ಕಾಲೇಜು ಆವರಣದಿಂದ ಹೊರಟ ಪಂಜಿನ ಮೆರವಣಿಗೆ, ಲಾಲ್‌ಬಾಗ್‌ ಪಶ್ಚಿಮ ದ್ವಾರ, ವಿ.ವಿ.ಪುರಂ ವೃತ್ತ, ಡಿವಿಜಿ ವೃತ್ತ, ಗಾಂಧಿಬಜಾರ್‌, ಸ್ವಾವಿ ವಿವೇಕಾನಂದ ಪ್ರತಿಮೆ ವರೆಗೂ ಸಾಗಿತ್ತು. ತೇಜಸ್ವಿನಿ ಅನಂತಕುಮಾರ್‌ ಅವರ ನೇತೃತ್ವದಲ್ಲಿ ನೂರಾರು ಮಂದಿ ಅನಂತ ಸ್ಮೃತಿ ನಡಿಗೆ ಪಂಜಿನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
 

click me!