ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಮಾರ್ಗ ತಪ್ಪಿಸಿಕೊಂಡ ಕಾರ್ಮಿಕರು| ಇಲ್ಲದೇ ಬಳ್ಳಾರಿಯಿಂದ ಮಹಾರಾಷ್ಟ್ರಕ್ಕೆ ಕಾಲ್ನಡಿಗೆ ಮೂಲಕ ತೆರಳುತ್ತಿದ್ದ ಮೂವರು ಕಾರ್ಮಿಕರು| ಮಹಾರಾಷ್ಟ್ರದ ಲೋಕಮಾರ್ ಗ್ರಾಮದ ವಲಸೆ ಕಾರ್ಮಿಕರು|
ರಾಮಮೂರ್ತಿ ನವಲಿ
ಗಂಗಾವತಿ(ಮೇ.11): ಲಾಕ್‌ಡೌನ್ ಹಿನ್ನಲೆಯಲ್ಲಿ ಯಾವುದೇ ವಾಹನಗಳ ಸೌಕರ್ಯ ಇಲ್ಲದೇ ಬಳ್ಳಾರಿಯಿಂದ ಮಹಾರಾಷ್ಟ್ರಕ್ಕೆ ಕಾಲ್ನಡಿಗೆ ಮೂಲಕ ತೆರಳುತ್ತಿದ್ದ ಮೂವರು ಕಾರ್ಮಿಕರು ದಾರಿ ತಪ್ಪಿಸಿಕೊಂಡು ಗಂಗಾವತಿಗೆ ಬಂದ ಘಟನೆ ಇಂದು(ಸೋಮವಾರ) ನಡೆದಿದೆ.
ಬಳ್ಳಾರಿಯಲ್ಲಿ ಕಳೆದ ಮೂರು ತಿಂಗಳಿನಿಂದ ಅಶೋಕ ಕಂಪನಿಯಲ್ಲಿ ರಸ್ತೆ ಮೇಲೆ ಬಿಳೆ ಬಣ್ಣದ ಲೈನಿಂಗ್ ಕೆಲಸದಲ್ಲಿ ತೊಡಗಿದ್ದ ಮಹಾರಾಷ್ಟ್ರದ ಲೋಕಮಾರ್ ಗ್ರಾಮದ ಅಮೋಲ್ ವಸಂತರಾವ್ ಪಾಟೀಲ್, ಗುರು ಸತ್ಯಂ, ಕೃಷ್ಣ ಎಂಬುವರು ತಮ್ಮ ಗ್ರಾಮಕ್ಕೆ ಕಾಲ್ನಡಿಗೆ ಸಂಚರಿಸಿದ್ದಾರೆ.
ಲಾಕ್‌ಡೌನ್ ಎಫೆಕ್ಟ್: ದುಡಿಮೆಯೂ ಇಲ್ಲ, ದುಡ್ಡೂ ಇಲ್ಲ, ಗರ್ಭಕೋಶ ಚಿಕಿತ್ಸೆಗೆ ಬಡ ಮಹಿಳೆಯ ಪರದಾಟ
ಇವರಿಗೆ ಯಾವುದೇ ರೀತಿಯ ವಾಹನ ಸೌಕರ್ಯ ಇಲ್ಲದ ಕಾರಣ ಎರಡು ದಿನಗಳಿಂದ ಕಾಲ್ನಡಿಗೆ ಪ್ರಾರಂಭಿಸಿದ್ದಾರೆ. ಇವರು ನೇರವಾಗಿ ವಿಜಯಪುರ ಮೂಲಕ ಮಹಾರಾಷ್ಟ್ರಕ್ಕೆ ತೆರಳುವ ಬದಲು ರಾಯಚೂರು ಮಾರ್ಗ ಹಿಡಿದು ಗಂಗಾತಿಯಿಂದ 10 ಕಿಮೀ ದಾರಿ ತಪ್ಪಿಸಿ ಕೊಂಡಿದ್ದಾರೆ.
ಇವರಿಗೆ ಪೊಲೀಸರ ಭಯ ಒಂದೆಡೆ ಇದ್ದರೆ, ಇನ್ನೊಂದೆಡೆ ಭಾಷೆಯ ತೊಂದರೆ ಉಂಟಾಗಿದೆ. ಸುಡುಬಿಸಿಲಿನಲ್ಲಿ ಕಾಲ್ನಡಿಗೆಯಿಂದ ಹೋಗುತ್ತಿದ್ದು ಯಾವ ದಿನ ಸ್ವಂತ ಊರು ಮುಟ್ಟುತ್ತೇವೆಯೋ, ಯಾವಾಗ ಮನೆಯ ಕುಟುಂಬ ದವರನ್ನು ಕಾಣುತ್ತೇವೆಯೋ ತಿಳಿಯುತ್ತಿಲ್ಲ ಎಂದು ಕಾರ್ಮಿಕರು ನೋವು ವ್ಯಕ್ತಪಡಿಸಿದ್ದಾರೆ.