ಲಾಕ್‌ಡೌನ್‌: ಮಂಗಳೂರಿಂದ ನಡೆದು ಹುಬ್ಬಳ್ಳಿಗೆ ಬಂದಿ​ದ್ದ​ವರು ಇಲ್ಲಿಂದರೂ ಕಾಲ್ಕಿತ್ತರು..!

Kannadaprabha News   | Asianet News
Published : May 11, 2020, 07:24 AM ISTUpdated : May 18, 2020, 05:49 PM IST
ಲಾಕ್‌ಡೌನ್‌: ಮಂಗಳೂರಿಂದ ನಡೆದು ಹುಬ್ಬಳ್ಳಿಗೆ ಬಂದಿ​ದ್ದ​ವರು ಇಲ್ಲಿಂದರೂ ಕಾಲ್ಕಿತ್ತರು..!

ಸಾರಾಂಶ

ಮಂಗಳೂರಿನಿಂದ 6 ದಿನಗಳ ಕಾಲ ಕಾಲ್ನಡಿಗೆಯಲ್ಲೇ ಹುಬ್ಬಳ್ಳಿ ಸೇರಿದ್ದ ಕಾರ್ಮಿಕರು| ಕೆಎಸ್‌ಆರ್‌ಟಿಸಿ ಭವನದಲ್ಲಿ 2 ದಿನಗಳ ಕಾಲ ನೆಲೆಸಿದ್ದ ಕೂಲಿ ಕಾರ್ಮಿಕರು| ಮಧ್ಯಪ್ರದೇಶಕ್ಕೆ ತೆರಳಲು ಕಾರ್ಮಿಕ ಇಲಾಖೆಯಿಂದ ಸೇವಾಸಿಂಧು ಅಡಿ ಹೆಸರನ್ನು ನೋಂದಾಯಿಸಿಕೊಳ್ಳಲಾಗಿತ್ತು| ಬಸ್‌ ಮೂಲಕ ತೆರಳಲು ಇ ಪಾಸ್‌ ಒದಗಿಸಲು ಸಿದ್ಧತೆ ನಡೆದಿತ್ತು|

ಹುಬ್ಬಳ್ಳಿ(ಮೇ.11): ಮಂಗಳೂರಿನಿಂದ ನಡೆದುಕೊಂಡು ಹುಬ್ಬಳ್ಳಿಗೆ ಬಂದಿದ್ದ ಮಧ್ಯಪ್ರದೇಶ ಮೂಲದ 39 ಕಾರ್ಮಿಕರು ಇಲ್ಲಿಂದಲೂ ಕಾಲ್ಕಿತ್ತಿದ್ದಾರೆ. ಭಾನುವಾರ ಮಧ್ಯಾಹ್ನ ಇಲ್ಲಿನ ಹೊಸ ಬಸ್‌ ನಿಲ್ದಾಣದಿಂದ ಎಲ್ಲರೂ ನಡಿಗೆಯಲ್ಲಿ ತೆರಳಿದ್ದಾರೆ.

ಮಂಗಳೂರಿನಿಂದ 6 ದಿನಗಳ ಕಾಲ ಕಾಲ್ನಡಿಗೆಯಲ್ಲೇ ಹುಬ್ಬಳ್ಳಿ ಸೇರಿದ್ದ ಇವರು ಕೆಎಸ್‌ಆರ್‌ಟಿಸಿ ಭವನದಲ್ಲಿ 2 ದಿನಗಳ ಕಾಲ ನೆಲೆಸಿದ್ದರು. ಆರೋಗ್ಯ ಇಲಾಖೆ ಸಿಬ್ಬಂದಿ ಎಲ್ಲರ ತಪಾಸಣೆ ಮಾಡಿದರು. ಅಲ್ಲದೇ, ಮಧ್ಯಪ್ರದೇಶಕ್ಕೆ ತೆರಳಲು ಕಾರ್ಮಿಕ ಇಲಾಖೆಯಿಂದ ಸೇವಾಸಿಂಧು ಅಡಿ ಹೆಸರನ್ನು ನೋಂದಾಯಿಸಿಕೊಳ್ಳಲಾಗಿತ್ತು. ಬಸ್‌ ಮೂಲಕ ತೆರಳಲು ಇ ಪಾಸ್‌ ಒದಗಿಸಲು ಸಿದ್ಧತೆ ನಡೆದಿತ್ತು. 

ಹುಬ್ಬಳ್ಳಿ  ಸ್ವಾಮೀಜಿ ಅಸಲಿ ರಹಸ್ಯಗಳೆಲ್ಲ ಬಟಾಬಯಲು,  ಎಣ್ಣೆ-ಗಾಂಜಾ-ಬೆತ್ತಲೆ!

ಪ್ರತಿ ಕಿಮೀಗೆ ಕೆಎಸ್‌ಆರ್‌ಟಿಸಿ 41 ಶುಲ್ಕ ವಿಧಿಸುವುದನ್ನು ತಿಳಿದು ಲಕ್ಷಾಂತರ ರು. ಕೊಡುವಷ್ಟು ನಮ್ಮಲ್ಲಿ ಹಣವಿಲ್ಲ. ದಾನಿಗಳು ಸಹಾಯ ಮಾಡಿದರೆ ಹೋಗುತ್ತೇವೆ ಎಂದಿದ್ದರು. ಈ ನಿಟ್ಟಿನಲ್ಲೂ ಇಲಾಖೆ ಅಧಿಕಾರಿಗಳು ಪ್ರಯತ್ನ ನಡೆಸಿದ್ದರು. ಆದರೆ, ಭಾನುವಾರ ಮಧ್ಯಾಹ್ನ ಏಕಾಏಕಿ ಹುಬ್ಬಳ್ಳಿಯಿಂದ ತೆರಳಿದ್ದಾರೆ. ಹೇಗೆ ಹೋಗುತ್ತೇವೆ ಎಂಬುದನ್ನು ತಿಳಿಸಿಲ್ಲ. ಆದರೆ ನಾವು ಊರಿಗೆ ತೆರಳುತ್ತೇವೆ. ಇಲ್ಲಿರುವುದಿಲ್ಲ ಎಂದು ಹೇಳಿ ಎಲ್ಲರೂ ಹೊರಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC